ಮೈಸೂರು: ‘ದಲಿತ ಸಮುದಾಯದವರು ರಾಜಕೀಯ ಶಕ್ತಿ ಹೊಂದಬೇಕೆಂಬ ಅಂಬೇಡ್ಕರ್ ಆಶಯಕ್ಕೆ ಒಳಮೀಸಲಾತಿ ಕಿತ್ತಾಟ ಹಾನಿ ಮಾಡುತ್ತಿದೆ’ ಎಂದು ಮಂಡ್ಯದ ರಾಮ ಮನೋಹರ ಲೋಹಿಯಾ ವಿಚಾರ ವೇದಿಕೆ ಅಧ್ಯಕ್ಷ ಬಿ.ಎಸ್.ಶಿವಣ್ಣ ಅಭಿಪ್ರಾಯಪಟ್ಟರು.

ದಲಿತ ಸಂಘರ್ಷ ಸಮಿತಿ (ಬಣರಹಿತ) ಮೈಸೂರು ವಿಭಾಗದಿಂದ ಇಲ್ಲಿನ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಭಾನುವಾರ ನಡೆದ ಬಿ.ಆರ್.ಅಂಬೇಡ್ಕರ್ 135ನೇ ಜಯಂತಿ ಹಾಗೂ ‘ಸಮಕಾಲೀನ ಭಾರತದಲ್ಲಿ ಬಿ.ಆರ್.ಅಂಬೇಡ್ಕರ್ ಅವರ ರಾಜಕೀಯ ಚಿಂತನೆಗಳ ಪ್ರಸ್ತುತತೆ’ ಕುರಿತ ವಿಚಾರಸಂಕಿರಣ ಉದ್ಘಾಟಿಸಿ ಮಾತನಾಡಿದರು.

‘ಸಮುದಾಯವು ಶಿಕ್ಷಣ ಹಾಗೂ ರಾಜಕೀಯ ಸ್ಥಾನಮಾನಕ್ಕೆ ಸಂಘಟಿತವಾಗಿ ಹೋರಾಡಬೇಕು ಎನ್ನುವುದು ಬಾಬಸಾಹೇಬರ ಆಶಯವಾಗಿತ್ತು. ಪರಸ್ಪರರ ಬಗ್ಗೆ ಉದಾರತೆ ತೋರುವುದು, ಸೌಹಾರ್ದದಿಂದ ಸಮಸ್ಯೆ ಬಗೆಹರಿಸಿಕೊಂಡರೆ ಮಾತ್ರ ದೇಶ ನಡೆಸುವ ಪ್ರಜೆಗಳಾಗುತ್ತೀರಿ. ಇಲ್ಲದಿದ್ದರೆ ಇರುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತೀರಿ’ ಎಂದು ಎಚ್ಚರಿಸಿದರು.

ನೋಟುಗಳಲ್ಲಿ ಬಾಬಾಸಾಹೇಬ್ ಇರಲಿ: ‘ದೇಶದ ನೋಟುಗಳಲ್ಲಿ ಮಹಾತ್ಮ ಗಾಂಧೀಜಿ ಜತೆಯಲ್ಲಿ ಬಿ.ಆರ್.ಅಂಬೇಡ್ಕರ್ ಅವರ ಫೋಟೊಗೂ ಆದ್ಯತೆ ನೀಡಬೇಕು. ಅಂಬೇಡ್ಕರ್ ಭಾವಚಿತ್ರವನ್ನು ಹತ್ತಿರ ಸೇರಿಸಿಕೊಳ್ಳದ ಮನಸ್ಥಿತಿಯ ಜನರಿದ್ದು, ನೋಟಿನ ಮೂಲಕವಾದರೂ ಜನರು ಅವರನ್ನು ಮುಟ್ಟಲಿ. ಅವರ ಸೇವೆಯನ್ನು ಸ್ಮರಿಸುವಂತಾಗಲಿ. ಈ ಬಗ್ಗೆ ಸಂಬಂಧಿಸಿದ ಎಲ್ಲ ಸಂಸ್ಥೆಗಳಿಗೂ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಸಮುದಾಯ ಈ ಬಗ್ಗೆ ದನಿ ಎತ್ತಬೇಕು’ ಎಂದು ಒತ್ತಾಯಿಸಿದರು.

ಮೈಸೂರು, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಬಿ.ಆರ್.ಅಂಬೇಡ್ಕರ್ ಹಾಗೂ ಸಂವಿಧಾನ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು. ಪ್ರಥಮ ಮೂರು ಸ್ಥಾನ ಪಡೆದವರಿಗೆ ವೈಯಕ್ತಿಕವಾಗಿ ಟ್ಯಾಬ್ಗಳನ್ನು ನೀಡಿದರು.

ಪ್ರೊ.ನಾಗರತ್ನಮ್ಮ, ಎಸ್.ಜಯಕುಮಾರ್, ಡಿಎಸ್ಎಸ್ ರಾಜ್ಯ ಸಂಚಾಲಕ ಸಿ.ಉಮಾಮಹದೇವ್, ಪ್ರೊ.ಸುರೇಶ್, ಪ್ರೊ.ಉದಯ್ ಕುಮಾರ್ ಉರ್ಗಲವಾಡಿ ರಾಮಣ್ಣ, ಪ್ರೊ.ಇಂದಿರಮ್ಮ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-39-1367978851

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.