ಮೈಸೂರು: ನರ್ಸಿಂಗ್ ಸೇವೆಗೆ ಸೇರಿಕೊಂಡಿದ್ದ ಮಹಿಳೆಯನ್ನು ಮನೆ ಕಳವು ಆರೋಪದಲ್ಲಿ ವಿಜಯನಗರ ಪೊಲೀಸರು ಬಂಧಿಸಿದ್ದು, ₹ 22.10 ಲಕ್ಷ ಮೌಲ್ಯದ 170 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಚಾಮರಾಜನಗರ ಮೂಲದ ಮಹೇಶ್ವರಿ (27) ಬಂಧಿತ ಮಹಿಳೆ.

‘ವಿಜಯನಗರ ಒಂದನೇ ಹಂತದಲ್ಲಿರುವ ಮುತ್ತವ್ವ ಅಪ್ಪಣ್ಣ ಎಂಬ ವೃದ್ಧೆ ಮನೆಯಲ್ಲಿ ಏಜೆನ್ಸಿ ಒಂದರ ಮೂಲಕ ಮಹೇಶ್ವರಿ ನರ್ಸಿಂಗ್ ಸೇವೆ ಮಾಡಲು ನಿಯೋಜನೆಗೊಂಡಿದ್ದರು. ಒಂದು ತಿಂಗಳ ಅವಧಿಯಲ್ಲಿ ಹಂತ ಹಂತವಾಗಿ 163 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದಳು. ಚಿನ್ನಾಭರಣ ಕಾಣಿಸದ ಹಿನ್ನೆಲೆಯಲ್ಲಿ ಅನುಮಾನಗೊಂಡ ವೃದ್ಧೆ ಮಹೇಶ್ವರಿ ವಿರುದ್ಧ ದೂರು ದಾಖಲಿಸಿದರು. ನಂತರ ಆಕೆಯನ್ನು ಚಾಮರಾಜನಗರದಲ್ಲಿ ವಶಕ್ಕೆ ಪಡೆಯಲಾಯಿತು. ವಿಚಾರಣೆ ವೇಳೆ ಪಾಂಡವಪುರದ ಮನೆಯಲ್ಲೂ ಇದೇ ಮಾದರಿಯ ಕೃತ್ಯವೆಸಗಿರುವುದು ಗೊತ್ತಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. ಡಿಸಿಪಿ ಸುಂದರ್ ರಾಜ್,ವಿಜಯನಗರ ಎಸಿಪಿ ರವಿಪ್ರಸಾದ್ ಮಾರ್ಗದರ್ಶನದಲ್ಲಿ, ವಿಜಯನಗರ ಇನ್ಸ್ಪೆಕ್ಟರ್ ಎಂ.ಆರ್.ಲವ, ಎಸ್ಐ ಆನಂದ್, ಜೈಕೀರ್ತಿ, ಕೃಷ್ಣ, ವನಜಾಕ್ಷಿ ನೇತೃತ್ವದಲ್ಲಿ ಹೆಡ್ ಕಾನ್ಸ್ಟೆಬಲ್ಗಳಾದ ಶಂಕರ್, ಪ್ರದೀಪ್ ಕುಮಾರ್, ಪ್ರಭಾಕರ್, ವೆಂಕಟೇಶ್, ನಿಂಗರಾಜೇಗೌಡ, ಮಂಜುನಾಥ್, ರಂಜಿತಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-37-1679996834

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.