ಮೈಸೂರು: ‘ಮೌಲ್ಯಾಧಾರಿತ ರಾಜಕಾರಣ ಮರೆಯಾಗುತ್ತಿದೆ. ಹಣ ಹಾಗೂ ಜಾತಿ ಚುನಾವಣೆ ಗೆಲ್ಲುವ ಅಸ್ತ್ರವಾಗುತ್ತಿದೆ’ ಎಂಬ ಆತಂಕ ಜನಪ್ರತಿನಿಧಿಗಳ ಮಾತುಗಳಲ್ಲಿ ಪ್ರತಿಧ್ವನಿಸಿತು.

ಇಲ್ಲಿನ ಕೆಎಸ್ಒಯು ಕಾವೇರಿ ಸಭಾಂಗಣದಲ್ಲಿ ಶನಿವಾರ ನಡೆದ ರಾಜ್ಯ ರಾಜ್ಯಶಾಸ್ತ್ರ ಅಧ್ಯಾಪಕರ ಸಂಘದ 21ನೇ ಮಹಾಸಮ್ಮೇಳನ ಮತ್ತು ರಜತ ಮಹೋತ್ಸವದಲ್ಲಿ ಆಯೋಜಿಸಿದ್ದ ‘ರಾಜಕಾರಣಿಗಳೊಂದಿಗೆ ವಿಶೇಷ ಅಧಿವೇಶನ’ವು ಶಾಸಕರ ಮುಕ್ತ ಮನಸ್ಸಿನ ಚರ್ಚೆಗೆ ವೇದಿಕೆಯಾಯಿತು.

‘ಮೀಸಲು ಕ್ಷೇತ್ರದ ರಾಜಕಾರಣ’ ಕುರಿತು ಮಾತನಾಡಿದ ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ, ‘ಮೀಸಲು ಸಮುದಾಯದವರೇ ಮೀಸಲು ಕ್ಷೇತ್ರದವರನ್ನು ಆಯ್ಕೆ ಮಾಡಬೇಕು ಎಂಬ ಅಂಶವನ್ನು ಅಂಬೇಡ್ಕರ್ ಮುಂದಿಟ್ಟಾಗ ವಿರೋಧ ವ್ಯಕ್ತವಾಗಿತ್ತು. ಇಂದಿಗೂ ದಮನಿತ ಸಮುದಾಯದ ವಿಚಾರ ಎತ್ತಿದರೆ ವಿರೋಧಗಳೇ ಹೆಚ್ಚುತ್ತಿವೆ. ನಮ್ಮನ್ನು ಒಡೆಯುವ ನೀತಿಗಳು ರೂಪುಗೊಳ್ಳುತ್ತಿವೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ನನ್ನ ತಂದೆ ರಾಚಯ್ಯ ಅವರು ₹16ಸಾವಿರದಲ್ಲಿ ಚುನಾವಣೆ ಮುಗಿಸುತ್ತಿದ್ದರು. 1989ರಲ್ಲಿ ನಾನು ಸ್ಪರ್ಧಿಸಿದಾದ ಲಕ್ಷ ರೂಪಾಯಿ ದಾಟಿತು. ಇಂದು ಅಷ್ಟು ಪಂಚಾಯಿತಿ ಚುನಾವಣೆಗೂ ಸಾಲದು’ ಎಂದರು ಹೇಳಿದರು.

‘ಇಂದಿನ ರಾಜಕಾರಣ ನನ್ನನ್ನು ಪ್ರಾಮಾಣಿಕನಾಗಿ ಉಳಿಯಲು ಬಿಡುತ್ತಿಲ್ಲ. ದಿಟ್ಟತನದಿಂದ ವಿಚಾರ ಮಂಡಿಸಿದರೆ ನಮ್ಮ ಸಮುದಾಯದವರೇ ಗುಂಪು ಮಾಡಿಕೊಂಡು ಒಂದು ಮತದಿಂದ ನನ್ನನ್ನು ಸೋಲಿಸಿದರು. ಆ ಸೋಲಿನಿಂದ ಹೊರಬಂದು ಗೆಲ್ಲಲು 19 ವರ್ಷ ಬೇಕಾಯಿತು. ಇದು ಒಂದು ಉದಾಹರಣೆ ಅಷ್ಟೆ. ಸಮುದಾಯಕ್ಕೆ ಗಟ್ಟಿ ಧ್ವನಿ ಬೇಕಿದ್ದರೆ ನಾಯಕರನ್ನು ಬೆಳೆಸುವ ಕೆಲಸ ಆಗಬೇಕು’ ಎಂದು ನುಡಿದರು.

‘ಅಂಬೇಡ್ಕರ್ ಮೀಸಲಾತಿ ಕೊಟ್ಟಾಗ ಎಸ್ಸಿ ಪಟ್ಟಿಯಲ್ಲಿ ಕೇವಲ 6 ಜಾತಿಗಳಿದ್ದವು. ಇದೀಗ ರಾಜ್ಯದಲ್ಲಿ 101 ಜಾತಿಗಳಿವೆ. ರಾಷ್ಟ್ರಮಟ್ಟದ ಪಟ್ಟಿಯಲ್ಲಿ 200ಕ್ಕೂ ಹೆಚ್ಚು ಜಾತಿಗಳಿವೆ. ಜತೆಗೆ, ಎಲ್ಲ ಜಾತಿಗಳು, ಎಲ್ಲ ಧರ್ಮದವರಿಗೂ ಮೀಸಲಾತಿ ಸಿಗುತ್ತಿದೆ. ಇಂತಹ ಸ್ಥಿತಿ ಇರುವಾಗ ‘ಭಾರತೀಯರೆಲ್ಲ ಒಂದು’ ಎಂಬ ಹೇಳಿಕೆ ವಾಸ್ತವ ಆಗಿದೆಯೇ’ ಎಂದು ಪ್ರಶ್ನಿಸಿದರು.

‘ಸದನದ ಕಾರ್ಯಕಲಾಪ’ ಕುರಿತು ಶಾಸಕ ಎಸ್.ಸುರೇಶ್ ಕುಮಾರ್ ಮಾತನಾಡಿ, ‘ಸದನದ ಕಲಾಪಗಳ ಗುಣಮಟ್ಟ ಕೆಳ ಮಟ್ಟಕ್ಕಿಳಿದು ಪ್ರಲಾಪವಷ್ಟೇ ಆಗುತ್ತಿವೆ. ಶಾಸನ ಸಭೆಗೆ ಬರುವ ಯುವ ಶಾಸಕರಲ್ಲಿ ಕಲಾಪದಲ್ಲಿ ಭಾಗವಹಿಸಿದರೆ ನಮಗೇನು ಲಾಭ? ಅದರ ಬದಲು ನಮ್ಮ ಕ್ಷೇತ್ರದ ಮದುವೆ, ಸಾವಿನ ಮನೆಗೆ ಹೋದರೆ ಮತವಾದರೂ ಬರುತ್ತದಲ್ಲಾ ಎಂಬ ಭಾವನೆ ಇದೆ. ಚರ್ಚೆಗಳು ಅರ್ಥ ಕಳೆದುಕೊಳ್ಳುತ್ತಿವೆ’ ಎಂದು ಹೇಳಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ‘ಮಹಿಳಾ ರಾಜಕಾರಣ’ ಕುರಿತು ಮಾತನಾಡಿದರು. ರಾಜ್ಯಶಾಸ್ತ್ರ ಅಧ್ಯಾಪಕರ ಸಂಘದ ಸದಸ್ಯ ಕಾರ್ಯದರ್ಶಿ ಪ್ರೊ.ಜಯಪ್ರಕಾಶ್ ಮಾವಿನಕುಳಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-39-873338605

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.