ಮೈಸೂರು: ಪ್ರಸಕ್ತ ಸಾಲಿನ ಆಸ್ತಿ ತೆರಿಗೆ ಪಾವತಿಗೆ ಮಾಲೀಕರು ಆರಂಭದಲ್ಲೇ ಉತ್ಸಾಹ ತೋರಿದ್ದು, ಮೊದಲೆರಡು ದಿನದಲ್ಲಿಯೇ ಮಹಾನಗರ ಪಾಲಿಕೆಗೆ ₹5.1 ಕೋಟಿಯಷ್ಟು ಕರ ಸಂಗ್ರಹವಾಗಿದೆ.

ಪಾಲಿಕೆ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಏ. 1ರಿಂದ ಸ್ವಯಂಘೋಷಿತ ಆಸ್ತಿ ತೆರಿಗೆ ಪಾವತಿಗೆ ಅವಕಾಶ ಕಲ್ಪಿಸಿದ್ದು, ಮೊದಲ ದಿನವಾದ ಬುಧವಾರ ಆನ್ಲೈನ್ ಮೂಲಕ ಜನರು ಒಟ್ಟು ₹1.7 ಕೋಟಿ ತೆರಿಗೆ ಪಾವತಿಸಿದ್ದರು. ಗುರುವಾರ ಆನ್ಲೈನ್ ಜೊತೆಗೆ ಪಾಲಿಕೆಯ ಕಚೇರಿಗಳು, ಬ್ಯಾಂಕ್ಗಳಲ್ಲಿಯೂ ಜನರ ಸಾಲು ಹೆಚ್ಚಿದ್ದು, ಬರೋಬ್ಬರಿ ₹3.40 ಕೋಟಿಯಷ್ಟು ತೆರಿಗೆ ಸಂಗ್ರಹ ಆಗಿದೆ. ಈ ತಿಂಗಳಲ್ಲಿ ತೆರಿಗೆ ಪಾವತಿಸುವವರಿಗೆ ಶೇ 5ರಷ್ಟು ರಿಯಾಯಿತಿ ಇರಲಿದೆ ಎಂದು ಪಾಲಿಕೆಯ ಉಪ ಆಯುಕ್ತ ಸೋಮಶೇಖರ್ ಜಿಗಣಿ ‘ಪ್ರಜಾವಾಣಿ’ಗೆ ತಿಳಿಸಿದರು.

ವರ್ಷದಿಂದ ವರ್ಷಕ್ಕೆ ಏರಿಕೆ: ಪಾಲಿಕೆ ವ್ಯಾಪ್ತಿಯಲ್ಲಿ ಪ್ರಸ್ತುತ 2,10,787 ಅಧಿಕೃತ ಹಾಗೂ 20,971 ಸಾವಿರ ಅನಧಿಕೃತ ಆಸ್ತಿಗಳು ಸೇರಿದಂತೆ ಒಟ್ಟು 2.31 ಲಕ್ಷ ವಸತಿ ಹಾಗೂ ವಾಣಿಜ್ಯ ಸ್ವತ್ತುಗಳಿವೆ. ಕಳೆದ ವರ್ಷದಲ್ಲಿ (2025–26) ಇ–ಖಾತೆ ಅಭಿಯಾನದಿಂದಾಗಿ ಪಾಲಿಕೆಯು ಆಸ್ತಿ ತೆರಿಗೆ ಸಂಗ್ರಹದಲ್ಲಿ ಗುರಿ ಮೀರಿದ ಸಾಧನೆ ಮಾಡಿದೆ. ₹240 ಕೋಟಿ ಗುರಿಗೆ ಪ್ರತಿಯಾಗಿ ₹242 ಕೋಟಿ ಸಂಗ್ರಹಿಸಿ ದಾಖಲೆ ಬರೆದಿದೆ.

ವರ್ಷದಿಂದ ವರ್ಷಕ್ಕೆ ಪಾಲಿಕೆಯ ಆಸ್ತಿ ತೆರಿಗೆ ಸಂಗ್ರಹದ ಮೊತ್ತವು ಏರಿಕೆಯಾಗುತ್ತಿದ್ದು, ಉತ್ತಮ ಆದಾಯ ತಂದುಕೊಡುತ್ತಿದೆ. ಮೂರು ವರ್ಷದ ಹಿಂದೆ ₹192 ಕೋಟಿಯಷ್ಟು ಸಂಗ್ರಹವಾಗಿದ್ದರೆ, ಈ ವರ್ಷ ₹250 ಕೋಟಿ ದಾಟುವ ನಿರೀಕ್ಷೆ ಇದೆ.

ಬಾಕಿಯೂ ವಸೂಲಿ: ಇ–ಖಾತೆ, ಎ–ಖಾತೆ ಹಾಗೂ ಬಿ–ಖಾತೆ ಅಭಿಯಾನಗಳಿಂದಾಗಿ ಪಾಲಿಕೆಗೆ ಬರಬೇಕಾದ ತೆರಿಗೆ ಬಾಕಿಯೂ ವಸೂಲಾಗುತ್ತಿದೆ. ಕಳೆದ ವರ್ಷ ಬರೋಬ್ಬರಿ ₹27 ಕೋಟಿಯಷ್ಟು ಆಸ್ತಿ ತೆರಿಗೆ ಬಾಕಿಯು ಪಾಲಿಕೆಯ ಬೊಕ್ಕಸಕ್ಕೆ ಸೇರಿದೆ. ಇನ್ನೂ ₹10–15 ಕೋಟಿಯಷ್ಟೇ ಉಳಿದಿದೆ. ಇದರಲ್ಲಿ ಮೈಸೂರು ವಿಶ್ವವಿದ್ಯಾಲಯದಂತಹ ಸರ್ಕಾರಿ ಅಂಗ ಸಂಸ್ಥೆಗಳೇ ಹೆಚ್ಚು ತೆರಿಗೆ ಉಳಿಸಿಕೊಂಡಿವೆ.

ಪಾಲಿಕೆಯ ವಲಯ ಕಚೇರಿಗಳಲ್ಲಿ ಗುರುವಾರ ಮಾಲೀಕರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದು, ಒಂದೇ ದಿನ ₹3.4 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗಿದೆ
ಸೋಮಶೇಖರ್ ಜಿಗಣಿ, ಪಾಲಿಕೆ ಉಪ ಆಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.