ಮೈಸೂರು: ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಅಂಗವಾಗಿ ಕರ್ನಾಟಕ ಸೇನಾ ಪಡೆ ವತಿಯಿಂದ ಪ್ರವಾಸಿಗರಿಗೆ ಬುಧವಾರ ಮೈಸೂರ್ ಪಾಕ್ ವಿತರಣೆ ಮಾಡಲಾಯಿತು.

ಅರಮನೆ ವರಾಹ ದ್ವಾರ, ದಕ್ಷಿಣ ದ್ವಾರದ ಮುಂಭಾಗದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಅವರ ಸಾಧನೆಗಳನ್ನು ಸ್ಮರಿಸಲಾಯಿತು.

ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಮಾತನಾಡಿ ‘ಮಹಿಳೆಯರ ಸಬಲೀಕರಣ, ವಿದ್ಯಾಭ್ಯಾಸ, ಶಿಕ್ಷಣ, ಕೃಷಿ, ಕೈಗಾರಿಕಾ ಕ್ಷೇತ್ರಕ್ಕೆ ಅಪಾರ ಉತ್ತೇಜನ ನೀಡಿದ ನಾಲ್ವಡಿ ಅವರು, ರಾಜ್ಯದಲ್ಲಿ ಮತ್ಯಾರು ಮಾಡದಂತಂಹ ಸಾಧನೆ ಮಾಡಿದ್ದಾರೆ. ಅವರು ನೀಡಿದ ಕೊಡುಗೆಗಳಿಗೆ ಅವರ ಹೆಸರುಗಳನ್ನು ಇಟ್ಟುಕೊಂಡಿಲ್ಲ. ಯೋಗ್ಯತೆ ಇದ್ದರೆ ಯೋಗ ತಾನಾಗಿಯೇ ಬರಲಿದೆ ಎಂದು ಬದುಕಿದವರು. ಕನ್ನಡನಾಡು ಮಾತ್ರವಲ್ಲದೆ ದೇಶದಲ್ಲಿ ಅವರ ಹೆಸರು ಅಜರಾಮರ’ ಎಂದರು.

ಎಪಿಎನ್ ಪ್ರಾಪರ್ಟೀಸ್ ಮುಖ್ಯಸ್ಥ ಎ.ಪಿ.ನಾಗೇಶ್, ಸಮಾಜ ಸೇವಕ ರಘುರಾಂ ವಾಜಪೇಯಿ, ಮೈಸೂರು ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ, ಸಮಾಜ ಸೇವಕ ದೊರೆಸ್ವಾಮಿ, ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಕೆ.ಬಿ.ಲಿಂಗರಾಜು, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಸ್ಬಿಎಂ ಮಂಜು, ಲಯನ್ಸ್ ಕ್ಲಬ್ ಆಫ್ ಗೋಲ್ಡನ್ ಸಿಟಿ ಅಧ್ಯಕ್ಷ ಗೋಲ್ಡನ್ ಸುರೇಶ್, ಕರ್ನಾಟಕ ಸೇನಾ ಪಡೆ ಜಿಲ್ಲಾ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-39-1795300724

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.