ಮೈಸೂರು: ಡಾ. ರಾಜಕುಮಾರ್ ಉದ್ಯಾನದಲ್ಲಿರುವ ರಾಜ್ಕುಮಾರ್ ಪ್ರತಿಮೆಗೆ ಹೂವಿನ ಹಾರ ಹಾಕಲು ಅಳವಡಿಸಿರುವ ಏಣಿಯನ್ನು ಜಯರಾಮ್ ಸಿಪಿಎಂ ಶನಿವಾರ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ‘ರಾಜ್ಕುಮಾರ್ ತಮ್ಮ ಅಭಿನಯದಿಂದ ಹೆಸರು ಮಾಡಿ ವಿಶ್ವದಾದ್ಯಂತ ಅಭಿಮಾನಿಗಳನ್ನು ಪಡೆದರು. ಅವರ ಹೆಸರಿಗೆ ಧಕ್ಕೆಯಾಗದಂತೆ, ಕೆಲಸ ಮಾಡೋಣ’ ಎಂದರು.

ಏಣಿಯನ್ನು ಕೊಡುಗೆಯಾಗಿ ನೀಡಿದ ಡಾ. ರಾಜ್ ಎಲ್ಐಸಿ ಕುಟುಂಬದ ಸಿದ್ದಪ್ಪ, ‘ಈ ಉದ್ಯಾನದಲ್ಲಿ ಪ್ರತಿಮೆಗೆ ಹಾರ ಹಾಕಲು ಬಹಳ ಕಷ್ಟಪಡುತ್ತಿದ್ದರು.ಹೀಗಾಗಿ ಏಣಿಯನ್ನು ನೀಡಿದ್ದೇವೆ’ ಎಂದು ತಿಳಿಸಿದರು.

ಕನ್ನಡ ವೇದಿಕೆ ಅಧ್ಯಕ್ಷ ಎಸ್. ಬಾಲಕೃಷ್ಣ ಮಾತನಾಡಿ, ‘ರಾಜ್ಕುಮಾರ್ ಮೈಸೂರಿಗೆ ಬಂದಾಗ ಜೊತೆಗೆ ಓಡಾಡುತ್ತಿದ್ದವರು ಈಗ ಇತ್ತ ತಿರುಗಿಯೂ ನೋಡುತ್ತಿಲ್ಲ. ಅವರೆಲ್ಲ ರಾಜ್ಕುಮಾರ್ ಅವರಿಂದ ಬಹಳಷ್ಟು ಸಹಾಯ ಪಡೆದು ಅವರ ಜಯಂತಿಯನ್ನೂ ಮಾಡುವುದಿಲ್ಲ’ ಎಂದು ಹೇಳಿದರು.

ಡಾ.ರಾಜ್ ಕನ್ನಡ ಸೇನೆ ಅಧ್ಯಕ್ಷ ಮಹದೇವ ಸ್ವಾಮಿ, ಗೋವಿಂದರಾಜು, ಹೊನಕೆರೆ ಸ್ವಾಮಿ, ನಾಗ ನಂಜಪ್ಪ, ಪ್ಯಾಲೇಸ್ ಬಾಬು, ರವಿ ನಾಲ ಬೀದಿ, ಹರೀಶ್, ಚಾಮರಾಜು ಮಂಟಗಳ್ಳಿ, ಸುರೇಶ್, ಶಿವು ಗೌಡ, ಬಿಡ ಬಾಬು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-39-993661535

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.