ಮೈಸೂರು: ಅಕ್ರಮವಾಗಿ ನಿವೇಶನಗಳ ನೋಂದಣಿಗೆ ಯತ್ನಿಸಿದ ಆರೋಪದಲ್ಲಿ ಮೈಸೂರು ಪಶ್ಚಿಮ ಕಚೇರಿಯ ಉಪ ನೋಂದಣಾಧಿಕಾರಿ ಎನ್.ಶ್ರೀಕಾಂತ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ನೋಂದಣಿ ಮಹಾ ಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರು ಗುರುವಾರ ಆದೇಶಿಸಿದ್ದಾರೆ.

2025ರ ಡಿಸೆಂಬರ್ನಲ್ಲಿ ಶ್ರೀಕಾಂತ್ ಅವರು ವಿಧಾನ ಪರಿಷತ್ ಮಾಜಿ ಸದಸ್ಯ ಸಿದ್ದರಾಜು ಅವರಿಗೆ ಸೇರಿದ್ದ ಮೈಸೂರು ಕೇರ್ಗಳ್ಳಿ ಗ್ರಾಮದ 22 ನಿವೇಶನಗಳ ದಸ್ತಾವೇಜುಗಳನ್ನು ಅಕ್ರಮವಾಗಿ ತಿದ್ದುಪಡಿ ಮಾಡಿ, ಕಾನೂನು ಬಾಹಿರವಾಗಿ ನಿವೇಶನಗಳ ಮಾಲೀಕರಲ್ಲದವರನ್ನು ಕೂರಿಸಿ, ನೋಂದಣಿ ಮಾಡಿಸಲು ಪ್ರಯತ್ನಿಸಿದ್ದರು. ನೋಂದಣಿಯ ದಿನಾಂಕ ಪಡೆಯಲು ದಸ್ತಾವೇಜು ಅಪ್ಲೋಡ್ ಮಾಡಿ, ನಿವೇಶನಗಳ ಮಾಲೀಕರ ಆಧಾರ್ ಮತ್ತು ಒಟಿಪಿ ಬಳಸದೆ, ಅವರ ಅರಿವಿಗೆ ಬಾರದಂತೆ ನೋಂದಣಿ ಮಾಡಿಸುವ ಪ್ರಯತ್ನ ನಡೆದಿತ್ತು. ಈ ಬಗ್ಗೆ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಆಂತರಿಕ ತನಿಖೆಯಲ್ಲಿ ಆರೋಪವು ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ, ವಿಚಾರಣೆ ಕಾಯ್ದಿರಿಸಿ ಶ್ರೀಕಾಂತ್ ಅವರನ್ನು ಅಮಾನತುಗೊಳಿಸಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-39-996753136

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.