ಪಿರಿಯಾಪಟ್ಟಣ: ತಾಲ್ಲೂಕಿನ ಸತ್ಯಗಾಲ ಎ ಕಾಲೊನಿ ಯಲ್ಲಿ ಸಾಲ ಭಾದೆಯಿಂದ ನೊಂದು ಕೀಟನಾಶಕ ಸೇವಿಸಿದ್ದ ರೈತ ಸಂಪಂಗಿ (60) ಈಚೆಗೆ ಮೃತಪಟ್ಟರು.

‘ಜಂಟಿ ಖಾತೆಯಲ್ಲಿದ್ದ 5 ಎಕರೆ ಜಮೀನಿನಲ್ಲಿ ತಂಬಾಕು ಹಾಗೂ ಜೋಳ ಬೆಳೆಯುತ್ತಿದ್ದರು, ಇದಕ್ಕಾಗಿ ಮಹಿಳಾ ಸಂಘದಲ್ಲಿ ₹ 2 ಲಕ್ಷ, ಮನೆ ಮೇಲೆ ₹7 ಲಕ್ಷ ಹಾಗೂ ₹4 ಲಕ್ಷ ಕೈಸಾಲ ಮಾಡಿದ್ದರು. ಬೆಳೆ ವಿಫಲವಾಗಿ, ಈ ವರ್ಷ ತಂಬಾಕು ಬೆಲೆ ಕಡಿಮೆಯಾಗಿ ಮನನೊಂದು ಮಾ.18 ರಂದು ಸಂಜೆ ಜಮೀನಿನ ಬಳಿ ಕೀಟನಾಶಕ ಸೇವಿಸಿದ್ದರು. ತಕ್ಷಣ ಅವರನ್ನು ಪಿರಿಯಾಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಾ.23 ರಂದು ಮೃತಪಟ್ಟರು’ ಎಂದು ಮೃತರ ಪತ್ನಿ ತಿಮ್ಮಕ್ಕ ಪಿರಿಯಾಪಟ್ಟಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-51-1182171250

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.