ಮೈಸೂರು: ‘ಮೈಸೂರು ಜೆನಿಟೊ ಮೂತ್ರ ಶಸ್ತ್ರಚಿಕಿತ್ಸಕರಸಂಸ್ಥೆಯಿಂದ ಇಲ್ಲಿನ ಜೆಎಸ್ಎಸ್ ಆಸ್ಪತ್ರೆ ರಾಜೇಂದ್ರ ಶತಮಾನೋತ್ಸವ ಭವನದಲ್ಲಿ ಮೇ 23ರಂದು ಮಧ್ಯಾಹ್ನ 12.30ಕ್ಕೆ 7ನೇ ವಾರ್ಷಿಕ ಲೈವ್ ಆಪರೇಟಿವ್ ಕಾರ್ಯಾಗಾರ ‘ಕೆಯುಎ– ಮೈಸೊಗಸ್ ಯುರೊಕಾನ್ 2026’ ಆಯೋಜಿಸಲಾಗಿದೆ’ ಎಂದು ಮೈಸೂರು ಯುರಾಲಜಿ ಅಸೋಸಿಯೇಷನ್ ಅಧ್ಯಕ್ಷ ಡಾ. ಜೆ.ಬಿ.ನರೇಂದ್ರ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ‘ಕಾರ್ಯಾಗಾರದಲ್ಲಿಮೂತ್ರ ಅಸಂಯಮ ಸಮಸ್ಯೆ ಕುರಿತು ತಜ್ಞರು ಮಾಹಿತಿ ನೀಡುವರು. ಮೈಸೂರಿನ ಮಣಿಪಾಲ್ ಆಸ್ಪತ್ರೆಯಿಂದ ಇದರ ಸಂಬಂಧಿತ ಶಸ್ತ್ರಚಿಕಿತ್ಸೆಗಳ ನೇರ ಪ್ರಸಾರ ವೀಕ್ಷಿಸಬಹುದು. ಇನ್ಸ್ಟಿಟ್ಯೂಟ್ ಆಫ್ ನೆಪ್ರೋಯುರಾಲಜಿ ಸಂಸ್ಥಾಪಕ ನಿರ್ದೇಶಕ ಡಾ.ಜಿ.ಕೆ.ವೆಂಕಟೇಶ್ ಅತಿಥಿಯಾಗಿ ಪಾಲ್ಗೊಳ್ಳುವರು. ಮೂತ್ರಶಾಸ್ತ್ರಜ್ಞರು, ಸಂಶೋಧನಾ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 120 ಮಂದಿ ಭಾಗವಹಿಸುವರು’ ಎಂದು ಮಾಹಿತಿ ನೀಡಿದರು.

ಅಸೋಸಿಯೇಷನ್ ಕಾರ್ಯದರ್ಶಿ ಪ್ರಸಾದ್ ಎಚ್.ಎಲ್, ಖಜಾಂಚಿ ಕೆ.ಉಮೇಶ್, ಕರ್ನಾಟಕ ಯುರಾಲಜಿ ಅಸೋಸಿಯೇಷನ್ ಕಾರ್ಯದರ್ಶಿ ಸತೀಶ್ ಧಾರವಾಡಕರ್, ಆಯೋಜಕ ಸಮಿತಿ ಚೇರ್ಮನ್ ಪ್ರಕಾಶ್ ಪ್ರಭು, ಕಾರ್ಯದರ್ಶಿ ಡಾ.ದಿನೇಶ್ಕುಮಾರ್ ಟಿ.ಪಿ. ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-38-1952765564

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.