ಪಿರಿಯಾಪಟ್ಟಣ: ಉಪ್ಪಾರ ಸಮುದಾಯಕ್ಕೆ ತನ್ನದೇ ಇತಿಹಾಸವಿದೆ. ಆದರೆ ಈ ಸಮುದಾಯದ ಅಭಿವೃದ್ಧಿಗೆ ಸಹಕಾರ ಸಿಗುತ್ತಿಲ್ಲ ಎಂದು ನವೋದಯ ಸೇವಾ ಸಂಸ್ಥೆ ಅಧ್ಯಕ್ಷ ಜಿ.ಬಸವನಳ್ಳಿ ನಾರಾಯಣ್ ಬೇಸರಿಸಿದರು.

ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಭಗೀರಥ ಮಹರ್ಷಿಯ ಜಯಂತಿಯಲ್ಲಿ ಮಾತನಾಡಿದರು.

ಭಗೀರಥರ ಛಲ ಮತ್ತು ದೃಢ ನಿಷ್ಠೆ ನಮಗೆಲ್ಲ ಮಾದರಿ. ಮಹರ್ಷಿಯ ಜನ್ಮದಿನ ಆಚರಣೆಯು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಬಾರದು ಎಂದರು.

ಐಟಿಐ ಕಾಲೇಜಿನ ಪ್ರಾಂಶುಪಾಲ ಸೋಮಶೇಖರ್ ಮಾತನಾಡಿ, ‘ಭಗೀರಥರ ತತ್ವ, ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಭಗೀರಥ ಉಪ್ಪಾರ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಪಿ.ಎಸ್. ವಿಷಕಂಠಯ್ಯ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಕೃಷ್ಣೆಗೌಡ ಮಾತನಾಡಿದರು.ಶಿರಸ್ತೇದಾರ್ ಶಕೀಲಾ ಭಾನು, ರೇಷ್ಮೆ ಇಲಾಖಾಧಿಕಾರಿ ಚಂದ್ರೆಗೌಡ, ಸಮಾಜ ಕಲ್ಯಾಣ ಇಲಾಖಾಧಿಕಾರಿ ಚಂದ್ರಶೇಖರ್, ತೋಟಗಾರಿಕೆ ಇಲಾಖಾಧಿಕಾರಿ ಪ್ರಸಾದ್, ಎಂಜಿನಿಯರ್ ದಿನೇಶ್, ಮುಖಂಡರಾದ ಕುಮಾರ್, ಧನಪಾಲ್, ಎಂ.ಜೆ.ಸ್ವಾಮಿ, ಪಿ.ಜೆ.ರವಿ, ಶಂಕರ್, ಗಣೇಶ್, ವೀರಭದ್ರ, ಜಗ ಪಾಲ್, ಲಕ್ಷ್ಮಿನಾರಾಯಣ, ವಿಶ್ವನಾಥ್, ಕೆ. ಮಂಜು, ಸ್ವಾಮಿ, ಶಿವ ಶಂಕರ್, ಲೋಕೇಶ್, ಅರುಣ್ ಕುಮಾರ್, ರಾಮು, ಶಶಿ ಕುಮಾರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-38-1179181556

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.