ಮೈಸೂರು: ‘ಜಿಲ್ಲಾ ವ್ಯಾಪ್ತಿಗೆ ಒಳಪಡುವ ಪೊಲೀಸ್ ಠಾಣೆಗಳಲ್ಲಿ ಸಿಇಐಆರ್ ಪೋರ್ಟಲ್ ಮೂಲಕ ಸಲ್ಲಿಸಿದ ದೂರು ಆಧರಿಸಿ ಮೇ ತಿಂಗಳಲ್ಲಿ 173 ಮೊಬೈಲ್ ಫೋನ್ ಪತ್ತೆ ಹಚ್ಚಲಾಗಿದೆ’ ಎಂದು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.

ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಒಟ್ಟು 263 ದೂರು ದಾಖಲಾಗಿತ್ತು. ಸೈಬರ್ ಕ್ರೈಂ ಪೊಲೀಸ್ ಠಾಣೆಯ ಡಿವೈಎಸ್ಪಿ ಆರ್. ಶ್ರೀಕಾಂತ್ ನೇತೃತ್ವದ ತಂಡ ಈವರೆಗೆ ವಿವಿಧ ಕಂಪನಿಯ ₹ 35 ಲಕ್ಷ ಬೆಲೆ ಬಾಳುವ ಒಟ್ಟು 173 ಮೊಬೈಲ್ ಫೋನ್ ಪತ್ತೆ ಮಾಡಿದೆ’ ಎಂದು ಮಾಹಿತಿ ನೀಡಿದರು.

‘ಜಿಲ್ಲೆಯಲ್ಲಿ 2024ನೇ ಸಾಲಿನಲ್ಲಿ 2, 475 ಮೊಬೈಲ್ ಫೋನ್ ಕಳ್ಳತನವಾಗಿದ್ದು, 300 ಪತ್ತೆಯಾಗಿವೆ. 2025ರಲ್ಲಿ 2,530 ಮೊಬೈಲ್ ಕಳವಾಗಿದ್ದು, 372 ಪತ್ತೆ ಹಚ್ಚಲಾಗಿದೆ. 2026ರಲ್ಲಿ ಇದುವರೆಗೆ 1,075 ಮೊಬೈಲ್ ಫೋನ್ ಕಳವಾಗಿದ್ದು, ಈ ಪೈಕಿ 445 ಮೊಬೈಲ್ ಯಾರು ಬಳಸುತ್ತಿದ್ದಾರೆಂದು ಪತ್ತೆ ಹಚ್ಚಿ, 283 ಮೊಬೈಲ್ ಫೋನನ್ನು ವಶಕ್ಕೆ ಪಡೆಯಲಾಗಿದೆ’ ಎಂದರು.

‘ಹುಣಸೂರಿನ ಚಿನ್ನದಂಗಡಿಯಲ್ಲಿ ನಡೆದಿದ್ದ ಚಿನ್ನ ದರೋಡೆ ಪ್ರಕರಣದ ಪ್ರಮುಖ ಆರೋಪಿ ಪಾಲುಸಿಂಗ್ ನೇಪಾಳದಲ್ಲಿ ತಲೆ ಮರೆಸಿಕೊಂಡಿರುವ ಮಾಹಿತಿ ಇದೆ. ನೇಪಾಳ–ಭಾರತದ ಗಡಿಯಲ್ಲಿ ಸಂಚರಿಸುತ್ತಿರುವುದಾಗಿಗೊತ್ತಾಗಿದ್ದು, ಆತ ಸಿಗದ ಕಾರಣ ದರೋಡೆಯಾಗಿರುವ ಚಿನ್ನ ಏನಾಗಿದೆ ಎಂಬುದು ತಿಳಿದಿಲ್ಲ. ಆತನ ಸೆರೆಗೆ ಕಾರ್ಯಾಚರಣೆ ಮುಂದುವರಿದಿದೆ’ ಎಂದು ಹೇಳಿದರು.

ನುಸುಳುಕೋರರು ಮೇಲೆ ನಿಗಾ: ‘ಬಾಂಗ್ಲಾ ನುಸುಳುಕೋರರು ಮೈಸೂರು ಜಿಲ್ಲೆ ಪ್ರವೇಶಿಸದಂತೆ ನಿಗಾ ವಹಿಸಲಾಗಿದೆ. ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಿಂದ ಬರುತ್ತಿರುವ ವಲಸೆ ಕಾರ್ಮಿಕರ ಮೇಲೆ ತೀವ್ರ ನಿಗಾ ವಹಿಸಿದ್ದು, ನಂಜನಗೂಡು ತಾಲ್ಲೂಕಿನ ಕೈಗಾರಿಕಾ ಪ್ರದೇಶ ಸೇರಿದಂತೆ ವಿವಿಧ ಕೈಗಾರಿಕಾ ಪ್ರದೇಶಗಳಲ್ಲಿ ಪರಿಶೀಲಿಸಿದ್ದು, ಅವರ ಪೂರ್ವಜರ ಮಾಹಿತಿ ಸಂಗ್ರಹಿಸಲಾಗುತ್ತಿದೆ’ ಎಂದು ತಿಳಿಸಿದರು.

ಮೊಬೈಲ್ ಫೋನ್ ಹಾಗೂ ಆರೋಪಿಗಳ ಪತ್ತೆ ಕಾರ್ಯದಲ್ಲಿ ಎಡಿಎಸ್ಪಿ ಸಿ. ಮಲ್ಲಿಕ್, ಎಲ್. ನಾಗೇಶ್ ಮಾರ್ಗದರ್ಶನದಲ್ಲಿ ಸೈಬರ್ ಕ್ರೈಂ ಠಾಣೆಯ ಡಿವೈಎಸ್ಪಿ ಆರ್. ಶ್ರೀಕಾಂತ್, ಇನ್ಸ್ಪೆಕ್ಟರ್ ಎಸ್.ಪಿ. ಸುನಿಲ್, ಎಸ್ಐ ಆರ್. ಲಕ್ಷ್ಮಿ, ಸಿಬ್ಬಂದಿ ಎಸ್. ಮಂಜುನಾಥ, ಎಚ್.ವಿ. ರಂಗಸ್ವಾಮಿ, ಜಿ.ಎಸ್. ಅಭಿಷೇಕ್, ಸಿ.ಎನ್. ಮಹೇಶ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-39-395383364

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.