ಮೈಸೂರು: ತಾಲ್ಲೂಕಿನ ಗುಡುಮಾದನ ಹಳ್ಳಿಯ 20 ಎಕರೆ ಕೃಷಿ ಭೂಮಿಯಲ್ಲಿ ನಿಮ್ಹಾನ್ಸ್ ಮಾದರಿ ಆಸ್ಪತ್ರೆ ನಿರ್ಮಾಣಕ್ಕೆ ಸರ್ಕಾರ ಮುಂದಾಗಿರುವುದನ್ನು ವಿರೋಧಿಸಿ ನೂರಾರು ರೈತರು, ಮಹಿಳೆಯರು, ಯುವಕರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಪಾದಯಾತ್ರೆ ನಡೆಸಿದರು.

ಗುಡುಮಾದನಹಳ್ಳಿಯಲ್ಲಿ ಜಮಾಯಿಸಿದ ಪ್ರತಿಭಟನಕಾರರು ಕೃಷಿ ಭೂಮಿ ಉಳಿಸಲೇಬೇಕು ಎಂಬ ಆಶಯದೊಂದಿಗೆ ಪಾದಯಾತ್ರೆ ಆರಂಭಿಸಿದರು. ಬಿರು ಬಿಸಿಲಿನ ನಡುವೆ ಜಿಲ್ಲಾ ಪಂಚಾಯಿತಿ ಕಚೇರಿಯವರೆಗೆ ಹೆಜ್ಜೆ ಹಾಕಿದರು. ಪ್ರತಿಭಟನಕಾರರೊಂದಿಗೆ ಹಸುಗಳು ಹಜ್ಜೆ ಹಾಕಿದವು. ‘ನಮ್ಮ ಮೇವು, ನಮ್ಮ ಹಕ್ಕು’ ಎಂಬ ಭಾವನಾತ್ಮಕ ಘೋಷಣಾ ಫಲಕ ಅವುಗಳ ಕೊರಳಲ್ಲಿ ನೇತಾಡುತ್ತಿತ್ತು. ಎತ್ತಿನ ಬಂಡಿಗೆ ಜನರೇ ಹೆಗಲು ಕೊಟ್ಟರು. ಸರ್ಕಾರದ ನೀತಿ ವಿರುದ್ಧ ಘೋಷಣೆ ಮೊಳಗಿದವು.

‘ನಾವು ಅಭಿವೃದ್ಧಿಯ ವಿರೋಧಿ ಗಳಲ್ಲ, ಗುಡುಮಾದನಹಳ್ಳಿ ನಿಮ್ಹಾನ್ಸ್ ಆಸ್ಪತ್ರೆ ನಿರ್ಮಾಣಕ್ಕೆ ಸೂಕ್ತವಲ್ಲ’, ‘ಬಡ ರೈತ ಮಹಿಳೆಯ ಬದುಕನ್ನು ಉಳಿಸಿ’, ‘ಫಲವತ್ತತ್ತೆ ಭೂಮಿಯಲ್ಲಿ ಆಸ್ಪತ್ರೆ ಬೇಡ’, ‘ಹಸಿರೇ ಉಸಿರು’, ‘ಹಸಿರು ಉಳಿದರೆ ಜೀವ ಉಳಿಯುತ್ತದೆ’ ಇತ್ಯಾದಿ ಘೋಷಣಾ ಫಲಕ ಪ್ರದರ್ಶಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ, ದಲಿತ ಸಂಘರ್ಷ ಸಮಿತಿ, ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಪರಿಸರಕ್ಕಾಗಿ ನಾವು ಸಂಘಟನೆಯ ಮುಖಂಡರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

‘ಅಭಿವೃದ್ಧಿಯ ಹೆಸರಿನಲ್ಲಿ ಕೃಷಿ ಭೂಮಿಗಳನ್ನು ನಾಶ ಮಾಡುತ್ತಿರುವುದು ಪರಿಸರ ಮತ್ತು ಆಹಾರ ಭದ್ರತೆಗೆ ಅಪಾಯವಾಗಲಿದೆ’ ಎಂದು ಎಚ್ಚರಿಸಿದರು.

ಆರು ಕಿಲೋ ಮೀಟರ್ ದೂರ ಕಾಲ್ನಡಿಗೆಯಲ್ಲಿ ಬಂದ ರೈತರು ಹಾಗೂ ಸಂಘಟನೆಗಳ ಮುಖಂಡರು ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಸಮಾವೇಶ ಗೊಂಡು ಸರ್ಕಾರಕ್ಕೆ ಹಕ್ಕೊತ್ತಾಯ ಮಂಡಿಸಿದರು.

ಸರ್ಕಾರ ಕೂಡಲೇ ಸ್ಪಂದಿಸದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು. ಜಿಲ್ಲಾ ಪಂಚಾಯಿತಿ ಮುಖ್ಯ ದ್ವಾರದಲ್ಲಿ ಪೊಲೀಸರು ಪ್ರತಿಭಟನಕಾರರನ್ನು ತಡೆದಾಗ ಮಾತಿನ ಚಕಮಕಿ ನಡೆಯಿತು. ಈ ವೇಳೆ ಜೊತೆಗಿದ್ದ ರಾಸುಗಳು ಭಯದಿಂದ ಓಡಾಡಿದವು. ಕ್ಷಣಕಾಲ ಆತಂಕ ಸೃಷ್ಟಿಯಾಯಿತು.

ರೈತ ಸಂಘದ ಹೊಸಕೋಟೆ ಬಸವರಾಜು ಮಾತನಾಡಿ, ‘ಆಸ್ಪತ್ರೆಗೆ ಗುರುತಿಸಿರುವ ಸರ್ವೆ ನಂಬರ್ನಲ್ಲಿ 80 ಕುಟುಂಬಗಳು ಕಳೆದ 70 ವರ್ಷಗಳಿಂದಲೂ ಸ್ವಾಧೀನಾನುಭವ ಹೊಂದಿ ಬೇಸಾಯ ಮಾಡುತ್ತ ಬಂದಿದ್ದು, ವಾರ್ಷಿಕ 2 ಭತ್ತದ ಫಸಲಿನ ಜೊತೆಗೆ ತೆಂಗು ಸೇರಿದಂತೆ ಇತರೆ ತೋಟಗಾರಿಕೆ ಬೆಳೆ ಬೆಳೆಯುತ್ತಿವೆ. 400 ಹಸುಗಳು, 300 ಕುರಿಗಳು, 100 ಮೇಕೆಗಳಿವೆ. ಈ ಸ್ಥಳವು ಜಾನುವಾರಗಳ ಮೇವಿಗೆ ಸೂಕ್ತ ಸ್ಥಳವಾಗಿದೆ. ಸಂಪೂರ್ಣ ನೀರಿನಿಂದ ಆವರಿಸಿರುವ ಭೂಮಿಯು ಕೃಷಿಗೆ ಮಾತ್ರ ಯೋಗ್ಯವಾಗಿದೆ. ಹೀಗಾಗಿ ಇಲ್ಲಿ ಕಟ್ಟಡ ನಿರ್ಮಿಸಿ ತೆರಿಗೆ ಹಣವನ್ನು ವ್ಯರ್ಥ ಮಾಡಬೇಡಿ’ ಎಂದರು.

‘ನಿಮ್ಹಾನ್ಸ್ ಆಸ್ಪತ್ರೆ ನಿರ್ಮಾಣಕ್ಕೆ ಮೈಸೂರು ತಾಲ್ಲೂಕಿನ ಹೊಸಹುಂಡಿ ಗ್ರಾಮದ ಸರ್ವೆ ನಂ 44ರಲ್ಲಿ 48 ಎಕರೆ, ಚೋರನಹಳ್ಳಿ ಸರ್ವೆ ನಂಬರ್ 20ರಲ್ಲಿ 10 ಎಕರೆ, ಹಡಜನ ಗ್ರಾಮದ ಸರ್ವೆ ನಂಬರ್ 149ರಲ್ಲಿ 16 ಎಕರೆ, ವಾಜಮಂಗಲ ಸರ್ವೆ ನಂಬರ್ 96ರಲ್ಲಿ 102 ಎಕರೆ ಸರ್ಕಾರಿ ಜಮೀನಿದೆ. ವರುಣ ಕ್ಷೇತ್ರದ ಇಮ್ಮಾವು ಗ್ರಾಮದಲ್ಲೂ ಜಮೀನಿದೆ. ಇವು ಆಸ್ಪತ್ರೆ ನಿರ್ಮಾಣಕ್ಕೆ ಯೋಗ್ಯ ಸ್ಥಳವಾಗಿದೆ’ ಎಂದು ಹೇಳಿದರು.

ಮುಖ್ಯಮಂತ್ರಿ ಕಾರ್ಯಾಲಯಾದ ಕರ್ತವ್ಯಾಧಿಕಾರಿ ಶಿವಸ್ವಾಮಿ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.

ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಹೊಸಕೋಟೆ ಬಸವರಾಜು, ಪಿ.ಮರಂಕಯ್ಯ, ಮಂಡ ಕಳ್ಳಿ ಮಹೇಶ್, ಚಾಮರಾಜನಗರ ಬೋರೇಗೌಡ, ಮಹಿಳಾ ಘಟಕದ ನೇತ್ರಾ ವತಿ, ತಾಲ್ಲೂಕು ರೈತ ಸಂಘದ ಉಪಾಧ್ಯಕ್ಷ ಜಿ.ಎನ್. ಕುಮಾರ್, ಸಂಯುಕ್ತ ಹೋರಾಟ ಕರ್ನಾಟಕದ ಯಶವಂತ್, ಪರಿಸರವಾದಿ ಪ್ರಶಾಂತ್, ಒಡನಾಡಿ ಸೇವಾ ಸಂಸ್ಥೆಯ ನಿರ್ದೇಶಕ ಪರಶು, ಪರಿಸರಕ್ಕಾಗಿ ನಾವು ಸಂಘಟನೆಯ ಪರುಶುರಾಮೇಗೌಡ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-39-2086006517

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.