ಮೈಸೂರು: ‘ಪೊಲೀಸ್ ಇಲಾಖೆಯ ಕಡೆ ಬೆರಳು ತೋರಿಸಿ ಮಾತನಾಡುವವರೇ ಜಾಸ್ತಿ. ಪೊಲೀಸರ ಕರ್ತವ್ಯವನ್ನು, ಅವರ ಸೇವೆಯನ್ನು ಗುರುತಿಸಿ ಮಾತನಾಡಿದಾಗ ನಮಗೂ ಪ್ರೋತ್ಸಾಹ ದೊರೆಯುತ್ತದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿದರು.

ನಗರದ ವಿಂಡ್ ಚೀಮ್ಸ್ ಸಭಾಂಗಣದಲ್ಲಿ ಮೈಸೂರು ರೌಂಡ್ ಟೇಬಲ್-21 ಮತ್ತು ಮೈಸೂರು ಲೇಡಿಸ್ ಸರ್ಕಲ್- 9ರ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ‘ನೈಟ್ಸ್ ಇನ್ ಖಾಕಿ’ ಪ್ರಶಸ್ತಿ ಪ್ರದಾನ ಉದ್ಘಾಟಿಸಿ ಮಾತನಾಡಿದರು.

‘ಪೊಲೀಸರು ಯಾವ ಹೊತ್ತಿನಲ್ಲೂ ಕರ್ತವ್ಯದ ಕರೆ ಬಂದಾಗ ಸನ್ನದ್ಧರಾಗಿ ಬರುತ್ತಾರೆ. ಆದ್ದರಿಂದ ಈ ಸೇವೆಯನ್ನು ಗುರುತಿಸಿ ಸನ್ಮಾನ ಮಾಡಿದರೆ ಮುಂದೆ ಇನ್ನೂ ಉತ್ತಮವಾಗಿ ಕೆಲಸ ಮಾಡಲು ಸ್ಫೂರ್ತಿ ದೊರೆಯುತ್ತದೆ. ಎಲ್ಲ ಧರ್ಮದವರು ಅವರವರ ಧರ್ಮದ ಹಬ್ಬಗಳನ್ನು, ಆಚರಣೆಗಳನ್ನು ಸಂಭ್ರಮದಿಂದ ಆಚರಣೆ ಮಾಡುತ್ತಾರೆ. ಆ ಸಮಯದಲ್ಲಿ ಪೊಲೀಸರು ಬಂದೋಬಸ್ತ್ ಕಾರ್ಯ, ಸಂಚಾರ ನಿರ್ವಹಣೆ ಕೆಲಸ ಮಾಡುತ್ತಾರೆ. ವೈಯಕ್ತಿಕ ಜೀವನವನ್ನು ಬದಿಗಿರಿಸಿ ಅವರು ಇಲಾಖೆಯಲ್ಲಿ ಕರ್ತವ್ಯ ಪಾಲನೆ ಮಾಡುತ್ತಾರೆ’ ಎಂದರು.

ಡಿಸಿಪಿ ಕೆ.ಎಸ್. ಸುಂದರ್ ರಾಜ್ ಮಾತನಾಡಿ, ‘ಪ್ರಶಸ್ತಿಗಳು ಜವಾಬ್ದಾರಿಯನ್ನು ಇನ್ನು ಹೆಚ್ಚಿಸುತ್ತವೆ. ಇನ್ನೂ ಮುಂದೆ ಪ್ರಶಸ್ತಿ ಪಡೆದವರು ಮೈಯಲ್ಲ ಕಣ್ಣಾಗಿ ಕೆಲಸ ಮಾಡಬೇಕು. ಹಲವು ಬಾರಿ ಆಲೋಚನೆ ಮಾಡಿ ಮುಂದೆ ಹೆಜ್ಜೆ ಇಡಬೇಕು’ ಎಂದು ಹೇಳಿದರು.

ಪೊಲೀಸ್ ಸಿಬ್ಬಂದಿ ಎನ್.ಮಹೇಶ್, ಎ.ಬಾಲಸುಬ್ರಹ್ಮಣ್ಯ, ಲಿಂಗರಾಜಪ್ಪ, ಕೆ.ಜೆ.ಸುರೇಶ್, ಕೆ.ಅಜ್ರಾ, ವನಜಾಕ್ಷಿ, ಎಂ.ಡಿ.ಪ್ರದೀಪ್, ಎ.ಎನ್.ಲೋಕೇಶ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ರೌಂಡ್ ಟೇಬಲ್ 13ರ ವಲಯ ಅಧ್ಯಕ್ಷ ಶುಶ್ರೂತ್ ಬೆಳಗೂರ್, ಸೂರಜ್ ಕೃಷ್ಣಂ, ಸುನಿಲ್ ಶಂಕರ್, ಲೇಡಿಸ್ ಸರ್ಕಲ್ನ ವಲಯಾಧ್ಯಕ್ಷೆ ನಾಗಶ್ರೀ ನಿಖಿಲೇಶ್, ಮೈಸೂರು ರೌಂಡ್ ಟೇಬಲ್ 21ರ ಅಧ್ಯಕ್ಷ ಅಕ್ಷಯ್ ಕೋನೆರಿ, ಲೇಡಿಸ್ ಸರ್ಕಲ್ -9ರ ಅಧ್ಯಕ್ಷೆ ಎಸ್.ಶ್ರೀನಿಜಾ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-39-46456437

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.