ಮೈಸೂರು: ನೈರುತ್ಯ ರೈಲ್ವೆಯ ಮೈಸೂರು ವಿಭಾಗವು 2025–26ನೇ ಸಾಲಿನ 70ನೇ ರೈಲ್ವೆ ಸಪ್ತಾಹವನ್ನು ಶನಿವಾರ ನಗರದ ಮೈಸೂರು ಚಾಮುಂಡಿ ಕ್ಲಬ್ನಲ್ಲಿ ಆಚರಿಸಿತು.

ಉದ್ಘಾಟಿಸಿದ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್ ರೈಲ್ವೆ ಸೇವಾ ಪುರಸ್ಕಾರ 2025–26 ಹಾಗೂ ಡಿಆರ್ಎಂ ಪ್ರಶಂಸಾ ಪ್ರಶಸ್ತಿಗಳನ್ನು ಉದ್ಯೋಗಿಗಳಿಗೆ ಪ್ರದಾನ ಮಾಡಿದರು.

ಭಾರತೀಯ ರೈಲ್ವೆಯ ಕಾರ್ಯಕ್ಷಮತೆ ಮತ್ತು ಅಭಿವೃದ್ಧಿಗೆ ನೀಡಿದ ಅತ್ಯುತ್ತಮ ಸೇವೆ, ಸಮರ್ಪಣೆ ಮತ್ತು ಕೊಡುಗೆ ಗುರುತಿಸಿ ಪ್ರಶಸ್ತಿಗಳನ್ನು ನೀಡಲಾಯಿತು. ಒಟ್ಟು 22 ಮಂದಿ ರೈಲ್ವೆ ಸೇವಾ ಪುರಸ್ಕಾರ ಪಡೆದರೆ, 55 ಮಂದಿ ಡಿಆರ್ಎಂ ಪ್ರಶಂಸಾ ಪ್ರಶಸ್ತಿಗೆ ಭಾಜನರಾದರು.

ಎಸ್ಡಬ್ಲ್ಯುಆರ್ಡಬ್ಲ್ಯುಡಬ್ಲ್ಯೂಒ ಮೈಸೂರು ವಿಭಾಗದಿಂದ ಹಿರಿಯ ಹಾಗೂ ನಿವೃತ್ತ ರೈಲ್ವೆ ನೌಕರರನ್ನು ಗೌರವಿಸಲಾಯಿತು.

ಚಿಕ್ಕಜಾಜೂರು ನಿಲ್ದಾಣವು ಅತ್ಯುತ್ತಮ ನಿರ್ವಹಿತ ಪ್ರಮುಖ ನಿಲ್ದಾಣ ಪ್ರಶಸ್ತಿ ಪಡೆದರೆ, ಹೊನ್ನವಳ್ಳಿ ರಸ್ತೆ ನಿಲ್ದಾಣವು ಅತ್ಯುತ್ತಮ ನಿರ್ವಹಿತ ಸಣ್ಣ ನಿಲ್ದಾಣ ಪ್ರಶಸ್ತಿ ತನ್ನದಾಗಿಸಿಕೊಂಡಿತು.

ಶಿವಮೊಗ್ಗ ರೈಲ್ವೆ ಕಾಲೊನಿ ಮತ್ತು ಮೊಳಕಾಲ್ಮೂರು ರೈಲ್ವೆ ಕಾಲೊನಿಗಳು ಕ್ರಮವಾಗಿ ಅತ್ಯುತ್ತಮ ನಿರ್ವಹಿತ ದೊಡ್ಡ ಮತ್ತು ಸಣ್ಣ ಕಾಲೊನಿಗಳೆಂಬ ಪ್ರಶಸ್ತಿಗೆ ಭಾಜನವಾದವು.

ಮೈಸೂರು–ಸಾಯಿನಗರ ಶಿರಡಿ ವಾರಾಂತ್ಯ ಎಕ್ಸ್ಪ್ರೆಸ್ (ರೇಕ್ ಸಂ. 16217/18) ಅತ್ಯುತ್ತಮ ನಿರ್ವಹಿತ ರೇಕ್ ಪ್ರಶಸ್ತಿ ಗಳಿಸಿತು. ಸುಬ್ರಹ್ಮಣ್ಯ ರಸ್ತೆ ರನ್ನಿಂಗ್ ರೂಮ್ ಅತ್ಯುತ್ತಮ ನಿರ್ವಹಿತ ರನ್ನಿಂಗ್ ರೂಮ್ ಪ್ರಶಸ್ತಿಗೆ ಪಾತ್ರವಾಯಿತು.

ಚಿತ್ರದುರ್ಗವು ಅತ್ಯುತ್ತಮ ನಿರ್ವಹಿತ ಟ್ರಾಕ್ಷನ್ ಸಬ್ ಸ್ಟೇಷನ್ ಹಾಗೂ ಎಸ್ಎಸ್ಇ/ ಸಿಗ್ನಲ್ ವಿಭಾಗ ಪ್ರಶಸ್ತಿ ಪಡೆಯಿತು.

ಹಾಸನ ವಿಭಾಗ ಎಸ್ಎಸ್ಇ/ಟೆಲಿಕಾಂ ಪ್ರಶಸ್ತಿ ಗಳಿಸಿದರೆ, ಸಕಲೇಶಪುರ ಅತ್ಯುತ್ತಮ ಅಪಘಾತ ಪರಿಹಾರ ರೈಲು ಪ್ರಶಸ್ತಿ ತನ್ನದಾಗಿಸಿಕೊಂಡಿತು.

ಟ್ರಾಕ್ಷನ್ ಆಪರೇಷನ್ಸ್ ವಿಭಾಗಕ್ಕೆ ನವೀನತಾ ಶೀಲ್ಡ್ ನೀಡಲಾಯಿತು. ಮೈಸೂರು ಯಾಂತ್ರಿಕ ವಿಭಾಗದ ಕಚೇರಿಗೆ ಅತ್ಯುತ್ತಮ ನಿರ್ವಹಿತ ಕಚೇರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಎಸ್ಎಸ್ಇ/ಪಿ.ವೇ/ಕೃಷ್ಣರಾಜನಗರ ವಿಭಾಗಕ್ಕೆ ಅತ್ಯುತ್ತಮ ಪಿ.ವೇ. ವಿಭಾಗ ಪ್ರಶಸ್ತಿ ನೀಡಲಾಯಿತು. ಕೋಚ್ ಮತ್ತು ವ್ಯಾಗನ್ ರೈಲ್ ಮದಾದ್ ವಾರ್ ರೂಮ್ ಅತ್ಯುತ್ತಮ ವಿಭಾಗೀಯ ನಿಯಂತ್ರಣ ಪ್ರಶಸ್ತಿ ಗಳಿಸಿತು.

ಲಲಿತಾ ಶಾಲೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು. ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶಮ್ಮಾ ಹಮೀದ್, ಶಾಖಾಧಿಕಾರಿ , ಸಂಘಟನೆ ಪ್ರತಿನಿಧಿಗಳು, ನೌಕರರರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-40-817466050

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.