ಮೈಸೂರು: ರೈಲಿನಲ್ಲಿ ಟಿಟಿಇ ಸೋಗಿನಲ್ಲಿ ಪ್ರಯಾಣಿಕರಿಂದ ಹಣ ವಸೂಲಿಗೆ ಯತ್ನಿಸಿದ ವ್ಯಕ್ತಿಯನ್ನು ರೈಲ್ವೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ನಿವಾಸಿ ರಕೀಬುದ್ದೀನ್ ಎಂ.ಕೆ. ಬಂಧಿತ ವ್ಯಕ್ತಿ. ‘ರೈಲ್ವೆ ಅಧಿಕಾರಿ ಯಶವಂತ್ ಜೆ. ಅವರು ಕೆಎಸ್ಆರ್ ಬೆಂಗಳೂರು– ಶಿವಮೊಗ್ಗ ಟೌನ್ ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಟಿಕೆಟ್ ಪರಿಶೀಲನಾ ಕರ್ತವ್ಯ ನಿರ್ವಹಿಸುತ್ತಿದ್ದಾಗ ಅರಸೀಕೆರೆ ನಿಲ್ದಾಣ ದಾಟಿದ ನಂತರ ಸಿ-1 ಕೋಚ್ನಲ್ಲಿ ರಕೀಬುದ್ದೀನ್ ತಾನು ಟಿಟಿಇ ಎಂದು ಹೇಳಿಕೊಂಡಿದ್ದು, ಪರಿಶೀಲನೆ ವೇಳೆ ಆತ ತನ್ನ ಮೊಬೈಲ್ ಫೋನ್ನಲ್ಲಿ ನಕಲಿ ಗುರುತಿನ ಚೀಟಿ ತೋರಿಸಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ವಿಚಾರಣೆ ವೇಳೆ, ನಾನು ರೈಲ್ವೆ ನೌಕರನಲ್ಲ, ಪ್ರಯಾಣಿಕರಿಂದ ಹಣ ಸಂಗ್ರಹಿಸುವ ಉದ್ದೇಶದಿಂದ ಟಿಟಿಇ ವೇಷಧಾರಿಯಾಗಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದುದಾಗಿ ಒಪ್ಪಿಕೊಂಡಿದ್ದಾನೆ. ಬಳಿಕ ಕರ್ತವ್ಯದಲ್ಲಿದ್ದ ಟಿಟಿಇ ಅವರು ಆರೋಪಿಯನ್ನು ಇಲಾಖೆಯ ಅಧಿಕಾರಿಗಳ ಮುಂದೆ ಹಾಜರುಪಡಿಸಿದ್ದರು. ಅವರು ಅರಸೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು’ ಎಂದು ಮಾಹಿತಿ ನೀಡಿದ್ದಾರೆ.

ಮೊಬೈಲ್ ಫೋನ್ ಪತ್ತೆ: ಗುಂತಕಲ್ನಿಂದ ಮಂಡ್ಯವರೆಗೆ ಪ್ರಯಾಣಿಸುವಾಗ ಆಂಧ್ರಪ್ರದೇಶದ ನಿವಾಸಿ ದಿಲೀಪ್ ಕುಮಾರ್ ರೆಡ್ಡಿ ಮೊಬೈಲ್ ಫೋನ್ ಕಳೆದು ಹೋಗಿದ್ದು, ‘ಆಪರೇಷನ್ ಅಮಾನತ್’ ವೇಳೆ ಆರ್ಪಿಎಫ್ ತಂಡವು ಪತ್ತೆ ಹಚ್ಚಿ, ವಾರಸುದಾರಿಗೆ ಹಿಂದಿರುಗಿಸಿದೆ ಎಂದು ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-42-2009990982

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.