ಮೈಸೂರು: ‘ತಾಲ್ಲೂಕಿನ ಗುಡುಮಾದನಹಳ್ಳಿಯಲ್ಲಿ ನಿಮ್ಹಾನ್ಸ್ ಆಸ್ಪತ್ರೆ ನಿರ್ಮಾಣಕ್ಕೆ ಗುರುತಿಸಿರುವ ಭೂಮಿ ಫಲವತ್ತತೆಯಿಂದ ಕೂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಧಿಕಾರಿಗಳು ತಪ್ಪು ಮಾಹಿತಿ ನೀಡಿ ದಿಕ್ಕು ತಪ್ಪಿಸಿದ್ದಾರೆ. ಯೋಜನೆಗೆ ಬೇರೆಡೆ ಭೂಮಿ ನೀಡಬೇಕು’ ಎಂದು ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಸೂಕ್ತ ಜಾಗವಲ್ಲವೆಂದು ತಿಳಿದಿದ್ದರೂ ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹಟಕ್ಕೆ ಬಿದ್ದು, ರೈತರನ್ನು ಬೀದಿಪಾಲು ಮಾಡುತ್ತಿದ್ದಾರೆ’ ಎಂದು ದೂರಿದರು.

ದಲಿತ ಮುಖಂಡ ಶಂಭುಲಿಂಗಸ್ವಾಮಿ ಮಾತನಾಡಿ, ‘ಗುಡುಮಾದನಹಳ್ಳಿಯಲ್ಲಿ ನೀರಾವರಿ ಇದ್ದು, ಗೋಮಾಳದ ಭೂಮಿ ಕೊಡಲಾಗಿದೆ ಎಂದು ವಾದಿಸುವುದು ಸರಿಯಲ್ಲ. ಇಡೀ ಪರಿಸರ ನಾಶ ಆಗುತ್ತದೆ. ಪರಿಸರಕ್ಕೆ ಹಾನಿ ಮಾಡಬಾರದು. ಜಮೀನನ್ನು ರೈತರಿಗೆ ಮಂಜೂರು ಮಾಡಿ ಅಥವಾ ಗೋಮಾಳವಾಗಿ ಬಿಡಿ’ ಎಂದು ಒತ್ತಾಯಿಸಿದರು.

ಪರಿಸರವಾದಿ ಭಾನು ಪ್ರಕಾಶ್, ಸರ್ವೋದಯ ಕರ್ನಾಟಕ ಮುಖಂಡ ಉಗ್ರನರಸಿಂಹೇಗೌಡ, ಪಿ.ಮರಂಕಯ್ಯ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.