ಮೈಸೂರು: ರೈಲ್ವೆ ಸಿಗ್ನಲ್ ಕೇಬಲ್ ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ರೈಲ್ವೆ ಸಂರಕ್ಷಣಾ ಪಡೆ (ಆರ್.ಪಿ.ಎಫ್) ಮೈಸೂರು ಘಟಕದ ಸಿಬ್ಬಂದಿ, ಕಳ್ಳತನವಾದ ರೈಲ್ವೆ ಆಸ್ತಿಯನ್ನು ವಶಪಡಿಸಿಕೊಂಡಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ನಿವಾಸಿಗಳಾದ ರಘು (23) ಮತ್ತು ತಿಪ್ಪಣ್ಣ (55) ಬಂಧಿತರು. ಮಾಹಿತಿ ಮೇರೆಗೆ ಆರ್.ಪಿ.ಎಫ್ ಸಿಬ್ಬಂದಿ ಅಶೋಕಪುರಂ ಮತ್ತು ಕಡಕೊಳ ರೈಲು ನಿಲ್ದಾಣಗಳ ಮಧ್ಯೆ ನಿಗಾವಹಿಸಿ ಮಂಗಳವಾರ ಕಾರ್ಯಾಚರಣೆ ನಡೆಸಿದರು. ಈ ವೇಳೆ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಇಬ್ಬರನ್ನು ತಡೆದು ವಿಚಾರಣೆಗೆ ಒಳಪಡಿಸಿದ್ದರು.

ಆರೋಪಿಗಳು ಸುಮಾರು ಒಂದು ತಿಂಗಳ ಹಿಂದೆ ರೈಲ್ವೆ ಸಿಗ್ನಲ್ ಕೇಬಲ್ ಸುಮಾರು 15 ಮೀಟರ್ ಕಳವು ಮಾಡಿರುವುದಾಗಿ ಒಪ್ಪಿಕೊಂಡರು. ಘಟನೆಯ ಸಂದರ್ಭದಲ್ಲಿ ಅವರು ರಾಜ್ಯ ನೀರಿನ ಪೈಪ್ ಲೈನ್ ಕಾಮಗಾರಿಯಲ್ಲಿ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಹಾಗೂ ಗುಂಡಿ ಅಗೆಯುವ ವೇಳೆ ಹೊರಬಿದ್ದ ರೈಲ್ವೆ ಕೇಬಲ್ ಗಮನಿಸಿ, ಮುಂಜಾನೆ ಸಮಯದಲ್ಲಿ ಕೇಬಲ್ ಕಳವು ಮಾಡಿ, ಶ್ರೀನಗರ ಲೇಔಟ್ ಪ್ರದೇಶಕ್ಕೆ ಸಾಗಿಸಿ, ತಾಮ್ರವನ್ನು ಪಡೆಯಲು ಅದನ್ನು ಸುಟ್ಟು ಮಾರಾಟ ಮಾಡಿರುವುದು ಗೊತ್ತಾಗಿದೆ.

‘ಆರೋಪಿಗಳ ಸ್ವಯಂ ಹೇಳಿಕೆ ಆಧಾರದ ಮೇಲೆ ಸ್ಥಳ ಪರಿಶೀಲಿಸಿದಾಗ ಸುಟ್ಟ ಕೇಬಲ್ ಅವಶೇಷಗಳು ಮತ್ತು ಪ್ಲಾಸ್ಟಿಕ್ ಚೀಲದಲ್ಲಿ ಮರೆಮಾಡಿದ್ದ ಸುಮಾರು 5 ಕೆ.ಜಿ ತಾಮ್ರ ತಂತಿಯನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ನೈಋತ್ಯ ರೈಲ್ವೆ ಮೈಸೂರು ವಿಭಾಗದ ವಿಭಾಗೀಯ ಹಣಕಾಸು ವ್ಯವಸ್ಥಾಪಕ ಪೃಥ್ವಿ ಎಸ್. ಹುಲ್ಲತ್ತಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-39-1319761402

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.