ಮೈಸೂರು: ಪ್ರಯಾಣಿಕರೊಬ್ಬರು ಕಳೆದುಕೊಂಡಿದ್ದ ಹ್ಯಾಂಡ್ಬ್ಯಾಗ್ ಸುರಕ್ಷಿತವಾಗಿ ಪತ್ತೆ ಹಚ್ಚಿ ಹಿಂತಿರುಗಿಸುವಲ್ಲಿ ರೈಲ್ವೆ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

67 ವರ್ಷ ವಯಸ್ಸಿನ ಕಾವೇರಿ ಬಿ. ಪೈ ಬ್ಯಾಗ್ ಪಡೆದವರು. ಅವರು ಶ್ರೀರಂಗಪಟ್ಟಣದಿಂದ ಕೆಎಸ್ಆರ್–ಬೆಂಗಳೂರುವರೆಗೆ ಸಂಚರಿಸಿದ ರೈಲು ಸಂಖ್ಯೆ 16228ರಲ್ಲಿ ಬಿ-2 ಕೋಚ್ನಲ್ಲಿ ಕಾಯ್ದಿರಿಸಿದ ಸೀಟು ಹೊಂದಿದ್ದರು. ಅವರು ಕೆಎಸ್ಆರ್ ಬೆಂಗಳೂರು ನಿಲ್ದಾಣದಲ್ಲಿ ಇಳಿಯುವ ವೇಳೆ ತಮ್ಮ ಹ್ಯಾಂಡ್ಬ್ಯಾಗ್ ಮರೆತು ಬಿಟ್ಟುಹೋಗಿದ್ದರು. ನಗದು ಹಾಗೂ ಆಭರಣವಿದ್ದ ಆ ಹ್ಯಾಂಡ್ಬ್ಯಾಗ್ ಅನ್ನು ಅದೇ ರೈಲಿನಲ್ಲಿ ಎಸ್ಎಂಇಟಿಯಿಂದ ಮೈಸೂರುವರೆಗೆ ಕರ್ತವ್ಯದಲ್ಲಿದ್ದ ಪ್ರಯಾಣ ಟಿಕೆಟ್ ಪರಿಶೀಲಕರಾದ ಕಲಾಬಾಯಿ ಅವರು ಗಮನಿಸಿ ಸುರಕ್ಷಿತವಾಗಿ ಇಟ್ಟುಕೊಂಡಿದ್ದರು. ಮೈಸೂರಿನ ಮುಖ್ಯ ಟಿಕೆಟ್ ಪರಿಶೀಲಕರಿಗೆ ಒಪ್ಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260411-40-1867176520

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.