ಮೈಸೂರು: ನಗರದ ಶ್ರೀರಾಮಪೇಟೆಯ ಶ್ರೀರಾಮಾಭ್ಯುದಯ ಸಭಾ ಚಾರಿಟಬಲ್ ಟ್ರಸ್ಟ್ನಿಂದ ಹಮ್ಮಿಕೊಂಡಿರುವ 136ನೇ ಶ್ರೀರಾಮೋತ್ಸವ ಅಂಗವಾಗಿ ಆಲಮ್ಮನವರ ಛತ್ರದಲ್ಲಿ ಏರ್ಪಡಿಸಿರುವ ಸಂಗೀತೋತ್ಸವಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.

ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಉದ್ಧಾಟಿಸಿ, ಸ್ಮರಣಸಂಚಿಕೆ ಬಿಡುಗಡೆ ಮಾಡಿದರು. ಟ್ರಸ್ಟ್ ಅಧ್ಯಕ್ಷ ಎನ್.ಶ್ರೀರಾಮ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಜಗದೀಶ್ ಹಾಗೂ ಖಜಾಂಚಿ ಪದ್ಮಾ ಅನಂತ್ ಪಾಲ್ಗೊಂಡಿದ್ದರು. ನಿರಾಮಯ ಹಾಗೂ ಸುಬ್ಬುಲಕ್ಷ್ಮಿ ಪ್ರಾರ್ಥಿಸಿದರು. ಕಾರ್ಯದರ್ಶಿ ಫಣೀಂದ್ರ ಸ್ವಾಗತಿಸಿದರು. ಗುರುಪ್ರಸಾದ್ ವಂದಿಸಿದರು. ಜನಾರ್ಧನ್ ನಿರೂಪಿಸಿದರು.

ಬಳಿಕ, ಸೂರ್ಯಗಾಯತ್ರಿ ಅವರು ಶಾಸ್ತ್ರೀಯ ಸಂಗೀತ ಪ್ರಸ್ತುತಪಡಿಸಿದರು. ಪಕ್ಕವಾದ್ಯದಲ್ಲಿ ಪಿಟೀಲು- ಪಿ.ವಿ. ಸುನೀಲ್ ಕುಮಾರ್, ಮೃದಂಗ- ಪಿ.ವಿ. ಅನಿಲ್ಕುಮಾರ್, ತಬಲ- ಜಗದೀಶ್ ಕುರ್ತುಕೋಟಿ, ರಿದಂ ಪ್ಯಾಡ್- ಪ್ರಣವ ದತ್ ಪಕ್ಕವಾದ್ಯದಲ್ಲಿ ಸಾಥ್ ನೀಡಿದರು.

ವಿಧಾನಪರಿಷತ್ ಮಾಜಿ ಸದಸ್ಯ ಗೋ. ಮಧುಸೂದನ್, ಒಂಟಿಕೊಪ್ಪಲು ಪ್ರಸನ್ನ ವಿದ್ಯಾಗಣಪತಿ ಸಮಿತಿಯ ಸಿ.ಆರ್. ಹಿಮಾಂಶು ಪಾಲ್ಗೊಂಡಿದ್ದರು. ಕೆಲ ವಿದೇಶಿಯರು ಕೂಡ ಪ್ರೇಕ್ಷಕರಾಗಿ ಭಾಗವಹಿಸಿದ್ದು ಗಮನಸೆಳೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.