ಮೈಸೂರು: ‘ತಾಲ್ಲೂಕಿನ ರಮ್ಮನಹಳ್ಳಿ ಸರ್ಕಾರಿ ಭೂಮಿಯನ್ನು ಅಂದಿನ ತಹಶೀಲ್ದಾರ್ ಹಾಗೂ ಕಂದಾಯ ನಿರೀಕ್ಷಕರು ಸೇರಿಕೊಂಡು ನಾಲ್ವರಿಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಸಾಮಾಜಿಕ ಹೋರಾಟಗಾರ ಅರವಿಂದ ಶರ್ಮ ಆಗ್ರಹಿಸಿದರು.

ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸರ್ವೆ ನಂಬರ್ 259/3 ರಲ್ಲಿರುವ ಮೂಲತಃ ನಂಜಯ್ಯ ಹಾಗೂ ಕೆಂಚಯ್ಯ ಅವರಿಗೆ ಸೇರಿದ 1.21 ಎಕರೆ ಜಮೀನನ್ನು ನರಸಿಂಹರಾಜ ಕ್ಷೇತ್ರದ ಬಡವರಿಗೆ ಮನೆ ಹಾಗೂ ನಿವೇಶನಕ್ಕಾಗಿ 2005ರಲ್ಲಿ ರಾಜ್ಯಪಾಲರ ಹೆಸರಿಗೆ ಪಾಲಿಕೆ ಖರೀದಿಸಿತ್ತು. ಕೆಂಚಯ್ಯ ಪುತ್ರಿ ಸುಂದ್ರಮ್ಮ ಜಮೀನು ಮಾರಾಟದ ವೇಳೆ ತಮ್ಮ ಸಹಿ ಪಡೆದಿಲ್ಲ ಎಂದು ನ್ಯಾಯಾಲಯದ ಮೊರೆ ಹೋಗಿದ್ದ ಕಾರಣ ಅವರಿಗೆ 10.08 ಗುಂಟೆ ವಾಪಸಿಗೆ ಸೂಚಿಸಲಾಗಿತ್ತು. ಆದರೆ ಅಂದಿನ ತಾಲ್ಲೂಕು ಕಚೇರಿ ಅಧಿಕಾರಿಗಳು ಅಕ್ರಮದಲ್ಲಿ ಶಾಮೀಲಾಗಿ ಮತ್ತೆ ಕೆಂಚಯ್ಯ ಹೆಸರಿಗೆ ಉಳಿಕೆ ಜಮೀನಿನ ಖಾತೆ ಮಾಡಿಕೊಟ್ಟಿದ್ದಾರೆ’ ಎಂದು ದೂರಿದರು.

‘ಕೆಂಚಯ್ಯ ಪತ್ನಿ ಚೌಡಮ್ಮ, ಪುತ್ರ ದೇವರಾಜು ಹಾಗೂ ಪುತ್ರಿ ಸುಂದ್ರಮ್ಮ ಅವರ ಹೆಸರಿಗೆ ಪೌತಿ ಖಾತೆ ಮಾಡಿಕೊಡಲಾಗಿದೆ. ಇವರಿಂದ ಹಂತ ಹಂತವಾಗಿ ಸೈಯ್ಯದ್ ಫೈಸಲ್, ಫಾಸಿಲ್ ಬೇಗ್, ವಹೀದ್ ಅಖ್ತರ್ ಖಾನ್ ಅವರಿಗೆ ಅಕ್ರಮವಾಗಿ ಇದೇ ಜಮೀನಿಗೆ ಕ್ರಯ ಮಾಡಿಕೊಡಲಾಗಿದೆ. ಈ ಹಿಂದೆ ಪಾಲಿಕೆ ರಮ್ಮನಹಳ್ಳಿ ಪಟ್ಟಣ ಪಂಚಾಯಿತಿಗೆ ಖಾತೆ ಮಾಡಿಕೊಡಬಾರದೆಂದು ಪತ್ರ ಬರೆದರೂ ನಿರ್ಲಕ್ಷಿಸಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸಬೇಕು. 10 ದಿನಗಳೊಳಗೆ ಕ್ರಮ ಕೈಗೊಳ್ಳದಿದ್ದಲ್ಲಿ ತಾಲ್ಲೂಕು ಪಂಚಾಯಿತಿ ಮುಂಭಾಗ ಪ್ರತಿಭಟಿಸಲಾಗುವುದು’ ಎಂದು ಎಚ್ಚರಿಸಿದರು.

ಗ್ರಾಮಸ್ಥರಾದ ಸುರೇಶ್, ಚಲುವಯ್ಯ, ಮಹದೇವ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-38-826061457

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.