ಮೈಸೂರು: ‘ಮೈಮುಲ್ನ ನಗರ ಹಾಗೂ ಜಿಲ್ಲಾ ಅಧಿಕೃತ ನಂದಿನಿ ಹಾಲು ಮಾರಾಟಗಾರರು ಮೈಮುಲ್ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದಾಗಿ ಅನೇಕ ಸಮಸ್ಯೆ ಎದುರಿಸುತ್ತಿದ್ದಾರೆ. ಇವುಗಳನ್ನು ಸಂಬಂಧಿಸಿದವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಮೈಸೂರು ನಗರ ಹಾಗೂ ಜಿಲ್ಲಾ ಅಧಿಕೃತ ನಂದಿನಿ ಹಾಲು ಮಾರಾಟಗಾರರ ಸಂಘದ ಅಧ್ಯಕ್ಷ ಕುಮಾರ್ ತಿಳಿಸಿದರು.

ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ನಮ್ಮ ಕೋರಿಕೆಗೆ ತಕ್ಕಂತೆ ಹಾಲು- ಮೊಸರು ಸರಬರಾಜು ಮಾಡುತ್ತಿಲ್ಲ. ಆನ್ಲೈನ್ನಲ್ಲಿ ಅತಿ ಕಡಿಮೆ ಬೆಲೆಗೆ ಹೈನು ಉತ್ಪನ್ನ ಮಾರಾಟ ಮಾಡುತ್ತಿರುವುದರಿಂದಾಗಿ ನಮ್ಮ ವ್ಯಾಪಾರಕ್ಕೆ ಹೊಡೆತ ಬಿದ್ದಿದೆ. ಇದರಿಂದ ತನಗೆ ನಷ್ಟವಾಗುತ್ತದೆ ಎಂಬ ಅರಿವಿದ್ದರೂ ಸರ್ಕಾರ ಅದನ್ನು ನಿರ್ಬಂಧಿಸದಿರುವುದು ವಿಷಾದನೀಯ’ ಎಂದರು.

‘ನಿತ್ಯ ಹಾಲಿನ ವಾಹನ ತಡವಾಗಿ ಬರುತ್ತದೆ. ನಾವು ಸಲ್ಲಿಸಿರುವ ಕೋರಿಕೆಗೆ ಅನುಗುಣವಾಗಿ ಹಾಲು ಸರಬರಾಜು ಮಾಡಬೇಕು. ಕೆಲವೊಂದು ಸಂದರ್ಭದಲ್ಲಿ ಗಾಡಿಯ ಸಾಮರ್ಥ್ಯ ಹೆಚ್ಚುವರಿ ಆಗಿದೆ ಎಂದು ನಾವು ಕೇಳಿದ್ದಕ್ಕಿಂತ ಕಡಿಮೆ ಹಾಲು ಕಳುಹಿಸುತ್ತಾರೆ. ನಮ್ಮ ಲಾಭಾಂಶದಲ್ಲಿ 10 ಪೈಸೆ ಕಡಿತಗೊಳಿಸುತ್ತಿದ್ದು, ಈ ಹಣ ಖಾತೆಗೆ ಜಮೆ ಮಾಡುತ್ತಿಲ್ಲ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಸಮಸ್ಯೆ ಬಗೆಹರಿಯದಿದ್ದರೆ ಮೆಗಾ ಡೈರಿ ಮುಂಭಾಗ ಪ್ರತಿಭಟಿಸುತ್ತೇವೆ’ ಎಂದು ಹೇಳಿದರು.

ಪದಾಧಿಕಾರಿಗಳಾದ ದಿಲೀಪ್ ಕುಮಾರ್, ಸತೀಶ್, ವರಮಹಾಲಕ್ಷ್ಮಿ, ರಮೇಶ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260324-39-1699427171

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.