ಮೈಸೂರು: ಇಲ್ಲಿನ ರಿಂಗ್ ರಸ್ತೆ ಪಕ್ಕದ ಗುಡಮಾದನಹಳ್ಳಿಯ ಜಾಗವು ನಿಮಾನ್ಸ್ ಆಸ್ಪತ್ರೆ ನಿರ್ಮಾಣಕ್ಕೆ ಸೂಕ್ತವಲ್ಲ. ಸರ್ಕಾರವು ತನ್ನ ನಿರ್ಧಾರ ಬದಲಾಯಿಸಬೇಕು’ ಎಂದು ರಾಜ್ಯ ರೈತ ಸಂಘ, ದಲಿತ ಸಂಘರ್ಷ ಸಮಿತಿ, ಪರಿಸರಕ್ಕಾಗಿ ನಾವು, ಒಡನಾಡಿ, ಜನಪರ ಸಂಘಟನೆಗಳ ಒಕ್ಕೂಟ ಹಾಗೂ ಸರ್ವೋದಯ ಕರ್ನಾಟಕ ಪಕ್ಷವು ಒತ್ತಾಯಿಸಿದೆ.

‘ಕಳೆದ 60 ವರ್ಷಗಳಿಂದ 50ಕ್ಕೂ ಹೆಚ್ಚು ಕುಟುಂಬಗಳ ಜೀವನಾಧಾರವಾಗಿರುವ, ಬೇಸಿಗೆಯಲ್ಲೂ ನೀರಾಡುವ ಈ ಭೂಮಿಯನ್ನು ಸರ್ಕಾರಕ್ಕೆ ಸೇರಿದ್ದು ಎಂಬ ಒಂದೇ ಕಾರಣಕ್ಕೆ ಆಸ್ಪತ್ರೆ ನಿರ್ಮಾಣಕ್ಕೆ ನೀಡುವುದು ಸರಿಯಲ್ಲ. ಯಾವ ಮಾನದಂಡಗಳಿಂದಲೂ ಇದು ಕಟ್ಟಡ ನಿರ್ಮಾಣಕ್ಕೆ ಯೋಗ್ಯ ಜಾಗವಲ್ಲ. ಈ ಸ್ಥಳ ಆಯ್ಕೆ ಮಾಡಿರುವುದೇ ಆಡಳಿತ ನಿರ್ವಹಿಸುವವರ ಸಾಮಾನ್ಯ ಜ್ಞಾನದ ಕೊರತೆಯನ್ನು ಸೂಚಿಸುತ್ತದೆ’ ಎಂದು ಸಂಘಟನೆಗಳ ಪರವಾಗಿ ಮಂಗಳವಾರ ಪತ್ರಿಕಾ ಹೇಳಿಕೆ ನೀಡಿರುವ ಸರ್ವೋದಯ ಕರ್ನಾಟಕದ ಉಗ್ರ ನರಸಿಂಹೇಗೌಡ ದೂರಿದ್ದಾರೆ.

‘ಉದ್ದೇಶಿತ ಸ್ಥಳದಿಂದ 2 ಕೀ.ಮೀ. ದೂರದ ಎತ್ತರದ ಒಣ ಪ್ರದೇಶದಲ್ಲಿ ಆಸ್ಪತ್ರೆ ನಿರ್ಮಿಸಲು ಯೋಜನೆ ರೂಪಿಸುವ ವಿವೇಕದ ತೀರ್ಮಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ತೋರಬೇಕು. ಈ ಬಗ್ಗೆ 2 ತಿಂಗಳಿಂದಲೂ ಹಲವು ಪ್ರತಿಭಟನೆಗಳು ನಡೆಯುತ್ತಿದ್ದು, ಜನಾಭಿಪ್ರಾಯವನ್ನು ಗೌರವಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-38-1035877432

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.