ಮೈಸೂರು: ಐದು ಎಕರೆ ಪಿತ್ರಾರ್ಜಿತ ಆಸ್ತಿ ಉಳಿಸಿಕೊಳ್ಳಲು ಸೋದರ ಅಳಿಯನ ಕೊಲೆ ಮಾಡಲು ಸುಪಾರಿ ನೀಡಿದ ಆರೋಪದಲ್ಲಿ ಮಾವ ಹಾಗೂ ಕೃತ್ಯ ನಡೆಸಿದ ಆರು ಮಂದಿಯನ್ನು ಪಿರಿಯಾಪಟ್ಟಣ ಠಾಣೆ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.

ಕೊಲೆಗೆ ಸುಪಾರಿ ನೀಡಿದ ಆರೋಪದಲ್ಲಿ ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದ ಪುರದ ನಿವಾಸಿ ರಾಜು ಅಲಿಯಸ್ ಸೌದೆ ರಾಜು, ಕೃತ್ಯ ನಡೆಸಿದ ಸುಳ್ಯ ತಾಲ್ಲೂಕಿನ ಕೆ.ಪಿ.ಶಫಿ, ಪಿರಿಯಾಪಟ್ಟಣದ ಮೀರ್ ಹುಸೇನ್ ಅಲಿ, ಹುಣಸೂರಿನ ನಯಾಜ್ ಅಹ್ಮದ್, ಮೈಸೂರಿನ ಹಬೀದ್ ಪಾಷ, ಅಯಾಜ್ ಪಾಷ, ಅಮೀನುಲ್ಲಾ ಬಂಧಿತರು.

‘ಮರದ ವ್ಯಾಪಾರಿಯಾಗಿದ್ದ ರಾಜು ಪಿತ್ರಾರ್ಜಿತ ಆಸ್ತಿಗಾಗಿ ತನ್ನ ತಂಗಿಯ ಮಗ ಪ್ರವೀಣ್ ಕುಮಾರ್ ಹತ್ಯೆಗೆ ದುಷ್ಕರ್ಮಿಗಳಿಗೆ ಸುಪಾರಿ ನೀಡಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ರಾಜು ಬಳಿ ಇರುವ ಆಸ್ತಿಯಲ್ಲಿ ತಮಗೂ ಪಾಲು ಬರಬೇಕೆಂದು ಪ್ರವೀಣ್ ಕುಮಾರ್ ಅವರು ತಾಯಿಯ ಪರವಾಗಿ ಕೋರ್ಟ್ ಮೊರೆ ಹೋಗಿದ್ದರು. ಆದರೆ ಆರೋಪಿ ಆಸ್ತಿಯಲ್ಲಿ ಪಾಲು ಕೊಡಲು ಒಪ್ಪದೆ ತಗಾದೆ ತೆಗೆದಿದ್ದರು. ಆಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳಲು ಅಳಿಯನನ್ನು ಕೊಲೆ ಮಾಡಿಸಲು ನಿರ್ಧರಿಸಿದ್ದರು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.

‘ಸುಳ್ಯದ ಶಫಿ ಎಂಬಾತನಿಗೆ ವರ್ಷದ ಹಿಂದೆ ₹ 7 ಲಕ್ಷ ಸುಪಾರಿ ನೀಡಿ ಅಪಘಾತ ಮಾಡಿಸಿ ಪ್ರವೀಣ್ನ್ನು ಕೊಲೆ ಮಾಡಲು ಯತ್ನಿಸಿದ್ದರು. ಆದರೆ ಅವರು ಪ್ರಾಣಾಪಾಯದಿಂದ ಪಾರಾಗಿದ್ದರು’ ಎಂದರು.

‘ಘಟನೆ ಸಂಬಂಧ ಗಾಯಾಳು ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡ ಪಿರಿಯಾಪಟ್ಟಣ ಪೊಲೀಸರು, ಪ್ರವೀಣ್ ಕುಮಾರ್ ಅವರ ಸೋದರ ಮಾವ ಸೌದೆ ರಾಜುವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸುಪಾರಿ ನೀಡಿರುವುದು ಬೆಳಕಿಗೆ ಬಂದಿದೆ. ರಸ್ತೆ ಅಪಘಾತದ ಮೂಲಕ ಅಳಿಯನನ್ನು ಸಾಯಿಸಲು ಸಾಧ್ಯವಾಗದಿದ್ದಾಗ, ಆಸ್ತಿ ಉಳಿಸಿಕೊಳ್ಳಲೇಬೇಕೆಂಬ ಉದ್ದೇಶದಿಂದ ₹ 30 ಲಕ್ಷ ನೀಡಿ ಮೈಸೂರಿನ ರೌಡಿ ಶೀಟರ್ಗಳನ್ನು ಸಂಪರ್ಕಿಸಿ ಕೊಲೆಗೆ ಮಾಸ್ಟರ್ ಪ್ಲಾನ್ ಮಾಡಿದ್ದಾನೆ’ ಎಂದು ಮಾಹಿತಿ ನೀಡಿದರು.

ಕಾರ್ಯಾಚರಣೆಯಲ್ಲಿ ಪಿರಿಯಾಪಟ್ಟಣ ಠಾಣೆ ಇನ್ಸ್ಪೆಕ್ಟರ್ ಎಂ.ವಿ.ಗೋವಿಂದ ರಾಜು, ಎಸ್ಐಗಳಾದ ಬಿ.ಎಚ್.ಜಗದೀಶ್, ಬೈಲಕುಪ್ಪೆ ಸರ್ಕಲ್ ಇನ್ಸ್ಪ್ಟೆರ್ ಎಂ.ಕೆ.ದೀಪಕ್, ಬೆಟ್ಟದಪುರ ಎಸ್ಐ ಡಿ.ಎನ್.ಅಜಯ್ ಕುಮಾರ್, ಎಸ್ಐ ರವಿಕುಮಾರ್, ಸಿಬ್ಬಂದಿ ಪಾಲ್ಗೊಂಡಿದ್ದರು

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-38-1116014963

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.