ಮೈಸೂರು: ‘ಮೈಸೂರು ನಗರಕ್ಕೆ ರಾಜಮಾತೆ ಕೊಡುಗೆ ಅಪಾರ. ಕೆಆರ್ಎಸ್ ಅಣೆಕಟ್ಟೆ ಕಟ್ಟುವಾಗ ಹಣಕಾಸಿನ ಕೊರತೆಯಾದಾಗ ತಮ್ಮ ಒಡವೆ ಮಾರಿ ಕಾಮಗಾರಿ ಪೂರ್ಣಗೊಳಿಸಲು ಕಾರಣವಾದವರು. ಅವರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ’ ಎಂದು ಬಿಜೆಪಿ ಮೈಸೂರು ವಿಭಾಗದ ಸಹಪ್ರಭಾರಿ ಈ.ಸಿ. ನಿಂಗರಾಜ್ ಗೌಡ ಹೇಳಿದರು.

ವೀರ ಸಾವರ್ಕರ್ ಯುವ ಬಳಗದಿಂದ ಸೋಮವಾರ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜಮಾತೆ ಕೆಂಪನಂಜಮ್ಮಣ್ಣಿ ಅವರ ಫೋಟೊಗೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

‘ಮೈಸೂರು ನಗರದ ವಿಸ್ತರಣೆ ಹಾಗೂ ಪೈಪ್ಲೈನ್ ಮೂಲಕ ನೀರು ಸರಬರಾಜು ಮತ್ತು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಶಂಕುಸ್ಥಾಪನೆ, ದೇಶದಲ್ಲೇ ಮೊದಲ ಬಾರಿಗೆ ಶಿವನಸಮುದ್ರ ವಿದ್ಯುತ್ ಉತ್ಪಾದನೆ, ರೈತರ ಅನೂಕೂಲಕ್ಕಾಗಿ ಚೆತ್ರದುರ್ಗದಲ್ಲಿ ಮಾರಿ ಕಣಿವೆ ಅಣೆಕಟ್ಟು, ಮಹಿಳೆಯರ ವಿದ್ಯಾಭ್ಯಾಸಕ್ಕಾಗಿ ಮಹಾರಾಣಿ ಕಾಲೇಜು ಸ್ಧಾಪನೆ, ಬೆಂಗಳೂರಿನಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಆರಂಭಿಸಿದ್ದು ಅವರ ಕಾರ್ಯಕ್ಕೆ ಸಾಕ್ಷಿಯಾಗಿದೆ. ಇಂತಹ ಸಾಧಕಿಯರು ಎಲ್ಲರಿಗೂ ಸ್ಫೂರ್ತಿ’ ಎಂದು ಹೇಳಿದರು.

ಬಿಜೆಪಿ ಮುಖಂಡರಾದ ಪರಮೇಶ್ ಗೌಡ, ಬಾಲಣ್ಣ, ಸಂದೇಶ್, ಉಮೇಶ್, ಪ್ರಮೋದ್ ಗೌಡ, ಭೈರಪ್ಪ, ಗಂಗಣ್ಣ, ಗೋಪಾಲ್, ಅಶ್ವಥ್, ಜಯಪ್ಪ, ಕೆ.ಎನ್. ಸಂತೋಷ್, ಮಂಜುನಾಥ್ ಎಸ್. ಗೌಡ, ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕರಾದ ವಸಂತ ಮನೀಶ್, ಚಂದ್ರಕಲಾ, ರಶ್ಮಿ, ಮಧು, ಗೀತಾ, ಒಕ್ಕಲಿಗರ ಸಂಘದ ನಿರ್ದೇಶಕರಾದ ಚೇತನ್ ಗೌಡ, ಪ್ರವೀಣ್, ರಾಜಣ್ಣ, ವಿಜಯ್, ಅಭಿ, ವಿನೋದ, ವಿ.ಎಸ್. ಕಿರಣ್, ಬ್ರಹ್ಮಚಾರ್, ಯೋಗೇಶ್, ನಾಗೇಶ್, ಅನೋಜ್, ರಾಜೇಶ್, ಮೋಹಿತ್ ಗೌಡ, ಚೇತನ್ ಗೌಡ ಟಿಎಸ್ ಅರುಣ್, ವಿನೋದ್ ಅರಸ್, ಮಂಜುನಾಥ್, ಮೋಹನ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.