ನಂಜನಗೂಡು: ತಾಲ್ಲೂಕಿನ ಹೆಮ್ಮರಗಾಲ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಭಾನುವಾರ ‘ಗುರುವಂದನೆ ಮತ್ತು ಸ್ನೇಹಸಮ್ಮಿಲನ’ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.

20 ವರ್ಷಗಳ ನಂತರ ಒಂದೆಡೆ ಸೇರಿದ ಹಳೆಯ ವಿದ್ಯಾರ್ಥಿಗಳು, ಶಾಲಾ ದಿನಗಳ ಸವಿನೆನಪುಗಳನ್ನು ಹಂಚಿಕೊಂಡರು. ಇದು ಭಾವನಾತ್ಮಕ ಕ್ಷಣಗಳಿಗೂ ಸಾಕ್ಷಿಯಾಯಿತು.

ಆಗ ಶಿಕ್ಷಕರಾಗಿದ್ದ ಜೈ ಕುಮಾರಸ್ವಾಮಿ(ಜೆಕೆಎಸ್), ಸದಾಶಿವ(ಜಿಸಿಎಸ್) ಬಸವಣ್ಣ(ಬಿಎಂಬಿ), ಕುಮಾರಸ್ವಾಮಿ (ಕೆಎಸ್), ವೆಂಕಟೇಶ್(ವಿಕೆ), ಭೈರವೇಶ್ವರ, ಅಟೆಂಡರ್ ಮಹದೇವು ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ತಮ್ಮ ಶಿಷ್ಯಂದಿರು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವುದನ್ನು ಕಂಡು ಶಿಕ್ಷಕರು ಭಾವುಕರಾದರು.

120 ಮಂದಿ ಹಳೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮಹೇಶ್ ಕೆಬ್ಬೆ, ವಿಕಾಸ್, ಶ್ರುತಿ, ಸೋಮಣ್ಣ, ರವಿಶಂಕರ್ ನಿರ್ವಹಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-38-1185943451

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.