ಮೈಸೂರು: ‘ಮಹನೀಯರ ಚಿಂತನೆ, ಆದರ್ಶಗಳನ್ನು ಜನರು ಪಾಲಿಸಿದಲ್ಲಿ ವಿಶೇಷ ಕಾನೂನುಗಳನ್ನು ರೂಪಿಸುವ ಅಗತ್ಯವಿಲ್ಲ’ ಎಂದು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಉಷಾರಾಣಿ ತಿಳಿಸಿದರು.

ಮೈಸೂರು ವಕೀಲರ ಸಂಘದಿಂದ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ದಾರ್ಶನಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

‘ಶಂಕರಾಚಾರ್ಯರು,ರಾಮಾನುಜಾಚಾರ್ಯ ಹಾಗೂಮಧ್ವಾಚಾರ್ಯರು ಭಾರತೀಯವೇದಾಂತ ತತ್ವಶಾಸ್ತ್ರದ ಪ್ರಮುಖರು. ಇವರ ವಿಚಾರಗಳು ದೇಶದಾದ್ಯಂತ ಸಾವಿರಾರು ಜನರಿಗೆ ದಾರಿದೀಪವಾಯಿತು. ಅವರ ಕೊಡುಗೆಗಳ ಬಗ್ಗೆ ಅರಿವು ಮೂಡಿಸಲು ಜಯಂತಿ ಆಚರಣೆ ಮುಖ್ಯ’ ಎಂದರು.

‘ಇವರ ಕೊಡುಗೆಗಳು ಹಿಂದೂ ಧರ್ಮವನ್ನು ಪುನರುಜ್ಜೀವನಗೊಳಿಸುವಲ್ಲಿ ಮಹತ್ವದ್ದಾಗಿದೆ. ಶಂಕರಾಚಾರ್ಯರು ತತ್ತ್ವಶಾಸ್ತ್ರದಲ್ಲಿ ಜ್ಞಾನದ ಪ್ರಾಧಾನ್ಯತೆಯನ್ನು ಸ್ಥಾಪಿಸಿದರು. ಹಿಂದೂ ಧರ್ಮವನ್ನು ಏಕೀಕರಿಸಿ, ಬೌದ್ಧಾದಿ ಪ್ರಭಾವವನ್ನು ಕಡಿಮೆ ಮಾಡಿದರು. ರಾಮಾನುಜಾಚಾರ್ಯರ ವಿಶಿಷ್ಟಾದ್ವೈತ, ಮಧ್ವಾಚಾರ್ಯರ ದ್ವೈತ ಸಿದ್ಧಾಂತವೂ ಹಿಂದೂ ಧರ್ಮಕ್ಕೆ ವಿಶೇಷ ನೆಲೆಗಟ್ಟನ್ನು ನೀಡಿದೆ’ ಎಂದರು.

ವಕೀಲ ಕೆ.ಆರ್.ನಾಗರಾಜ್, ಆಚಾರ್ಯತ್ರಯರ ತತ್ತ್ವ, ಸಿದ್ಧಾಂತಗಳಿಂದ ಅಂದಿನ ಕಾಲದಲ್ಲಿ ಉಂಟಾದ ಪರಿಣಾಮಗಳು ಹಾಗೂ ಅವುಗಳ ಪ್ರಾಮುಖ್ಯತೆ ಬಗ್ಗೆ ತಿಳಿಸಿದರು.

ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಸ್.ಲೋಕೇಶ್, ಉಪಾಧ್ಯಕ್ಷ ಎಂ.ವಿ.ಚಂದ್ರಶೇಖರ್, ಕಾರ್ಯದರ್ಶಿ ಎ.ಜಿ.ಸುಧೀರ್, ಜಂಟಿ ಕಾರ್ಯದರ್ಶಿ ಚರಣ್ ರಾಜ್, ಖಜಾಂಚಿ ಎಚ್.ಬಿ. ಬಸವರಾಜ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260422-39-1204216885

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.