ಮೈಸೂರು: ನಗರದ ಕೆಲವು ಪ್ರದೇಶದಲ್ಲಿ ಗುರುವಾರ ಸಂಜೆ ಕೆಲಕಾಲ ಉತ್ತಮ ಮಳೆಯಾಯಿತು. ಜೋರಾದ ಗಾಳಿಗೆ ಮರ ಹಾಗೂ ರೆಂಬೆ– ಕೊಂಬೆಗಳು ರಸ್ತೆಗೆ ಉರುಳಿದವು.

ವಿದ್ಯಾರಣ್ಯಪುರಂನ ಸಾರ್ವಜನಿಕ ಹಾಸ್ಟೆಲ್, ಉದಯಗಿರಿ 2ನೇ ಅಡ್ಡ ರಸ್ತೆ, ವಿವೇಕಾನಂದ ವೃತ್ತ, ಆಂದೋಲನ ವೃತ್ತ ಬಳಿ ಮರದ ರೆಂಬೆ ಕೊಂಬೆಗಳು ಮುರಿದು ರಸ್ತೆಗೆ ಬಿದ್ದವು.

ಮನೆಯೊಂದರ ಮುಂಭಾಗ ನಿಲ್ಲಿಸಿದ್ದ ಕಾರಿನ ಮೇಲೆ ಮರ ಉರುಳಿ ಬಿತ್ತು. ತಕ್ಷಣ ಪಾಲಿಕೆ ಅಭಯ ತಂಡ ಕಾರ್ಯಾಚರಣೆ ನಡೆಸುವ ಮೂಲಕ ಮರದ ಕೊಂಬೆಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

ನಗರದ ಹೃದಯಭಾಗ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಕೆಲ ಕಾಲ ಮಳೆ ಸುರಿಯಿತು. ನಗರದ ಹೊರ ವಲಯ ವ್ಯಾಪ್ತಿಯಲ್ಲಿನ ಬಡಾವಣೆಗಳ ವ್ಯಾಪ್ತಿಯಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾದರೂ ತುಂತುರು ಮಳೆಗೆ ಸೀಮಿತವಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-39-1377750091

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.