ಮೈಸೂರು: ಇಲ್ಲಿನ ನಜರಾಬಾದ್ನ ಕರ್ನಾಟಕ ಪೊಲೀಸ್ ಅಕಾಡೆಮಿಯ ಕವಾಯತು ಮೈದಾನದಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪ್ರಶಿಕ್ಷಣಾರ್ಥಿಗಳ ಪಥಸಂಚಲನ ಭಾನುವಾರ ನಡೆಯಿತು.

ಪರೇಡ್ ಕಮಾಂಡರ್ ಅನಿಲ್ಕುಮಾರ್ ತಿಪ್ಪಣ್ಣನವರ ಹಾಗೂ ಜಿ.ಶಾಂಭವಿ ನೇತೃತ್ವದಲ್ಲಿ ನಡೆದ 46ನೇ ತಂಡದ 327 ಪ್ರೊಬೆಷನರಿ ಎಸ್ಐಗಳ ಪಥಸಂಚಲನ ಪ್ರೇಕ್ಷಕರ ಮನಸೂರೆಗೊಂಡಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ.ಪರಮೇಶ್ವರ, ಪೊಲೀಸ್ ಮಹಾನಿರ್ದೇಶಕ ಎಂ.ಎ.ಸಲೀಂ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ದೇವಜ್ಯೋತಿ ರೇ ಅವರು ಗೌರವವಂದನೆ ಸ್ವೀಕರಿಸಿದರು.

ಸರ್ವೋತ್ತಮ ಮಹಿಳಾ ಪ್ರಶಿಕ್ಷಣಾರ್ಥಿಯಾಗಿ ಚಿತ್ರದುರ್ಗದ ಜಿ.ಶಾಂಭವಿ ಅವರು ಗೃಹ ಸಚಿವರ ಕಪ್, ಗರುಡಾಚಾರ್ ನಗದು ಬಹುಮಾನ ಪಡೆದರೆ, ಉತ್ತಮ ರೈಫಲ್ ಫೈರಿಂಗ್ಗಾಗಿ ಮೈಸೂರಿನ ಸಿ.ಕೆ.ದಶರಥ, ಉತ್ತಮ ರಿವಾಲ್ವರ್ ಫೈರಿಂಗ್ಗಾಗಿ ಬೆಂಗಳೂರಿನ ಎಲ್.ಕೆ.ಶ್ರೀಧರ್, ಅತ್ಯುತ್ತಮ ಹೊರಾಂಗಣ ಪ್ರಶಿಕ್ಷಣಾರ್ಥಿಯಾದ ಹಾಸನದ ಎಂ.ಸುನಿಲ್ ಅವರಿಗೆ ಡಿಜಿ ಮತ್ತು ಐಜಿಪಿ ಕಪ್ ದೊರೆಯಿತು.

‘ಪೊಲೀಸರು ಎಷ್ಟೇ ಕಷ್ಟವಿದ್ದರೂ ಯಾರೊಂದಿಗೂ ರಾಜಿ ಆಗದೇ ನ್ಯಾಯ ವಿತರಣೆ ಮಾಡಬೇಕು. ಸಂವಿಧಾನದ ಆಶಯ ಎತ್ತಿ ಹಿಡಿಯಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-44-1016414537

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.