ಮೈಸೂರು: ಇಲ್ಲಿನ ಉದಯಗಿರಿಯ ಪ್ರಿಯ ಪಾಲಿ ಕ್ಲಿನಿಕ್ನಲ್ಲಿ ಒಕ್ಕಲಿಗ ಯುವ ಬ್ರಿಗೇಡ್ ಸಹಯೋಗದಲ್ಲಿ ಭಾನುವಾರ ಆರೋಗ್ಯ ಉಚಿತ ಶಿಬಿರ ನಡೆಯಿತು.

ಶಿಬಿರ ಉದ್ಘಾಟಿಸಿದ ನಿವೃತ್ತ ಸಹಾಯಕ ಆಯುಕ್ತ ಶಾಂತಮಲ್ಲಪ್ಪ ಮಾತನಾಡಿ, ‘ಒಕ್ಕಲಿಗ ಯುವ ಬ್ರಿಗೇಡ್ ಸದಾ ಸಮಾಜದ ನೊಂದವರ, ರೈತರ ಮತ್ತು ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗಿ ಕೆಲಸ ನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯ’ ಎಂದು ತಿಳಿಸಿದರು.

ಡಾ.ರಾಹುಲ್ ಗೌಡ ನೇತೃತ್ವದಲ್ಲಿ ನಡೆದ ಶಿಬಿರದಲ್ಲಿ ಅರೋಗ್ಯ ಉಚಿತ ಪರೀಕ್ಷೆ ನಡೆಸಿ ಔಷಧಗಳನ್ನು ವಿತರಿಸಲಾಯಿತು.

ಸಮಾಜ ಸೇವಕರಾದ ಜಮೀರ್ ಅಹಮದ್, ಪುಟ್ಟಸ್ವಾಮಿ, ಒಕ್ಕಲಿಗ ಯುವ ಬ್ರಿಗೇಡ್ ಜಿಲ್ಲಾ ಅಧ್ಯಕ್ಷೆ ರೇಖಾ ಗೌಡ, ರಾಜ್ಯ ಸಂಯೋಜಕ ರೋಹಿತ್ ಮತ್ತು ಪದಾಧಿಕಾರಿಗಳಾದ ಹನಸೋಗೆ ಮಂಜು, ಕಿರಣ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-39-1663439946

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.