ಮೈಸೂರು: ‘ಶಂಕರಾಚಾರ್ಯರ ಜಯಂತಿಯ ಜೊತೆಯಲ್ಲೇ ರಾಮಾನುಜಾಚಾರ್ಯರ ಜಯಂತಿಯನ್ನೂ ಸರ್ಕಾರದಿಂದ ಆಚರಿಸಬೇಕು’ ಎಂದು ಒತ್ತಾಯಿಸಿ ಶಾಸಕ ಟಿ.ಎಸ್. ಶ್ರೀವತ್ಸ ನೇತೃತ್ವದಲ್ಲಿ ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯವರು ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು ಅವರಿಗೆ ಈಚೆಗೆ ಮನವಿ ಸಲ್ಲಿಸಿದರು.

‘ಭಕ್ತಿ ಸಿದ್ಧಾಂತದ ಮೂಲಕ ಸಮಾನತೆ ಸಾರುವ ಸಂದೇಶದೊಂದಿಗೆ ಕರ್ನಾಟಕದಲ್ಲಿದ್ದ ಎಲ್ಲಾ 58 ಜನಾಂಗದವರಿಗೂ ಮಂತ್ರ ಮತ್ತು ಸಂಸ್ಕಾರ ನೀಡಲು ಶ್ರಮಿಸಿದವರು ರಾಮಾನುಜಾಚಾರ್ಯರು. ರಾಜ ವಿಷ್ಣುವರ್ಧನನ ಮೂಲಕ ಹೊಯ್ಸಳವಂಶದ ಕಲಾಶೈಲಿಯನ್ನು ಭಾರತೀಯ ಇತಿಹಾಸ, ಪುರಾಣಗಳ, ಆಗಮಗಳ ದೃಶ್ಯ ಪರಂಪರೆಗೆ ಬಳಸಿ ಕರ್ನಾಟಕದ ಕೀರ್ತಿ ಪತಾಕೆ ಪ್ರಪಂಚದಾದ್ಯಂತ ವ್ಯಾಪಿಸಲು ಕಾರಣರಾದರಾದರು’ ಎಂದು ಹೇಳಿದರು.

‘ಮೈಸೂರು ಅರಸರ ಕಲೆ, ವಾಸ್ತುಶಿಲ್ಪ, ಸಾಹಿತ್ಯಗಳಿಗೆ ಪ್ರೇರಕರಾದರು. ಮೇಲುಕೋಟೆಯಲ್ಲಿ ದಾಸಪರಂಪರೆ ಹುಟ್ಟುಹಾಕಿ ಯತಿರಾಜದಾಸರ ಪರಂಪರೆ ಸ್ಥಾಪಿಸಿದರು. ಅವರ ಕೊಡುಗೆ ಪರಿಗಣಿಸಿ ರಾಜ್ಯ ಸರ್ಕಾರವು ಜಯಂತಿ ಆಚರಿಸುವ ಮೂಲಕ ಗೌರವಿಸಬೇಕು’ ಎಂದು ಕೋರಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಡಿ. ಸುದರ್ಶನ್, ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್, ವಿಪ್ರ ಮುಖಂಡರಾದ ನಂ.ಶ್ರೀಕಂಠಕುಮಾರ್,ಕೆ.ರಘುರಾಮ್ ವಾಜಪೇಯಿ, ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್, ನಿರೂಪಕ ಅಜಯ್ ಶಾಸ್ತ್ರಿ, ಎಂ.ಆರ್. ಬಾಲಕೃಷ್ಣ, ಹರೀಶ್, ಚಕ್ರಪಾಣಿ, ಸುಚೀಂದ್ರ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-39-1935532929

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.