ನಂಜನಗೂಡು: ‘ಸಮಾಜ ಸನ್ಮಾರ್ಗದಲ್ಲಿ ಸಾಗಲು ಸಾಧು– ಸಂತರು ಹಾಗೂ ಮಹಾತ್ಮರ ಮಾರ್ಗದರ್ಶನ ಅವಶ್ಯ’ ಎಂದು ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಡಿ.ಆರ್. ಪಾಟೀಲ ಹೇಳಿದರು.

ತಾಲ್ಲೂಕಿನ ಸುತ್ತೂರು ಶ್ರೀಕ್ಷೇತ್ರದಲ್ಲಿ ಶಿವರಾತ್ರೀಶ್ವರ ಧಾರ್ಮಿಕ ದತ್ತಿ ಹಾಗೂ ಜೆಎಸ್ಎಸ್ ಮಹಾವಿದ್ಯಾಪೀಠದ ಸಹಯೋಗದಲ್ಲಿ ‘ನಿಜಗುಣ ಶಿವಯೋಗಿಗಳ ವಿವೇಕ ಚಿಂತಾಮಣಿ’ ಕೃತಿಯ ಕುರಿತು ಮಠಾಧಿಪತಿಗಳು, ಮಾತಾಜಿಗಳು, ಆಧ್ಯಾತ್ಮಿಕ ಜಿಜ್ಞಾಸುಗಳು ಹಾಗೂ ಸಾಧಕರಿಗೆ ಏರ್ಪಡಿಸಿರುವ ಅಧ್ಯಯನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಭಾರತೀಯ ಪರಂಪರೆಯಲ್ಲಿ ಸತ್ಪುರುಷರಿಗೆ ವಿಶೇಷ ಸ್ಥಾನವಿದೆ. ಸಮಾಜದ ಅಂಕು–ಡೊಂಕುಗಳನ್ನು ತಿದ್ದುವ ಕಾರ್ಯವನ್ನು ಸಾಧು– ಸಂತರು ಮಾಡುತ್ತಿರುತ್ತಾರೆ’ ಎಂದರು.

ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಮಾತನಾಡಿ, ‘ಮಾನವೀಯ ಮೌಲ್ಯಗಳಿಂದ ಕೂಡಿರುವ ಸಮಾಜವನ್ನು ನಿರ್ಮಿಸಬೇಕು. ಭಾರತೀಯ ಪರಂಪರೆಗೆ ಅತ್ಯುತ್ತಮ ಹಿನ್ನೆಲೆ ಇದ್ದು, ವಿಜ್ಞಾನ ಮತ್ತು ತತ್ವಜ್ಞಾನವನ್ನು ಸಮನ್ವಯಗೊಳಿಸಿಕೊಳ್ಳಬೇಕು’ ಎಂದು ಹೇಳಿದರು.

‘ಶ್ರೀಮಠದ ದಾಸೋಹ ಸೇವೆಯು ಸರ್ವದಿಕ್ಕುಗಳಲ್ಲಿ ಪಸರಿಸಿದೆ. ಅನ್ನ, ಆರೋಗ್ಯ, ಸಂಸ್ಕೃತಿ, ಅಧ್ಯಾತ್ಮ, ವಿದ್ಯೆ, ಜ್ಞಾನ ಹಾಗೂ ಜನ ಜಾಗೃತಿ ಮೊದಲಾದ ಸಾಮಾಜಿಕ, ಧಾರ್ಮಿಕ ಸೇವೆಯನ್ನು ಇಡೀ ನಾಡಿಗೆ ನೀಡುತ್ತಿದೆ. ವಿವೇಕ ಚಿಂತಾಮಣಿ ಗ್ರಂಥವು ವಿಶ್ವಕೋಶವಾಗಿದೆ’ ಎಂದರು.

ಮಾಜಿ ಸಂಸದ ಐ.ಜಿ. ಸನದಿ, ‘ವ್ಯಕ್ತಿಯ ಸಾಮರ್ಥ್ಯವನ್ನು ಸಮಾಜದ ಒಳಿತಿಗಾಗಿ ಬಳಸಬೇಕು. ಸಾರ್ವಜನಿಕ ಜೀವನದಲ್ಲಿ ಪರಿಶುದ್ಧರಾಗಿರಬೇಕು. ಜೀವನ ಸಂಗ್ರಾಮದಲ್ಲಿ ಗೆಲ್ಲಬೇಕಾದರೆ ನಿರ್ಮೋಹಿಗಳಾಗಿರಬೇಕು. ನಿಜಗುಣ ಶಿವಯೋಗಿಗಳು ಮಹಾನ್ ಜ್ಞಾನಿಯಾಗಿದ್ದರು. ಅವರು ಕಾವ್ಯದ ತೆರೆಯ ಮೇಲೆ ನಿಂತು ಆಧ್ಯಾತ್ಮಿಕ ಮುಗಿಲನ್ನು ಮುಟ್ಟಿದವರು’ ಎಂದು ಸ್ಮರಿಸಿದರು.

ನಿವೃತ್ತ ಪ್ರಾಧ್ಯಾಪಕ ಕೆ. ಅನಂತರಾಮು, ‘ಭಾರತೀಯ ಸಂಸ್ಕೃತಿಯು ಋಷಿಮುನಿಗಳಿಂದ ಬೆಳೆದ ಸಂಸ್ಕೃತಿಯಾಗಿದೆ’ಎಂದರು.

ಘೋಡಗೇರಿಯ ಶಿವಾನಂದ ಮಠದ ಮಲ್ಲಯ್ಯ ಸ್ವಾಮೀಜಿ, ‘ಹೂವು ತನ್ನ ಪರಿಮಳವನ್ನು ಜಗತ್ತಿಗೆ ಹರಡುವಂತೆ ನಮ್ಮ ಬದುಕು ಸಮಾಜಕ್ಕೆ ಸಮರ್ಪಣೆಯಾಗಬೇಕು. ವಿವೇಕ ಚಿಂತಾಮಣಿ ಗ್ರಂಥವು ಶ್ರೇಷ್ಠ ಗ್ರಂಥವಾಗಿದ್ದು, ಇದುವರೆಗೆ ಯಾರೂ ಇದರ ಕುರಿತು ವ್ಯಾಖ್ಯಾನ ಗ್ರಂಥವನ್ನು ರಚಿಸಿಲ್ಲ’ ಎಂದು ತಿಳಿಸಿದರು.

ಚಿಲಕವಾಡಿಯ ಗುರುರಾಮಯೋಗೀಶ್ವರ ಮಠದ ಇಮ್ಮಡಿ ಗುರುಲಿಂಗ ಸ್ವಾಮೀಜಿ ಮಾತನಾಡಿದರು.

ಎಸ್. ಶಾಂತಾ ಪ್ರಾರ್ಥಿಸಿದರು. ಕೆ.ಪಿ. ಬಸವರಾಜು ಸ್ವಾಗತಿಸಿದರು.

ಗವಿಯಪ್ಪದೇವರು ವಂದಿಸಿದರು. ಎಸ್. ನಂದೀಶ್ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-38-1772687156

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.