ಮೈಸೂರು: ನಗರದ ಅಶೋಕಪುರಂನಲ್ಲಿರುವ ಅಂಬೇಡ್ಕರ್ ಪ್ರತಿಮೆ ಮುಂಭಾಗ ಶುಕ್ರವಾರ ನೆರೆದಿದ್ದ ಪೌರಕಾರ್ಮಿಕರಲ್ಲಿ ವಿಶೇಷ ಸಂಭ್ರಮ ಮನೆ ಮಾಡಿತ್ತು. ಅದು ಅವರಿಗಾಗಿಯೇ ಪ್ರಗತಿ ಪ್ರಕಾಶನವು ವಿಶೇಷವಾಗಿ ಏರ್ಪಡಿಸಿದ್ದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮ.

ಬುದ್ಧ ಪೂರ್ಣಿಮೆಯ ದಿನವೂ ಆಗಿದ್ದರಿಂದ ಬುದ್ಧನ ಪ್ರಾರ್ಥನಾ ಗೀತೆ ಹಾಡುತ್ತಾ ಗಣ್ಯರು ಅಂಬೇಡ್ಕರ್ಗೆ ನಮನ ಸಲ್ಲಿಸಿದರು. ಕಾರ್ಮಿಕ ಸಚಿವರಾಗಿ ಅಂಬೇಡ್ಕರ್ ದೇಶದ ಕಾರ್ಮಿಕ ಸಮುದಾಯದ ಏಳಿಗೆಗಾಗಿ ದುಡಿದ ಬಗೆಯನ್ನು ಸ್ಮರಿಸಲಾಯಿತು. ನಂತರ ಚಿಕ್ಕಮ್ಮಾನಿಕೇತನ ಕಲ್ಯಾಣಮಂಟಪದಲ್ಲಿ ಎಲ್ಲರಿಗೂ ಹೋಳಿಗೆ ಊಟವನ್ನು ಬಡಿಸಲಾಯಿತು.

ಅಶೋಕಪುರಂ ಠಾಣೆಯ ಇನ್ಸ್ಪೆಕ್ಟರ್ ರೋಹಿತ್ ಸಿ.ಇ, ಉಪನ್ಯಾಸಕ ಎಲ್.ಸಿ.ಅಶೋಕ, ‘ಪ್ರಜಾವಾಣಿ’ ಮೈಸೂರು ಬ್ಯೂರೋ ಮುಖ್ಯಸ್ಥ ಕೆ.ನರಸಿಂಹಮೂರ್ತಿ ಹಾಗೂ ಕಾರ್ಯಕ್ರಮದ ಆಯೋಜಕರಾದ ಪುರುಷೋತ್ತಮ ಪೌರಕಾರ್ಮಿಕರ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ‘ಸಮಾಜದ ಸ್ವಚ್ಛತೆಗೆ ಶ್ರಮ ವಹಿಸುವ ಎಲ್ಲರಿಗೂ ಅಗತ್ಯ ಸೌಲಭ್ಯಗಳು ಸಕಾಲಕ್ಕೆ ದೊರಕುವಂತಾಗಲಿ’ ಎಂದು ಹಾರೈಸಿದರು. ಮಹಾನಗರ ಪಾಲಿಕೆಯ ಸ್ವಚ್ಛತಾ ಮೇಲ್ವಿಚಾರಕರಾದ ಸಿ.ಮೋಹನ್ ಪಾಲ್ಗೊಂಡಿದ್ದರು.

ಹೋಳಿಗೆ ಊಟ ಸವಿದ ಬಳಿಕ ಸಂಘಟಕರನ್ನು ಶ್ಲಾಘಿಸಿದ ಪೌರಕಾರ್ಮಿಕರು, ‘ಕೇವಲ ಬಾಯಿಮಾತಿನಲ್ಲಿ ಹೊಗಳುವ ಜನರ ನಡುವೆ, ನಮ್ಮ ಸೇವೆಯನ್ನು ಸ್ಮರಿಸಿ, ವಿಶೇಷವಾಗಿ ಭೋಜನದ ವ್ಯವಸ್ಥೆ ಮಾಡಿರುವುದು ಅಪಾರ ಸಂತಸ ತಂದಿದೆ. ಇದೇ ಮೊದಲ ಬಾರಿಗೆ ನಮಗೆ ಇಂಥ ವಿಶೇಷ ಅನುಭವವಾಗಿದೆ’ ಎಂದು ಸಂತಸಪಟ್ಟರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-39-2057884532

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.