ಮೈಸೂರು: ಕೇಂದ್ರ ಬಿಜೆಪಿ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಮಾಡಿರುವುದನ್ನು ಖಂಡಿಸಿ ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಜಿಲ್ಲಾ ಸಮಿತಿ ಸದಸ್ಯರು ಇಲ್ಲಿನ ರಾಮಸ್ವಾಮಿ ವೃತ್ತದಲ್ಲಿ ಗುರುವಾರ ಪ್ರತಿಭಟಿಸಿದರು.

ಎಸ್ಯುಸಿಐಸಿ ಜಿಲ್ಲಾ ಕಾರ್ಯದರ್ಶಿ ಬಿ. ರವಿ, ‘ಪಶ್ಚಿಮ ಏಷ್ಯಾದ ಯುದ್ಧದ ಕಾರಣದಿಂದ ಕಚ್ಚಾ ತೈಲದ ಬೆಲೆ ಏರಿಕೆಯಾಗಿದೆ. ತೈಲ ಕಂಪನಿಗಳು ದರ ಪರಿಷ್ಕರಿಸಿವೆ ಎಂದು ಕೇಂದ್ರ ಸಮರ್ಥನೆ ನೀಡುತ್ತಿದೆ. ಯುದ್ಧ ಆರಂಭವಾದುದು ಫೆ.28ರಂದು, ಪಂಚ ರಾಜ್ಯಗಳ ಚುನಾವಣೆಯ ಫಲಿತಾಂಶ ಬರುವವರೆಗೆ ದರ ಏರಿಕೆಯನ್ನು ಕಂಪನಿಗಳೇ ತಡೆ ಹಿಡಿದವೇ ಎಂಬುದಕ್ಕೆ ಬಿಜೆಪಿಯೇ ಉತ್ತರಿಸಬೇಕು’ ಎಂದು ಆಗ್ರಹಿಸಿದರು.

‘ಅಡುಗೆ ಅನಿಲ, ಸಿಎನ್ಜಿ ದರವನ್ನೂ ಏರಿಸಲಾಗಿದೆ. ಇದರಿಂದಜನರು, ಹೋಟೆಲ್ ಉದ್ಯಮಿಗಳು, ಅಟೊರಿಕ್ಷಾ ಚಾಲಕರು ಸೇರಿದಂತೆ ಎಲ್ಲರಿಗೂ ಹೊರೆಯಾಗಿದೆ. ಕಚ್ಚಾ ತೈಲದ ಬೆಲೆ ಕುಸಿತವಾದಾಗ ಅಥವಾ ರಷ್ಯಾ ದೇಶದಿಂದ ರಿಯಾಯಿತಿ ದರದಲ್ಲಿ ಖರೀದಿಸಿದಾಗ ಅದರ ಪ್ರಯೋಜನವನ್ನು ಜನರಿಗೆ ಕೊಡಲಿಲ್ಲವೇಕೆ?’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಇಂಧನ ಬೆಲೆ ಹೆಚ್ಚಾದರೆ ಪ್ರಯಾಣ, ಸಾರಿಗೆ ವೆಚ್ಚ ಹೆಚ್ಚಳವಾಗಿ ಹಣದುಬ್ಬರಕ್ಕೆ ಕಾರಣವಾಗುತ್ತದೆ. ಜನರ ನೈಜ ಆದಾಯ ಕುಸಿಯುತ್ತಲೇ ಇದೆ. ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲ. ಜನ ಸಂಕಷ್ಟದಲ್ಲಿರುವ ಈ ಪರಿಸ್ಥಿತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ತೆರಿಗೆಗಳನ್ನು ಕಡಿತ ಮಾಡಬೇಕು. ಪರ್ಯಾಯ ತೈಲ ಮೂಲಗಳನ್ನು ಹುಡುಕಬೇಕು’ ಎಂದು ಒತ್ತಾಯಿಸಿದರು.

ಸಂಘಟನೆಯ ಜಿಲ್ಲಾ ಸಮಿತಿಯ ಸದಸ್ಯರಾದ ಎಂ. ಉಮಾದೇವಿ, ಚಂದ್ರಶೇಖರ ಮೇಟಿ, ಪಿ.ಎಸ್.ಸಂಧ್ಯಾ, ಜಿ.ಎಸ್. ಸೀಮಾ, ಯಶೋಧರ್, ಹರೀಶ್, ಸುನಿಲ್, ಸುಮಾ, ಬಸವರಾಜು, ಚಂದ್ರಕಲಾ, ನೀತುಶ್ರೀ, ಪುಷ್ಪಾ, ರಣಜಿತ್, ಪೂರ್ಣಿಮಾ,ನಿತಿನ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-39-808819352

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.