ಮೈಸೂರು: ‘ರೇಡಿಯಾಲಜಿಯು ಆರೋಗ್ಯ ಕ್ಷೇತ್ರದ ಅತ್ಯಂತ ಪ್ರಮುಖ ಅಂಗವಾಗಿದ್ದು, ಹೃದ್ರೋಗ ವಿಭಾಗಕ್ಕೂ ಬಹಳ ಸಹಕಾರಿಯಾಗಿದೆ’ ಎಂದು ಜಯದೇವ ಹೃದ್ರೋಗ ಮತ್ತು ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಬಿ. ದಿನೇಶ್ ಹೇಳಿದರು.

ಇಲ್ಲಿನ ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಶನಿವಾರ ಇಂಡಿಯನ್ ರೇಡಿಯಾಲಜಿಕಲ್ ಮತ್ತು ಇಮೇಜಿಂಗ್ ಅಸೋಸಿಯೇಷನ್, ಇಂಡಿಯನ್ ಕಾಲೇಜ್ ಆಫ್ ರೇಡಿಯಾಲಜಿ ಇಮೇಜಿಂಗ್ ಇಂಡಿಯನ್ ರೇಡಿಯಾಲ ಜಿಕಲ್ ಮತ್ತು ಇಮೇಜಿಂಗ್ ಅಸೋಸಿಯೇಷನ್ ಕರ್ನಾಟಕ ವತಿಯಿಂದ ಹಮ್ಮಿಕೊಂಡಿದ್ದ ‘ಡಾ.ಜ್ಞಾನ್ ಪಿ. ಲಾಲ್ ಸಿಎಂಇ–2026’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ರೇಡಿಯಾಲಜಿ ಬಹುತೇಕ ಎಲ್ಲಾ ವೈದ್ಯಕೀಯ ವಿಭಾಗಗಳಿಗೂ ಅಗತ್ಯವಾದ ಸಹಾಯಕ ವಿಭಾಗವಾಗಿದೆ. ಇದು ಈಗ ಕೇವಲ ಚಿತ್ರಗಳನ್ನು ಓದುವ ಅಥವಾ ಅರ್ಥೈಸುವ ವಿಭಾಗವಾಗಷ್ಟೇ ಉಳಿದಿಲ್ಲ. ಇಂದಿನ ರೇಡಿಯಾಲಜಿಸ್ಟ್ಗಳು ನಿಖರ ರೋಗನಿರ್ಣಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ’ ಎಂದರು.

‘ದೇಶದ ಜನಸಂಖ್ಯೆಗೆ ಹೋಲಿಸಿದರೆ ರೇಡಿಯಾಲಜಿಸ್ಟ್ಗಳ ಸಂಖ್ಯೆ ಕಡಿಮೆ ಇದೆ’ ಎಂದು ತಿಳಿಸಿದರು.

ತಲುಪಿದಾಗ ಸಾರ್ಥಕ: ‘ಪ್ರಸ್ತುತ ವೈದ್ಯಕೀಯ ಕ್ಷೇತ್ರವು ಅತ್ಯಾಧುನಿಕ ತಂತ್ರಜ್ಞಾನದ ಮತ್ತು ಕೃತಕ ಬುದ್ಧಿಮತ್ತೆ (ಎಐ) ಯುಗಕ್ಕೆ ಪ್ರವೇಶಿಸಿದೆ. ಆದರೆ, ಈ ತಂತ್ರಜ್ಞಾನಗಳು ಬಡವರು ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ತಲುಪಿದಾಗ ಮಾತ್ರ ಸಾರ್ಥಕ ಆಗುತ್ತವೆ’ ಎಂದು ಹೇಳಿದರು.

‘ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಎಂಟು ಮಂದಿ ರೆಡಿಯಾಲಜಿಸ್ಟ್ಗಳು ಇದ್ದಾರೆ. ಅತ್ಯಾಧುನಿಕ ಸಿ.ಟಿ.ಎಂ.ಆರ್.ಇ. ಆಲ್ಟ್ರಾಸೌಂಡ್ ಸೌಲಭ್ಯಗಳಿವೆ. ಪ್ರತಿದಿನ 30ರಿಂದ 40 ಸಿ.ಟಿ. ಕರೋನರಿ ಆಂಜಿಯೋಗ್ರಾಂ ಮಾಡಲಾಗುತ್ತದೆ. ಜಯದೇವದಲ್ಲಿ ಪ್ರತಿದಿನ 2ಸಾವಿರ ರೋಗಿಗಳಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ, 200ಕ್ಕೂ ಹೆಚ್ಚು ಕ್ಯಾತ್ಲ್ಯಾಬ್ ಪ್ರಕ್ರಿಯೆ ನಡೆಯುತ್ತಿವೆ’ ಎಂದು ಮಾಹಿತಿ ನೀಡಿದರು.

‘ನಮ್ಮ ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆ ನೀಡುತ್ತಿದ್ದೇವೆ. ಕಳೆದ 6 ತಿಂಗಳಲ್ಲಿ ಜಯದೇವದಲ್ಲಿ 600 ಹಾಸಿಗೆಗಳನ್ನು ಹೆಚ್ಚಿಸಲಾಗಿದೆ. ಬಿಪಿಎಲ್ ಕಾರ್ಡ್ ಇರಲಿ, ಇಲ್ಲದಿರಲಿ ಮಾನವೀಯ ದೃಷ್ಟಿಯಿಂದ ಚಿಕಿತ್ಸೆಗೆ ಆದ್ಯತೆ ನೀಡುತ್ತೇವೆ’ ಎಂದರು.

ಭಾರತೀಯ ರೇಡಿಯಾಲಜಿ ಮತ್ತು ಇಮೇಜಿಂಗ್ ಅಸೋಸಿಯೇಷನ್ ನಿರ್ಗಮಿತ ಅಧ್ಯಕ್ಷ ಅಮರನಾಥ್, ಅಧ್ಯಕ್ಷ ಸುಧೀರ್ ಕಾಳೆ, ಚುನಾಯಿತ ಅಧ್ಯಕ್ಷ ಸಿ.ಪಿ. ನಂಜರಾಜ್, ಉಪಾಧ್ಯಕ್ಷ ಎಂ.ವಿ.ಕೆ. ರಾವ್, ಕಾರ್ಯದರ್ಶಿ ನಟೇಶ ಗುಪ್ತಾ, ವಿಜಯ ಸಾರಥಿ, ಮೈಸೂರು ರೇಡಿಯಾಲಜಿಸ್ಟ್ ಅಸೋಸಿಯೇಷನ್ ಅಧ್ಯಕ್ಷ ಶಿವಪ್ರಸಾದ್, ಡಾ.ಉಮೇಶ್ ಕೃಷ್ಣಮೂರ್ತಿ, ಡಾ.ನಂಜರಾಜ್ ಸಿ.ಪಿ., ಡಾ.ಶಿವಪ್ರಸಾದ್, ಡಾ.ಹರ್ಷಬಸಪ್ಪ, ಡಾ.ರಾಜೀತ, ಡಾ.ವೀಣಾನಂಜಪ್ಪ, ಡಾ.ಶ್ರೀನಿಧಿ, ಹರೀಶ್ ಕುಮಾರ್, ಚಂದ್ರಕಮಲ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.