ಮೈಸೂರು: ಡಾ.ರಾಜಕುಮಾರ್ ವಿರುದ್ಧ ನಟ ಚೇತನ್ ಅಹಿಂಸಾ ಹೇಳಿಕೆ ಖಂಡಿಸಿ ಮೈಸೂರು ಕನ್ನಡ ವೇದಿಕೆ ಸದಸ್ಯರು, ರಾಜ್ಕುಮಾರ್ ಉದ್ಯಾನದಲ್ಲಿ ಸೋಮವಾರ ಪ್ರತಿಭಟಿಸಿದರು.

ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ ಮಾತನಾಡಿ, ‘ಕನ್ನಡ ಚಿತ್ರರಂಗದಲ್ಲಿ ಡಾ.ರಾಜಕುಮಾರ್ ಸಾಧನೆ ಅಪಾರ. ಆಡು ಮುಟ್ಟದ ಸೊಪ್ಪಿಲ್ಲ, ರಾಜ್ಕುಮಾರ್ ಅಭಿನಯಿಸದ ಪಾತ್ರವಿಲ್ಲ. ಕನ್ನಡ ಭಾಷೆಗೂ ಅವರ ಕೊಡುಗೆ ಅಪಾರ. ಕರ್ನಾಟಕದಾದ್ಯಂತ ಪ್ರವಾಸ ಮಾಡಿ ರಸಮಂಜರಿ ಮೂಲಕ ಬಂದ ಹಣವನ್ನು ನಾಡಿನ ಎಲ್ಲಾ ಕಡೆ ಕ್ರೀಡಾಂಗಣಕ್ಕೆ ಮತ್ತು ಕೆಲವು ಸರ್ಕಾರಿ ಕಟ್ಟಡಕ್ಕೆ ದಾನವಾಗಿ ನೀಡಿದ್ದಾರೆ. ಇದುವರೆಗೂ ಅವರ ಕುಟುಂಬದವರು ಇದೆಲ್ಲ ನಮ್ಮ ತಂದೆ ಕೊಡುಗೆ ಎಂದು ಎಲ್ಲೂ ಹೇಳಿಲ್ಲ. ಆದರೆ ಒಬ್ಬ ಅವಿವೇಕಿ ಚೇತನ್, ರಾಜ್ಕುಮಾರ್ ಅವರ ಇತಿಹಾಸ ತಿಳಿಯದೆ ಅವರ ಸ್ಮಾರಕ ನಿರ್ಮಾಣಕ್ಕೆ ಯಾಕೆ 2.5 ಎಕರೆ ಜಾಗ ನೀಡಬೇಕು ಎಂದು ಹೇಳಿರುವುದು ಖಂಡನೀಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಈಚೆಗೆ ಚೇತನ್ ಕೆಲವು ವಿಷಯಗಳಲ್ಲಿ ದ್ವಂದ್ವ ಹೇಳಿಕೆ ನೀಡುತ್ತಿದ್ದಾನೆ. ಸರ್ಕಾರ ದಯವಿಟ್ಟು ಈತನನ್ನು ನಿಮಾನ್ಸ್ ಆಸ್ಪತ್ರೆಗೆ ಸೇರಿಸಬೇಕು. ನಾಡು, ನುಡಿ, ಜಲದ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ರಾಜ್ಕುಮಾರ್ ಅಂದು ಗೋಕಾಕ್ ಚಳವಳಿಯಲ್ಲಿ ಭಾಗವಹಿಸದೇ ಇದ್ದರೆ ಇಂದು ನಮ್ಮ ಕರ್ನಾಟಕ ಹೊರ ರಾಜ್ಯದ ಪಾಲಾಗುತ್ತಿತ್ತು. ಅಂದು ಪರ ರಾಜ್ಯಗಳ ಚಿತ್ರಗಳು ವಿಜೃಂಭಿಸುತ್ತಿದ್ದವು. ಕನ್ನಡ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿರಲಿಲ್ಲ. ರಾಜಕುಮಾರ್ ಹೋರಾಟದ ಫಲವಾಗಿ ಅವಕಾಶ ಲಭಿಸಿತು. ಚೇತನ್ ಅಹಿಂಸಾ ಕೂಡಲೇ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಈತನ ಗಡಿಪಾರು ಮಾಡುವವರೆಗೂ ಹೋರಾಟ ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಡಾ.ರಾಜ್ ಅಭಿಮಾನಿಗಳ ಸಂಘದ ಅಧ್ಯಕ್ಷ ಮಹಾದೇವಸ್ವಾಮಿ, ಎಲ್ಐಸಿ ಸಿದ್ದಪ್ಪ, ಗೋವಿಂದರಾಜು, ಹೊನಕೆರೆ ಸ್ವಾಮಿ, ಬೋಗಾದಿ ಸಿದ್ದೇಗೌಡ, ಚಾಮರಾಜು ಮಂಟಕಳ್ಳಿ, ಪ್ಯಾಲೆಸ್ ಬಾಬು, ಮಾದಪ್ಪ, ಶಿವಗೌಡ, ಸ್ವಾಮಿಗೈಡ್, ಬೀಡ ಬಾಬು, ಚಂದ್ರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-39-816468843

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.