ಮೈಸೂರು: ‘ಮಠಾಧೀಶರ ವಿರುದ್ಧ ಸಾರ್ವಜನಿಕ ವೇದಿಕೆಯಲ್ಲಿ ಮಾತನಾಡುವುದು ನಿಲ್ಲಬೇಕು’ ಎಂದು ಒತ್ತಾಯಿಸಿ ಸೇವ್ ಹಿಂದೂ ಟೆಂಪಲ್ಸ್ ಸಂಘಟನೆ ಸದಸ್ಯರು ಜಿಲ್ಲಾಧಿಕಾರಿ ಹಳೇ ಕಚೇರಿ ಮುಂಭಾಗ ಬುಧವಾರ ಪ್ರತಿಭಟಿಸಿದರು.

ಬಿಜೆಪಿ ಮುಖಂಡ ಸಚ್ಚಿದಾನಂದ ಮಾತನಾಡಿ, ‘ಮಠ, ಮಾನ್ಯಗಳು ಸರ್ಕಾರಕ್ಕೆ ಮಾದರಿಯಾಗುವಂತೆ ಸೇವೆ ಸಲ್ಲಿಸುತ್ತಿವೆ. ಹಳೇ ಮೈಸೂರು ಭಾಗದಲ್ಲಿ ಸಿದ್ಧಗಂಗಾ, ಸುತ್ತೂರು, ಆದಿಚುಂಚನಗಿರಿ ಮಠ ಪ್ರಮುಖವಾಗಿ ಗುರುತಿಸಿಕೊಂಡಿವೆ. ಶಿಕ್ಷಣ, ದಾಸೋಹದ ಕೊಡುಗೆ ನೀಡಿದೆ. ಜನಪ್ರತಿನಿಧಿಗಳು, ಸಮಾಜದ ಮುಖಂಡರು ಸ್ವಾಮೀಜಿಯವರೊಂದಿಗೆ ಮಾತನಾಡಲು ಸರ್ವ ಸ್ವತಂತ್ರರು. ಆದರೆ ಅವರನ್ನು ಸಾರ್ವಜನಿಕ ವೇದಿಕೆಯಲ್ಲಿ ಟೀಕಿಸುವುದು ಖಂಡನೀಯ’ ಎಂದರು.

‘ಚರ್ಚೆಯು ಸಮಾಜವನ್ನು ಒಡೆಯುತ್ತದೆ. ಇದರಿಂದ ಭಕ್ತರಿಗೂ ಮುಜುಗರವಾಗುತ್ತದೆ. ಭಾರತವನ್ನು ಒಂದಾಗಿ ಕರೆದೊಯ್ಯಲು ಮಠಗಳ ಸೇವೆ ಅಗತ್ಯ. ಹೀಗಾಗಿ ಮಠಗಳ ಪರವಾಗಿ ನಿಲ್ಲಬೇಕು. ಗೊಂದಲ ಇದ್ದರೆ ಸ್ವಾಮೀಜಿಗಳನ್ನು ನೇರವಾಗಿ ಸಂಪರ್ಕಿಸಬೇಕು’ ಎಂದು ಹೇಳಿದರು.

ಸಂಘಟನೆ ಸಂಸ್ಥಾಪಕ ನಿಖಿಲೇಶ್, ಸತೀಶ್ ಗೌಡ ಭಾಗವಹಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260326-39-386776245

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.