ಮೈಸೂರು: ನಗರದ 66/11 ಕೆ.ವಿ. ಬನ್ನಿಮಂಟಪ ಉಪಕೇಂದ್ರದಿಂದ 1 ಕಿ.ಮೀ. ಉದ್ಯದ ಎಂಎನ್ಜಿಟಿ (ಮೈಸೂರು ಹೊಸ ಸರಕು ಟರ್ಮಿನಲ್) ಯಾರ್ಡ್ ಸಮೀಪ ಪ್ರಸ್ತಾಪಿಸಲಾದ ರೈಲ್ವೆ ಟಿಎಸ್ಎಸ್ಗೆ ಭೂಗತ ಕೇಬಲ್ ಉಪಯೋಗಿಸಿ 5,000 ಕೆ.ವಿ.ಎ. ವಿದ್ಯುತ್ ಸರಬರಾಜು ಕಲ್ಪಿಸುವ ಕಾಮಗಾರಿಯನ್ನು ಮೇ 30ರ ನಂತರ ಯಾವುದೇ ದಿನದಂದು ಚಾಲನೆಗೊಳಿಸಲು (ವಿದ್ಯುತ್ ಹರಿಸಲಾಗುವುದು) ಉದ್ದೇಶಿಸಲಾಗಿದೆ.

ಸಾರ್ವಜನಿಕರು, ರಸ್ತೆ ಗುತ್ತಿಗೆದಾರರು, ಕಟ್ಟಡ ನಿರ್ಮಾಣ ಗುತ್ತಿಗೆದಾರರು, ನೀರು ಸರಬರಾಜು, ಚರಂಡಿ, ಟೆಲಿಕಾಂ, ಗ್ಯಾಸ್ ಪೈಪ್ಲೈನ್ ಹಾಗೂ ಇತರ ಕಾಮಗಾರಿ ನಿರ್ವಹಿಸುವ ಗುತ್ತಿಗೆದಾರರು ಮತ್ತು ಇಲಾಖೆಯ ಅಧಿಕಾರಿಗಳು ಈ ಕೇಬಲ್ ಮಾರ್ಗದ ವ್ಯಾಪ್ತಿಯಲ್ಲಿ ಅಗೆಯುವುದು, ತೋಡುವುದು, ರಸ್ತೆ ನಿರ್ಮಾಣ, ಜೆಸಿಬಿ ಕಾರ್ಯ, ಕಬ್ಬಿಣದ ರಾಡ್ ಹೊಡೆಯುವುದು ಅಥವಾ ಇತರೆ ಕಾಮಗಾರಿಗಳನ್ನು ಕೈಗೊಳ್ಳಬಾರದು ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಕೋರಿದೆ.

‘ಸುರಕ್ಷತೆಯ ದೃಷ್ಟಿಯಿಂದ ಸೂಚನಾ ಕಲ್ಲುಗಳನ್ನು ಹಾಕಲಾಗಿದೆ. ಸಾರ್ವಜನಿಕರು ಇವುಗಳನ್ನು ಗಮನಿಸಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಕಡ್ಡಾಯ. ನಿರ್ಲಕ್ಷ್ಯದಿಂದ ಗಂಭೀರ ವಿದ್ಯುತ್ ಅವಘಡ ಹಾಗೂ ವಿದ್ಯುತ್ ವ್ಯತ್ಯಯ ಉಂಟಾಗುವ ಸಾಧ್ಯತೆಯೂ ಇರುತ್ತದೆ. ಸೂಚನೆ ಉಲ್ಲಂಘಿಸಿದಲ್ಲಿ ಯಾವುದೇ ರೀತಿಯ ಅಪಘಾತಕ್ಕೆ ನಿಗಮ ಜವಾಬ್ದಾರಿ ಆಗುವುದಿಲ್ಲ’ ಎಂದು ಹೇಳಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-39-1511525632

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.