ಮೈಸೂರು: ನಂಜನಗೂಡು ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ವಾಹನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ತಮಿಳುನಾಡಿನ ಈರೋಡ್ ಜಿಲ್ಲೆ ಕೊಂಗಳ್ಳಿ ಪಾಳ್ಯ ನಿವಾಸಿ ನಾರಾಯಣ ಸ್ವಾಮಿ ಮತ್ತು ಮೈಸೂರಿನ ವಿಜಯನಗರ ನಿವಾಸಿ ದರ್ಶನ್ ಬಂಧಿತ ಆರೋಪಿಗಳು.

ನೀಲಕಂಠ ನಗರದ ನಿವಾಸಿ ಮಂಜು ಅವರು 2024ರ ನ.11ರಂದು ಪಟ್ಟಣದ ಗೌತಮ ಬಡಾವಣೆಯಲ್ಲಿನ ಮನೆ ಮುಂದೆ ನಿಲ್ಲಿಸಿದ್ದ ಕಾರು ಕಳವು ಆಗಿರುವ ಬಗ್ಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿ.ಸಿ ಟಿವಿ ಕ್ಯಾಮೆರಾ ದಾಖಲೆ ಹಾಗೂ ಇನ್ನಿತರ ವೈಜ್ಞಾನಿಕ ಸಾಕ್ಷ್ಯಾಧಾರ ಆಧರಿಸಿ ಆರೋಪಿಗಳನ್ನು ಬಂಧಿಸಿ, ಕಾರು ವಶಕ್ಕೆ ಪಡೆದಿದ್ದಾರೆ.

ನಂಜನಗೂಡು ಪಟ್ಟಣ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ರವೀಂದ್ರ ಸಿ.ಎಂ ನೇತೃತ್ವದಲ್ಲಿ, ಪ್ರೊಬೆಷನರಿ ಪಿಎಸ್ಐ ದಿವ್ಯಾಶ್ರೀ, ಎಎಸ್ಐಗಳಾದ ಸತೀಶ್, ಮಹೇಶನ್, ಸಿಎಚ್ಸಿಗಳಾದ ಅಬ್ದುಲ್ ಲತೀಫ್, ಎನ್.ಎ.ಅಶೋಕ. ಭಾಸ್ಕರ್, ಶ್ರೀನಿವಾಸ್.ಎನ್, ಕಾನ್ಸ್ಟೆಬಲ್ಗಳಾದ ಶಿವಕುಮಾರ್.ಯು.ಎಸ್, ಮಹೇಶ್.ವೈ.ಎಂ, ರಾಹುಲ್ ಕಾಂಪ್ಲೆ, ಚಾಲಕ ಕೃಷ್ಣ ಪ್ರಕರಣ ಭೇದಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-51-1990155501

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.