ಮೈಸೂರು: ‘ಏಕಾಗ್ರತೆ ಸಾಧಿಸಲು ಮತ್ತು ಸಂಯಮದಿಂದ ವರ್ತಿಸಲು ಯೋಗವು ನೆರವಾಗುತ್ತದೆ. ಪೊಲೀಸರು ಯೋಗ– ಧ್ಯಾನವನ್ನು ಮಾಡಬೇಕು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸಲಹೆ ನೀಡಿದರು.

ಜ್ಯೋತಿನಗರದ ಡಿಎಆರ್ ಮೈದಾನದಲ್ಲಿ ಇಲಾಖೆಯು ಶುಕ್ರವಾರ ಆಯೋಜಿಸಿದ್ದ 5 ದಿನಗಳ ಯೋಗ ಶಿಬಿರದ ಸಮಾರೋಪದಲ್ಲಿ ಮಾತನಾಡಿದ ಅವರು, ‘ನಾಗರಿಕರೊಂದಿಗೆ ಉತ್ತಮವಾಗಿ ನಡೆದುಕೊಳ್ಳಲು. ಸಂಯಮ ದಿಂದ ವರ್ತಿಸಲು ಯೋಗವು ರಾಮಬಾಣವಾಗಿದೆ’ ಎಂದರು.

‘ಪೊಲೀಸರ ಆರೋಗ್ಯ ಚೆನ್ನಾಗಿದ್ದರೆ ಮಾತ್ರ ಸಮಾಜದ ಆರೋಗ್ಯ ಉತ್ತಮವಾಗಿರುತ್ತದೆ. ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಲು ವ್ಯಾಯಾಮದ ಜೊತೆಗೆ ಯೋಗವನ್ನೂ ಮಾಡಬೇಕು. ಅದರಿಂದ ಎಲ್ಲರಿಗೂ ಒಳ್ಳಿತಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಕಾನೂನು ಸುವ್ಯವಸ್ಥೆ ಕಾಪಾಡಲು ಮಳೆ– ಬಿಸಿಲೆನ್ನದೆ ಹಗಲು– ರಾತ್ರಿ ದುಡಿಯುವ ಪೊಲೀಸರು ಸದಾ ಒತ್ತಡದಲ್ಲಿರುತ್ತಾರೆ. ಇಂಥ ಒತ್ತಡದ ವಾತಾವರಣವನ್ನು ಯೋಗಾಭ್ಯಾಸ ತಿಳಿಗೊಳಿಸುತ್ತದೆ’ ಎಂದರು.

400 ಪೊಲೀಸರಿಗೆ ತರಬೇತಿ: ಯೋಗಪಟು ಭಾಗೀರಥಿ ಅವರು 400 ಪೊಲೀಸರಿಗೆ ನಿತ್ಯ ಯೋಗ ತರಬೇತಿ ನೀಡಿದ್ದು, ಸೂರ್ಯ ನಮಸ್ಕಾರ, ಸುಖಾಸನ, ತಾಡಾಸನ, ಭುಜಂಗಾಸನ ಮತ್ತು ವಜ್ರಾಸನ ಸೇರಿದಂತೆ ವಿವಿಧ ಆಸನಗಳ ಜೊತೆ ಪ್ರಾಣಾಯಾಮ ಮತ್ತು ಧ್ಯಾನವನ್ನು ಮಾಡಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್, ಸಿ.ಮಲ್ಲಿಕ್, ಡಿಎಆರ್ ಡಿವೈಎಸ್ಪಿ ವೀರಣ್ಣ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-39-1325532570

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.