ಮೈಸೂರು: ‘ಅಳಿವಿನ ಅಂಚಿನಲ್ಲಿರುವ ಅಮೂಲ್ಯ ಸಸ್ಯ ಸಂಪತ್ತಿನ ರಕ್ಷಣೆ ಆಗಬೇಕಿದೆ’ ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಅಧ್ಯಕ್ಷ ಎ.ಎಚ್.ರಾಜಸಾಬ್ ಹೇಳಿದರು.

ಇಲ್ಲಿನ ಮಾನಸಗಂಗೋತ್ರಿಯ ಸಸ್ಯವಿಜ್ಞಾನ ಅಧ್ಯಯನ ವಿಭಾಗ, ಬೊಟಾನಿಕಲ್ ಸೊಸೈಟಿ ಹಾಗೂ ಹಿರಿಯ ವಿದ್ಯಾರ್ಥಿಗಳ ಸಂಘವು ಶನಿವಾರ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಭಾರತ ಔಷಧೀಯ ಸಸ್ಯಗಳ ತವರು. ನಮ್ಮಲ್ಲಿ ಪರಂಪರಾನುಗತವಾಗಿ ಆಯುರ್ವೇದ ಸೇರಿದಂತೆ ಹಲವು ಪದ್ಧತಿಗಳು ನಡೆದುಬಂದಿವೆ. ಆದರೆ, ಈಗಿನ ಹೆಚ್ಚಿನವರಿಗೆ ಅಮೂಲ್ಯ ಸಸ್ಯಗಳ ಕುರಿತು ಅರಿವಿನ ಕೊರತೆ ಇದೆ. ಹೀಗಾಗಿ ಔಷಧ ಸಸ್ಯಗಳ ಸಂಪತ್ತು ನಶಿಸುವ ಹಂತದಲ್ಲಿದೆ’ ಎಂದು ವಿಷಾದಿಸಿದರು.

‘ದೇಶದಲ್ಲಿ ಹಸಿರು ಕ್ರಾಂತಿಯ ಮೂಲಕ ಹಸಿರು, ಬಡತನ ನೀಗಿಸಲು ಸಸ್ಯವಿಜ್ಞಾನ ಕ್ಷೇತ್ರವು ಮಹತ್ವದ ಕೊಡುಗೆ ನೀಡಿದೆ. ಇದೊಂದು ವಿಸ್ತಾರವಾದ ಕ್ಷೇತ್ರ. ಇಲ್ಲಿ ನಿರಂತರ ಸಂಶೋಧನೆಗಳು ನಡೆದು, ಅವು ಸಮಾಜದ ಒಳಿತಿಗೆ ಬಳಕೆ ಆಗಬೇಕು’ ಎಂದು ಆಶಿಸಿದರು.

ಸಸ್ಯವಿಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಎಚ್.ಖರ್ ಶೆಟ್ಟಿ, ‘ಬದಲಾದ ತಂತ್ರಜ್ಞಾನದ ವೇಗಕ್ಕೆ ತಕ್ಕಂತೆ ನಮ್ಮ ಕಲಿಕೆಯ ಪದ್ಧತಿ ಹಾಗೂ ಸಂಶೋಧನೆಗಳು ಬದಲಾಗಬೇಕು. ಸಮಾಜಕ್ಕೆ ಪೂರಕವಾದ ಅಧ್ಯಯನಗಳಿಗೆ ಆದ್ಯತೆ ನೀಡಬೇಕು’ ಎಂದು ಕಿವಿಮಾತು ಹೇಳಿದರು.

ಸಸ್ಯವಿಜ್ಞಾನ ವಿಭಾಗದ ಅಧ್ಯಕ್ಷೆ ಎಂ.ಎಸ್.ನಳಿನಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕ ಜಿ.ಆರ್.ಜನಾರ್ಧನ, ಎನ್ಬಿಆರ್ಐ ಮಾಜಿ ನಿರ್ದೇಶಕ ಆರ್.ರಾಘವೇಂದ್ರ ರಾವ್, ಬೊಟಾನಿಕಲ್ ಸರ್ವೇ ಆಫ್ ಇಂಡಿಯಾದ ಮಾಜಿ ನಿರ್ದೇಶಕ ಎಂ.ಸಂಜಪ್ಪ, ದೆಹಲಿ ವಿಶ್ವವಿದ್ಯಾಲಯದ ಸಸ್ಯವಿಜ್ಞಾನ ವಿಭಾಗದ ಮಾಜಿ ಮುಖ್ಯಸ್ಥ ಕೆ.ಆರ್.ಶಿವಣ್ಣ ಬೊಟಾನಿಕಲ್ ಸೊಸೈಟಿ ಅಧ್ಯಕ್ಷ ರಾಜಕುಮಾರ್ ಗರಂಪಲ್ಲಿ, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಕೆ.ಎನ್.ಅಮೃತೇಶ್ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-39-1936916171

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.