ಮೈಸೂರು: ನಗರದ ನೆಕ್ಸಸ್ ಮಾಲ್ನಲ್ಲಿ ಹಲಸು ಹಾಗೂ ಮಾವಿನ ಹಣ್ಣಿನ ಘಮ ಹರಡಿತು. ರೈತರ ಉತ್ಪನ್ನವು ಹೈಟೆಕ್ ಸ್ಪರ್ಶದೊಂದಿಗೆ ಕಂಗೊಳಿಸಿತು.

ತೋಟಗಾರಿಕೆ ಇಲಾಖೆಯು ಬೆಂಗಳೂರಿನ ಜೈವಿಕ್ ಕೃಷಿಕ್ ಸೊಸೈಟಿ ಸಹಯೋಗದಲ್ಲಿ ಮೂರು ದಿನಗಳವರೆಗೆ ಆಯೋಜಿಸಿರುವ ಮೇಳಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು. ಸಾವಯವ ಮಾವು ಮತ್ತು ಹಲಸು ಹಣ್ಣುಗಳ ಹಬ್ಬವು ವಿವಿಧ ತಳಿಗಳನ್ನು ಪರಿಚಯಿಸುವ ಕೆಲಸವನ್ನು ಇಲಾಖೆ ಈ ಮೂಲಕ ಮಾಡುತ್ತಿದೆ. ಜೈವಿಕ್ ಸೊಸೈಟಿಯು 85 ಬಗೆಯ ಮಾವಿನ ತಳಿಯ ಹಣ್ಣುಗಳನ್ನು ಪ್ರದರ್ಶನಕ್ಕೆ ಇಟ್ಟಿದೆ.

ಸಾವಯವ ವಿಧಾನದಲ್ಲಿ ಬೆಳೆದ ಕಾರಣ ಮುಕ್ತ ಮಾರುಕಟ್ಟೆಗಿಂತ ತುಸು ಹೆಚ್ಚಿನ ದರದಲ್ಲಿ ಹಣ್ಣು, ತರಕಾರಿ ಮಾರಾಟಗೊಂಡವು.

ಚಾಲನೆ: ವನ್ಯಜೀವಿ ಛಾಯಾಗ್ರಾಹಕರಾದ ಕೃಪಾಕರ ಮತ್ತು ಸೇನಾನಿ ಹಾಗೂ ರೈತ ಹೋರಾಟಗಾರ ಹೊನ್ನೂರು ಪ್ರಕಾಶ್ ಮೇಳಕ್ಕೆ ಚಾಲನೆ ನೀಡಿದರು.

ಕೃಪಾಕರ ಮಾತನಾಡಿ, ‘ಜೀವ ವೈವಿಧ್ಯತೆಯು ಈ ಮೇಳದಲ್ಲಿ ಪ್ರಸ್ತುತಗೊಂಡಿದೆ. ರೈತರು ಅವನ್ನು ಕಾಪಾಡುವ ಅಗತ್ಯವಿದೆ. ಪರಿಸರ ಯಾವ ಸ್ಥಿತಿಗೆ ಹೊರಳುತ್ತಿದೆ ಎಂಬುದನ್ನು ಗಮನಿಸಬೇಕು. ಅಲ್ಲಿನ ಬೆಳವಣಿಗೆ ಸಹಜ ಕೃಷಿಯ ಮೇಲೆ ನೇರ ಪರಿಣಾಮ ಬೀರುತ್ತದೆ. ಹೀಗಾಗಿ ಪರಿಸರ ಉಳಿಸಬೇಕು’ ಎಂದು ಆಶಿಸಿದರು.

‘ರೈತರ ವಸ್ತುಗಳು ಬೀದಿಗಳಲ್ಲಿ ಇರುತ್ತವೆ. ಸಮಾಜ ಆತನನ್ನು ಆ ಮಟ್ಟದಲ್ಲಿ ಇಟ್ಟಿದೆ. ದಲ್ಲಾಳಿಗಳ ಬದಲುರೈತನೇ ದರ ನಿಗದಿ ಮಾಡಬೇಕು. ಆತನಿಗೂ ಮಾಲ್ಗಳಲ್ಲಿ ಗೌರವಯುತವಾಗಿ ವ್ಯಾಪಾರದ ಅವಕಾಶ ದೊರೆಯಬೇಕು. ಕೃಷಿಗೂ– ಆರೋಗ್ಯಕ್ಕೂ ಸಂಬಂಧವಿದೆ. ಹೀಗಾಗಿ ರೈತ ಕಾರ್ಪೊರೇಟ್ ಕೃಷಿಯಿಂದ ಹೊರಬಂದು, ಸಹಜ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು. ಗ್ರಾಹಕರು ರೈತರೂ ಜೊತೆಯಾದರೆ ಪರಿಸರ ಉಳಿಯುತ್ತದೆ’ ಎಂದು ಹೊನ್ನೂರು ಪ್ರಕಾಶ್ ಹೇಳಿದರು.

ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರಾದ ಹೇಮಾ, ಮಂಜುನಾಥ ಅಂಗಡಿ, ಜೈವಿಕ್ ಸೊಸೈಟಿ ಗೌರವ ಅಧ್ಯಕ್ಷ ರಾಮಕೃಷ್ಣಪ್ಪ ಪಾಲ್ಗೊಂಡಿದ್ದರು.

ಮೇಳವು ಮೇ 30 ಹಾಗೂ 31ರಂದೂ ಇರಲಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-39-1216181406

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.