ಮೈಸೂರು: ಮೈಸೂರು ವಾಣಿಜ್ಯ ಮಂಡಳಿ ಮತ್ತು ಜೈನ್ ಮಿಲನ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಇಲ್ಲಿನ ರೈಲು ನಿಲ್ದಾಣದಲ್ಲಿನ ಬಳಕೆಗಾಗಿ 25 ನೀರಿನ ಮಡಕೆಗಳು ಹಾಗೂ ವೃದ್ಧರು, ಅಂಗವಿಕಲರ ಅನುಕೂಲಕ್ಕಾಗಿ 10 ಗಾಲಿ ಕುರ್ಚಿಗಳನ್ನು ದೇಣಿಗೆ ನೀಡಲಾಯಿತು.

ನೈರುತ್ಯ ರೈಲ್ವೆ ಮೈಸೂರು ವಿಭಾಗದ ಡಿಆರ್ಎಂ ಮುದಿತ್ ಮಿತ್ತಲ್ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು.

‘ಈ ಗಾಲಿ ಕುರ್ಚಿಗಳಿಂದ ವೃದ್ಧರು ಹಾಗೂ ಅಂಗವಿಕಲರಿಗೆ ಹೆಚ್ಚಿನ ಸಹಾಯವಾಗಲಿದೆ. ಇವು ಸುಲಭ ಸಂಚಾರ ಮತ್ತು ಪ್ರವೇಶ ಸೌಲಭ್ಯವನ್ನು ಒದಗಿಸಲಿವೆ. ಮಡಕೆಗಳಲ್ಲಿ ಪ್ರಯಾಣಿಕರಿಗೆ ಶುದ್ಧ ನೀರನ್ನು ಒದಗಿಸಲಾಗುವುದು’ ಎಂದು ಮಿತ್ತಲ್ ತಿಳಿಸಿದರು.

‘ಈ ದೇಣಿಗೆಯು ಎರಡೂ ಸಂಸ್ಥೆಗಳ ಸಾಮಾಜಿಕ ಜವಾಬ್ದಾರಿ ಮತ್ತು ಸಮುದಾಯ ಸೇವೆಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಈ ಕೊಡುಗೆಯು ಪ್ರಯಾಣಿಕರ ಸೌಕರ್ಯ ಮತ್ತು ಒಟ್ಟಾರೆ ಸೇವಾ ಮಟ್ಟವನ್ನು ಉತ್ತಮಗೊಳಿಸುವ ನಿರೀಕ್ಷೆಯಿದೆ’ ಎಂದರು.

ಎಡಿಆರ್ಎಂ ಶಮ್ಮಾಸ್ ಹಮೀದ್, ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಲೋಹಿತೇಶ್ವರ ಜೆ., ಝಡ್ಆರ್ಯುಸಿಸಿ ಹಾಗೂ ಡಿಆರ್ಯುಸಿಸಿ ಸದಸ್ಯರು, ಮೈಸೂರು ವಾಣಿಜ್ಯ ಮಂಡಳಿ ಮತ್ತು ಜೈನ್ ಮಿಲನ್ ಚಾರಿಟಬಲ್ ಟ್ರಸ್ಟ್ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.