ಮೈಸೂರು: ರಾಮಕೃಷ್ಣನಗರ ‘ಎಚ್’ ಬ್ಲಾಕ್ನ ಸಾಲುಮರದ ತಿಮ್ಮಕ್ಕ ಉದ್ಯಾನದಲ್ಲಿ ಶಾಸಕ ಜಿ.ಟಿ. ದೇವೇಗೌಡ ಅಧ್ಯಕ್ಷತೆಯಲ್ಲಿ ನಡೆದ ವಾರ್ಡ್ ನಂ 58ರ ಜನ ಸಂಪರ್ಕ ಸಭೆಯಲ್ಲಿ ಸಾರ್ವಜನಿಕರು ಅಧಿಕಾರಿಗಳ ಕಾರ್ಯವೈಖರಿಗೆ ಆಕ್ರೋಶ ವ್ಯಕ್ತಪಡಿಸಿದರು.

ಕುಡಿಯುವ ನೀರಿನ ಸಮಸ್ಯೆ, ದುರಸ್ತಿಯಾಗದ ಯುಜಿಡಿ, ಲಿಂಗಾಂಬುಧಿ ಕೆರೆಯ ನಿರ್ವಹಣೆಯಲ್ಲಿನ ನಿರಾಸಕ್ತಿಯ ಬಗ್ಗೆ ಅಧಿಕಾರಿ ಗಳನ್ನು ಜನ ಕುಟುಕಿದರು. ‘ಇಲಾಖೆಗಳ ನಡುವೆ ಸಮನ್ವಯ ಇಲ್ಲದೆ ಕೆಲಸಗಳು ನನೆಗುದಿಗೆ ಬಿದ್ದಿವೆ. ಜನ ಕಚೇರಿಯಿಂದ ಕಚೇರಿಗೆ ಅಲೆದಾಡಿದರೂ ಕೆಲಸ ನಡೆಯುತ್ತಿಲ್ಲ’ ಎಂದು ಆರೋಪಿಸಿದರು.

‘30–35 ವರ್ಷಗಳ ಹಳೆಯ ಕುಡಿಯುವ ನೀರಿನ ಪೈಪ್ಗಳು ಹಾಳಾಗಿರುವುದರಿಂದ ಆಗಾಗ್ಗೆ ನೀರು ಸೋರಿಕೆ ಮತ್ತು ಪೈಪ್ ಸಮಸ್ಯೆಗಳು ಎದುರಾಗುತ್ತಿವೆ. ಜನಸಂಖ್ಯೆ ಹೆಚ್ಚಾಗಿರುವ ಕಾರಣ ಹೆಚ್ಚು ಸಾಮರ್ಥ್ಯದ ಪೈಪ್ ಅಳವಡಿಸಿ. ಹೊಸ ರಸ್ತೆ ಕಾಮಗಾರಿ ಆರಂಭಿಸಿರುವುದು ಅಭಿನಂದನೀಯ, ಆದರೆ ಗ್ಯಾಸ್ ಪೈಪ್ಲೈನ್ ಕಾಮಗಾರಿಯಿಂದ ಅನೇಕ ರಸ್ತೆಗಳು ಹಾಳಾಗಿವೆ. ಇದರಿಂದ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ’ ಎಂದು ನಾಗರಿಕರು ದೂರಿದರು.

‘ಹಲವು ಮುಖ್ಯ ರಸ್ತೆಗಳು ಮತ್ತು ಕ್ರಾಸ್ಗಳಲ್ಲಿ ಸರಿಯಾದ ರಸ್ತೆ ವ್ಯವಸ್ಥೆ ಇಲ್ಲದ ಕಾರಣ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ.ಒಳಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆಗಾಲದಲ್ಲಿ ರಸ್ತೆಗಳಲ್ಲಿ ನೀರು ನಿಲ್ಲುತ್ತವೆ. ಕೆಲವು ಕಡೆ ಮೋರಿ ಒಡೆದು ಮನೆಗಳಿಗೆ ನೀರು ನುಗ್ಗುತ್ತವೆ. ಒಳಚರಂಡಿ ಕಾಮಗಾರಿಗಳನ್ನು ಶೀಘ್ರ ಆರಂಭಿಸಿ’ ಎಂದು ಮನವಿ ಮಾಡಿದರು.

ಸ್ಥಳೀಯ ಕ್ರೀಡಾಂಗಣದಲ್ಲಿ ವಾಹನಗಳು ಒಳಗೆ ಬರಲು ಡೆಕ್ ವ್ಯವಸ್ಥೆ ಇಲ್ಲದಿರುವುದರಿಂದ ಸಮಸ್ಯೆಯಾಗುತ್ತಿದೆ. ಅರಣ್ಯ ಇಲಾಖೆಯು ಮೈದಾನದ ಸುತ್ತಲಿನ ಮರಗಳ ರೆಂಬೆಗಳನ್ನು ಕಡಿಯಲು ಅವಕಾಶ ನೀಡಬೇಕು. ನೂರಾರು ಜನ ಕ್ರೀಡಾಭ್ಯಾಸ ಮಾಡುತ್ತಿದ್ದು, ಅಲ್ಲಿಗೆ ಶೌಚಾಲಯ ನಿರ್ಮಾಣಕ್ಕೆ ಅನುದಾನ ನೀಡಬೇಕು’ ಎಂದು ಒತ್ತಾಯಿಸಿದರು.

‘ಮುಖ್ಯರಸ್ತೆಗಳಲ್ಲಿ ಮರಗಳ ರೆಂಬೆಗಳು ಹೆಚ್ಚಾಗಿ ಬೆಳೆದಿರುವುದರಿಂದ ವಾಹನಗಳ ಸಂಚಾರಕ್ಕೂ ತೊಂದರೆ ಉಂಟಾಗಿದೆ. ಪಾಲಿಕೆಯು ಅವುಗಳನ್ನು ತೆರವುಗೊಳಿಸಬೇಕು. ಹಿಂದೆ ಸಂಚರಿಸುತ್ತಿದ್ದ ರೂಟ್ ನಂ. 61 ಮತ್ತು ರೂಟ್ ನಂ. 135 ಬಸ್ಗಳನ್ನು ಮರುಪ್ರಾರಂಭಿಸಬೇಕು. ’ ಎಂದು ನಿವಾಸಿಗಳು ಆಗ್ರಹಿಸಿದರು.

ಕೆಎಸ್ಆರ್ಟಿಸಿ ಡಿಸಿ ವೀರೇಶ್ ಮಾತನಾಡಿ, ‘ರೂಟ್ ನಂ 61ರಲ್ಲಿ ಎರಡು ಬಸ್ ಓಡಾಟ ಆರಂಭಿಸುತ್ತೇವೆ’ ಎಂದು ಭರವಸೆ ನೀಡಿದರು.

‘ಲಿಂಗಾಂಬುಧಿ ಕೆರೆಗೆ ಯುಜಿಡಿ ನೀರು ಹರಿಯದಂತೆ ಮಾಡಲು ಯಾಕೆ ಕ್ರಮವಹಿಸುತ್ತಿಲ್ಲ. ಇದರಲ್ಲಿ ನಿಮ್ಮ ಸ್ವ ಹಿತಾಸಕ್ತಿ ಇದೆಯೇ. ಅರಣ್ಯ ಇಲಾಖೆ ಸಿಬ್ಬಂದಿ ರಾತ್ರಿ ಗೇಟ್ ತೆರೆದಿಟ್ಟು ಕೆರೆಯ ಆವರಣದಲ್ಲಿರುವ ಹಂದಿ ಮುಂತಾದ ಪ್ರಾಣಿ ಹೊರಬರುವಂತೆ ಮಾಡುತ್ತಿದ್ದು, ಇದರಿಂದ ಸಮಸ್ಯೆ ಆಗುತ್ತಿದೆ’ ಎಂದು ಸ್ಥಳೀಯ ಪರಿಸರ ಪ್ರೇಮಿಗಳು ದೂರಿದರು.

ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್ ಮಾತನಾಡಿ, ‘ಯುಜಿಡಿ ನೀರು ಕೆರೆಗೆ ಹರಿಯದಂತೆ ಮಾಡುವ ಕೆಲಸ ಆರಂಭಿಸಲು ನಾವು ಸಿದ್ದರಿದ್ದೇವೆ. ಅರಣ್ಯ ಇಲಾಖೆಯವರ ಸಹಕಾರವೂ ಬೇಕು’ ಎಂದರು.

ಡಿಸಿಎಫ್ ಪರಮೇಶ್ ಮಾತನಾಡಿ, ‘ಕೆರೆಗೆ ಕೊಳಚೆ ನೀರು ಸೇರದಂತೆ ಪಾಲಿಕೆ ನಡೆಸುವ ಯುಜಿಡಿ ಕಾಮಗಾರಿಗೆ ಸಂಪೂರ್ಣ ಅನುಮತಿ ನೀಡುತ್ತೇವೆ. ಪ್ರಾಣಿಗಳನ್ನು ಹೊರಬಾರದಂತೆ ತಡೆಯುತ್ತೇವೆ’ ಎಂದರು.

ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ‘ಜಿ’, ‘ಎಚ್’ ಬ್ಲಾಕ್ ಮತ್ತು ಆರೋಗ್ಯ ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನಾಗರಾಜ ಮೂರ್ತಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-38-695648731

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.