ಮೈಸೂರು: ತಾಲ್ಲೂಕಿನ ಗುಡುಮಾದನಹಳ್ಳಿಯಲ್ಲಿ ನಿಮಾನ್ಸ್ ಆಸ್ಪತ್ರೆ ನಿರ್ಮಾಣಕ್ಕೆ ಗುರುತಿಸಿರುವ ಫಲವತ್ತಾದ ಭೂಮಿ ಉಳಿಸಿಕೊಳ್ಳುವುದಕ್ಕಾಗಿ ನಡೆಯುತ್ತಿರುವ ಹೋರಾಟ ತೀವ್ರಗೊಳಿಸಲು ಸೋಮವಾರ ಹೋರಾಟಗಾರರು ಸಭೆ ನಡೆಸಿದರು.

ರೈತ ಸಂಘದ ಮುಖಂಡ ಹೊಸಕೋಟೆ ಬಸವರಾಜು ಮಾತನಾಡಿ, ‘ಹೋರಾಟವನ್ನು ಬೆಂಬಲಿಸುವ ಸಂಘಟನೆಗಳ ಮುಖಂಡರು ಇಲ್ಲಿನ ವಸ್ತು ಸ್ಥಿತಿಯ ಕುರಿತು ಪತ್ರಿಕಾಗೋಷ್ಠಿಗಳ ಮೂಲಕ ಜನರಿಗೆ ಮಾಹಿತಿ ನೀಡಬೇಕು. ತಜ್ಞರ ಸಮಿತಿ ಮೂಲಕ ಮಣ್ಣಿನ ಫಲವತ್ತತೆ ಪರಿಶೀಲನೆ ಮಾಡಿಸಿ, ಇಲ್ಲಿ ಆಸ್ಪತ್ರೆ ನಿರ್ಮಾಣ ಅಗತ್ಯವೇ ಎಂಬುದನ್ನು ತಿಳಿಯಬೇಕು’ ಎಂದರು.

‘ಗುಡುಮಾದನಹಳ್ಳಿ ಗ್ರಾಮದಲ್ಲಿ ನಿರ್ಮಿಸಲು ಉದ್ದೇಶಿಸಿರುವ ನಿಮ್ಹಾನ್ಸ್ ಆಸ್ಪತ್ರೆಯ ಭೂಮಿಯು ಫಲವತ್ತಾದುದಾಗಿದೆ. ಇದನ್ನು ರೈತರು 70 ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದಾರೆ. ಅಲ್ಲದೆ ಈ ಭೂಮಿಯು ಹಸಿರು ವಲಯವಾಗಿದ್ದು, 5 ಅಂತಸ್ತಿನ ಕಟ್ಟಡ ಕಟ್ಟುವುದಕ್ಕೆ ಸೂಕ್ತವಾದುದಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಅವರಿಗೆ ಮನವರಿಕೆ ಮಾಡಿ ಕೊಡಬೇಕು’ ಎಂದು ಹೇಳಿದರು.

‘ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿಗೆ ಬಂದಾಗ ಅವರನ್ನು ಭೇಟಿಯಾಗಿ ಈ ಯೋಜನೆಯನ್ನು ಪಕ್ಕದಲ್ಲಿರುವ ಹೊಸಹುಂಡಿ, ಚೋರನಹಳ್ಳಿ, ಹಡಜನ, ವಾಜಮಂಗಲ ಗ್ರಾಮಗಳಲ್ಲಿನ ವ್ಯವಸಾಯಕ್ಕೆ ಯೋಗ್ಯವಲ್ಲದ ಸರ್ಕಾರಿ ಭೂಮಿಗೆ ಸ್ಥಳಾಂತರಿಸುವಂತೆ ಹಕ್ಕೊತ್ತಾಯ ಮಂಡಿಸೋಣ. ಅದರ ನಂತರವೂ ಇಲ್ಲಿ ಕಾಮಗಾರಿ ನಡೆಸುವ ಪ್ರಕ್ರಿಯೆ ಮುಂದುವರೆದರೆ ಹೋರಾಟ ತೀವ್ರಗೊಳಿಸೋಣ. ಪಾದಯಾತ್ರೆ ಸಂಘಟಿಸೋಣ’ ಎಂದು ಹೋರಾಟಗಾರರೆಲ್ಲರೂ ನಿರ್ಣಯಿಸಿದರು.

ಒಡನಾಡಿ ಸಂಸ್ಥೆಯ ನಿರ್ದೇಶಕರಾದ ಸ್ಟ್ಯಾನ್ಲಿ ಹಾಗೂ ಪರಶು, ಪ್ರಗತಿಪರ ಹೋರಾಟಗಾರರಾ ಪ್ರೊ.ಕಾಳಚೆನ್ನೇಗೌಡ, ಉಗ್ರನರಸಿಂಹೇಗೌಡ, ಸವಿತಾ ಪ.ಮಲ್ಲೇಶ್, ಪರಿಸರಕ್ಕಾಗಿ ನಾವು ಸಂಸ್ಥೆಯ ಪರಶುರಾಮೇಗೌಡ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-39-1751525261

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.