ಪ್ರೊಫೆಷನಲ್ ಗಾಲ್ಫ್ ಟೂರ್ ಆಫ್ ಇಂಡಿಯಾ (ಪಿಜಿಟಿಐ) ಹಾಗೂ ಜಯಚಾಮರಾಜೇಂದ್ರ ಒಡೆಯರ್ ಗಾಲ್ಫ್ ಕ್ಲಬ್ (ಜೆಡಬ್ಲ್ಯುಜಿಸಿ) ಸಹಯೋಗದಲ್ಲಿ ನಡೆದಿರುವ ಟೂರ್ನಿಯ ಎರಡನೇ ದಿನದಂದು ನೋಯ್ಡದ ಆಟಗಾರ ಅರ್ಜುನ್ ಲೀಡ್ ಪಡೆದರು. ಶೌರ್ಯ ಬಿನು, ಅಕ್ಷಯ್ ಶರ್ಮ ಮತ್ತು ಕಾರ್ತಿಕ್ ಶರ್ಮ ಜಂಟಿ ಎರಡನೇ ಸ್ಥಾನದಲ್ಲಿ ಮುನ್ನಡೆದರು.