ಮೈಸೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಹಾಗೂ ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘದ ಸಹಯೋಗದಲ್ಲಿ ಇಲ್ಲಿನ ಕಾಳಿದಾಸ ರಸ್ತೆಯ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ರಾಮಾನುಜಾಚಾರ್ಯರ ಜಯಂತಿಯನ್ನು ಬುಧವಾರ ಸಂಭ್ರಮದಿಂದ ಆಚರಿಸಲಾಯಿತು.

ಶಾಸಕ ಟಿ.ಎಸ್. ಶ್ರೀವತ್ಸ ಉದ್ಘಾಟಿಸಿ ಮಾತನಾಡಿ, ‘ಆಚಾರ್ಯರು ಅಸ್ಪೃಶ್ಯತೆ ನಿವಾರಣೆಗೆ ಶ್ರಮಿಸಿದರು. ಹಲವು ಸಾಮಾಜಿಕ ಕೊಡುಗೆಗಳನ್ನು ನೀಡಿದರು’ ಎಂದು ಸ್ಮರಿಸಿದರು.

ಮಹಾಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿ ನಂ. ಶ್ರೀಕಂಠಕುಮಾರ್, ‘ಆಚಾರ್ಯ ರಾಮಾನುಜರು ಸನಾತನ ಧರ್ಮ ಮತ್ತು ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸಿದ ಮಹಾನ್ ವ್ಯಕ್ತಿ’ ಎಂದರು.

ಜಿಲ್ಲಾ ಘಟಕದ ಅಧ್ಯಕ್ಷ ಡಿ.ಟಿ. ಪ್ರಕಾಶ್ ಮಾತನಾಡಿ, ‘ಆಚಾರ್ಯರು ಭಾರತೀಯ ಸನಾತನ ಸಂಸ್ಕೃತಿಗೆ ನೀಡಿದ ಕೊಡುಗೆ ಅನನ್ಯವಾದುದು. ಅವರು ರಚಿಸಿದ ಸ್ತೋತ್ರಗಳು ಮನುಕುಲಕ್ಕೆ ದಾರಿದೀಪವಾಗಿವೆ’ ಎಂದು ಹೇಳಿದರು.

ಜಿಲ್ಲಾ ಪ್ರತಿನಿಧಿ ಕೆ ವಿ ಲಕ್ಷ್ಮೀದೇವಿ, ದೇವಸ್ಥಾನದ ಯೋಗಾನರಸಿಂಹ (ಮುರಳಿ), ಕೆ.ಆರ್. ಸತ್ಯನಾರಾಯಣ, ಎಂ.ಆರ್. ಬಾಲಕೃಷ್ಣ, ಟಿ.ಎಸ್. ಅರುಣ್, ರಂಗನಾಥ್, ರಾಜಗೋಪಾಲ್, ಹರೀಶ್, ಕಲ್ಕೆರೆ ನಾಗರಾಜು, ಸುಧೀಂದ್ರ, ಭಾಷ್ಯಂ, ಶಾಂತಾ, ಸೌಭಾಗ್ಯ ಮೂರ್ತಿ, ಕಡಕೋಳ ಜಗದೀಶ್, ಚಕ್ರಪಾಣಿ, ಗೋಪಾಲ ರಾವ್, ಲತಾ ಬಾಲಕೃಷ್ಣ, ಜ್ಯೋತಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.