ಮೈಸೂರು: ಕಲಾಮಂದಿರ ನಿರ್ಮಾಣ ಆಗುವವರೆಗೆ ಸಾಂಸ್ಕೃತಿಕ ನಗರಿಯ ನೃತ್ಯ, ನಾಟಕ, ಸಂಗೀತದ ಕಲಾತೇರನ್ನು ಎಳೆದದ್ದು ‘ರಂಗಾಚಾರ್ಲು ಪುರಭವನ’!; ಅಷ್ಟೇ ಸ್ವಾತಂತ್ರ್ಯಹೋರಾಟದ ನಂತರ ಮೈಸೂರು ಚಲೋ, ರೈತ, ದಸಂಸ, ಗೋಕಾಕ್ ಸೇರಿದಂತೆ ಚಳವಳಿಗಳಿಗೆ ಸಾಕ್ಷಿಯಾದ ಸ್ಮಾರಕ ಅವಜ್ಞೆಗೆ ಒಳಗಾಗಿದೆ.

ವೇದಿಕೆಯ ಬಲಭಾಗದ ಕಟ್ಟಡದ ಕಾರಿಡಾರ್ನ ಮರ ತೀರುಗಳಿಗೆ ಕಬ್ಬಿಣದ ಕಂಬಿಗಳು ಆಸರೆಯಾಗಿ ನಿಲ್ಲಿಸಲಾಗಿದೆ. ಅದರಿಂದ ಕಟ್ಟಡ ಉಸಿರಾಡುತ್ತಿದೆ. ಇದು ಕುಸಿದರೆ ಇಡೀ ಕಟ್ಟಡ ನಾಮಾವಶೇಷ ಆಗಲಿದೆ ಎಂಬ ಆತಂಕ ಉಂಟಾಗಿದೆ.

18ನೇ ಶತಮಾನದಲ್ಲಿ ದೊಡ್ಡಪೇಟೆ ಎಂದೇ ಕರೆಯಲಾಗುತ್ತಿದ್ದ ಅಶೋಕ ರಸ್ತೆಗೆ ಹೊಂದಿಕೊಂಡ ಜಾಗವಾದ ಕಲ್ಯಾಣಿ ಮೈದಾನದಲ್ಲಿ ಶಾಶ್ವತವಾದ ಥಿಯೇಟರ್ ಬೇಕೆಂದು ನಿರ್ಧರಿಸಿದ ಮೈಸೂರಿಗರು, ಬೆವರ ಹಣದಿಂದಲೇ ಕಟ್ಟಿಸಿದ ಭವನವಿದು. ಜನರ ನಿಧಿಗೆ ತಮ್ಮ ಕಾಣ್ಕೆ ಸೇರಿಸಿದ 10ನೇ ಚಾಮರಾಜ ಒಡೆಯರ್, ಏ.1, 1884ರಲ್ಲಿ ಶಿಲಾನ್ಯಾಸ ನೆರವೇರಿಸಿದ್ದರು. ಇಂಥ 142 ವರ್ಷದ ಐತಿಹಾಸಿಕ ಪಾರಂಪರಿಕ ಕಟ್ಟಡದ ಪುನರುಜ್ಜೀವನದ ಕಾರ್ಯ ವೇಗವಾಗಿ ಆಗಬೇಕಿದೆ.

‘ಶಿಥಿಲಗೊಂಡು ದಶಕವೇ ಆಗಿದೆ. ಮೈಸೂರಿನ ಹೆಗ್ಗುರುತಾದ ಇದನ್ನು ನೋಡಿಯೇ ಬೆಂಗಳೂರಿನ ಟೌನ್ಹಾಲ್ ನಿರ್ಮಾಣ ಗೊಂಡಿತು. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಬಂದು ನೋಡಿ ಹೋಗುತ್ತಾರಷ್ಟೇ. ಡಿಪಿಆರ್ ತಯಾರಿಸಲು ಪಾಲಿಕೆ ಮುಂದಾಗಿದೆ. ಆದರೆ, ವರ್ಷದಿಂದಲೂ ಯಾವುದೇ ಬೆಳವಣಿಗೆ ಆಗಿಲ್ಲ’ ಎನ್ನುತ್ತಾರೆ ಇತಿಹಾಸ ತಜ್ಞ ಪ್ರೊ.ಎನ್.ಎಸ್.ರಂಗರಾಜು.

‘ಮಹಾತ್ಮ ಗಾಂಧೀಜಿ, ರವೀಂದ್ರನಾಥ ಟ್ಯಾಗೋರ್ ಇಲ್ಲಿಗೆ ಎರಡು ಬಾರಿ ಬಂದಿದ್ದರು. ಟ್ಯಾಗೋರ್ ‘ದೇವಿ ಭುವನ ಮನಮೋಹಿನಿ’ ಹಾಡಿದ್ದರು. ಗುಬ್ಬಿ ವೀರಣ್ಣ, ಸುಬ್ಬಯ್ಯ ನಾಯ್ಡು, ರಾಜ್ಕುಮಾರ್, ಪೃಥ್ವಿರಾಜ್ ಕಪೂರ್ ಇಲ್ಲಿ ನಾಟಕವಾಡಿದ್ದಾರೆ. ಪೃಥ್ವಿರಾಜ್ ಅವರು ಕನ್ನಡ ನಾಟಕ ಆಡುತ್ತಿಲ್ಲವೆಂದು ಮೈಸೂರಿಗರು ವಿರೋಧಿಸಿದ್ದರು. ನಾಟಕದ ಪ್ರದರ್ಶನದ ನಂತರ ಜನರು ಕ್ಷಮಾಪಣೆ ಕೇಳಿದರು. ಸತತ 9 ದಿನ ನಾಟಕೋತ್ಸವ ಆಯೋಜಿಸಿದ್ದರು’ ಎಂದರು.

ಅಲಕ್ಷ್ಯ: ಹೂದೋಟದಿಂದ ಕಂಗೊಳಿಸುತ್ತಿದ್ದ ಆವರಣ, ಮೂತ್ರ ವಿಸರ್ಜನೆಯ ತಾಣವಾಗಿದೆ. ರಸ್ತೆ, ಅಕ್ಕಪಕ್ಕದ ಕಟ್ಟಡ ಕಾಮಗಾರಿಗಳಿಗೆ ಬೇಕಾದ ಜಲ್ಲಿ, ಮರಳು ಸುರಿಯುವ ಸ್ಥಳವಾಗಿ ಬದಲಾಗಿದೆ. ‘ಶಾಂತಿವನ’ ಕರೆಯಲಾಗುತ್ತಿದ್ದ ಭಾಗದಲ್ಲಿ ‘ಪಾರಂಪರಿಕ ಶೌಚಾಲಯ’ ಪಾಲಿಕೆ ಕಟ್ಟಿದ್ದು, ಅದರ ಹಿಂಭಾಗ ಅನೈರ್ಮಲ್ಯ ತಾಂಡವವಾಡುತ್ತಿದೆ. ಕೆಲವರು ಪಾರ್ಕಿಂಗ್ ತಾಣವನ್ನಾಗಿ ಮಾಡಿಕೊಂಡಿದ್ದಾರೆ. ಹೊಸದಾಗಿ ನಿರ್ಮಾಣ ಮಾಡಿರುವ ಬಯಲು ರಂಗಮಂದಿರ ಪ್ರಯೋಜನಕ್ಕೆ ಬಾರದಾಗಿದೆ.

ರಂಗಾಚಾರ್ಲು ನೆನಪಿನ ಸ್ಮಾರಕ

1881ರಲ್ಲಿ ಬ್ರಿಟಿಷರು, ಸಂಸ್ಥಾನವನ್ನು ಒಡೆಯರ್ ಅವರಿಗೆ ಒಪ್ಪಿಸಿದಾಗ, 10ನೇ ಚಾಮರಾಜ ಒಡೆಯರ್ ಅವರಿಗೆ ದಿವಾನರಾಗಿ ರಂಗಾಚಾರ್ಲು ನಿಯುಕ್ತಿಯಾದರು. ಭೀಕರ ಬರಗಾಲದಿಂದಾಗಿ ಸಂಸ್ಥಾನಕ್ಕೆ ₹ 8 ಲಕ್ಷ ಸಾಲವಿತ್ತು. ಅದರಿಂದ ಪಾರು ಮಾಡಿದವರು ರಂಗಾಚಾರ್ಲು. ಆಳಿದ 22 ತಿಂಗಳಲ್ಲಿ ಆಡಳಿತ ಸುಧಾರಣೆಯ ಜೊತೆಗೆ ಪ್ರಜಾಪ್ರತಿನಿಧಿ ಸಭೆ ಸ್ಥಾಪಿಸಿದರು. ರೈಲ್ವೆ ಜಾಲ ವಿಸ್ತರಿಸಿದರು. 1882ರ ವರ್ಷಾಂತ್ಯದಲ್ಲಿ ತೀವ್ರ ಅನಾರೋಗ್ಯ ಕಾರಣ ರಾಜೀನಾಮೆ ನೀಡಿ ಮದ್ರಾಸ್ಗೆ ತೆರಳಿದರು. 1883ರ ಜ.20ರಂದು ನಿಧನರಾದರು. ಜನರು ಹಾಗೂ ಚಾಮರಾಜ ಒಡೆಯರ್ ಅವರು ದಿವಾನರ ನೆನಪಿನಲ್ಲಿ ಕಟ್ಟಿಸಿದ್ದೇ ರಂಗಾಚಾರ್ಲು ಪುರಭವನ!

ನಾಲ್ವಡಿ ಕೃಷ್ಣರಾಜ ಒಡೆಯರ್ ಹುಟ್ಟಿದ ವರ್ಷವಾದ 1884ರಲ್ಲಿಯೇ ಪುರಭವನ ನಿರ್ಮಾಣ ಕಾಮಗಾರಿ ಆರಂಭವಾಯಿತು. ಪುಟಾಣಿ ನಾಲ್ವಡಿ ಅವರೊಂದಿಗೆ ನಾಟಕ ನೋಡಲು ಚಾಮರಾಜೇಂದ್ರ ಒಡೆಯರ್ ಅವರು ಬರುತ್ತಿದ್ದರಂತೆ. ಹೀಗಾಗಿಯೇ, ಮುಂದೆ ಕಲೆ– ಸಂಸ್ಕೃತಿಗೆ ಅಪಾರ ಪ್ರೋತ್ಸಾಹವನ್ನು ಅವರು ನೀಡಿದರು. ಗುಬ್ಬಿ ವೀರಣ್ಣನವರ ನಾಟಕದ ಅಭಿನಯ ನೋಡಿ ಆನೆ ಹಾಗೂ ‘ವರ್ಸಟೈಲ್ ಕಾಮಿಡಿಯನ್’ ಎಂಬ ಬಿರುದನ್ನು ವೀರಣ್ಣ ಅವರಿಗೆ ಕೊಟ್ಟಿದ್ದರು.

ಮಸುಕಾದ ಭವ್ಯ ಒಳಾಂಗಣ

ಪುರಭವನದ ಒಳಾಂಗಣ ಭವ್ಯವಾಗಿತ್ತು. ‘ಸುರುಳಿ ಸುತ್ತುವ ಚಿತ್ರಿತ ಜಾರು ಪರದೆಗಳಿರುವುದು ರಾಜ್ಯದಲ್ಲಿ ಇದೊಂದೇ ರಂಗಮಂದಿರದಲ್ಲಿ ಮಾತ್ರ’ ಎಂಬ ಶ್ರೇಯಕ್ಕೆ ಪಾತ್ರವಾಗಿತ್ತು. 1988 ಹಾಗೂ 2003–04ರಲ್ಲಿ ಪುನರ್ನವೀಕರಣಗೊಂಡು ಆಸನ, ಧ್ವನಿ ವ್ಯವಸ್ಥೆಯಲ್ಲಿ ಸುಧಾರಣೆ ಕಂಡರೂ ಮೊದಲಿದ್ದ ವೈಭವ ಈಗಿಲ್ಲ.

ಏನೇನಿತ್ತು?: ಭವನದ 22 ಅಡಿ ಅಗಲ ಹಾಗೂ 27 ಅಡಿ ಆಳವಿರುವ ಮರದ ರಂಗಸ್ಥಳದಲ್ಲಿ 8 ಜೊತೆ ಸೈಡ್ ವಿಂಗ್ಗಳು, 5 ತೋರಣಗಳಿದ್ದವು. ಬಿದಿರಿನ ಅಟ್ಟಣಿಗೆಗಳು, 5 ಅಡಿ ವಿಂಗ್ಸ್ ಸ್ಪೇಸ್ ಎರಡು ಗ್ರೀನ್ ರೂಂಗಳಿದ್ದವು. ಒಂದು ನೆಲಮಾಳಿಗೆಯಲ್ಲಿ ಬಾಗಿಲಿತ್ತು. ಈಗದನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ.

ರಂಗಭೂಮಿಯ ಶತಮಾನೋತ್ಸವಕ್ಕೆ ಸಾಕ್ಷಿ: ‘ಕನ್ನಡ ರಂಗಭೂಮಿಗೆ ಶತಮಾನ ಎಂಬ ಕಾರ್ಯಕ್ರಮ 40ರ ದಶಕದಲ್ಲಿ ಪುರಭವನದಲ್ಲಿ ನಡೆದಿತ್ತು. ಜಯಚಾಮರಾಜೇಂದ್ರ ಒಡೆಯರ್, ಸಿ.ರಾಜಗೋಪಾಲಚಾರಿ, ಆರ್ಕಾಟ್ ರಾಮಸ್ವಾಮಿ ಮೊದಲಿಯಾರ್, ಅಂಬಳೆ ವಿ.ಸುಬ್ರಹ್ಮಣ್ಯ ಅಯ್ಯರ್, ಗುಬ್ಬಿ ವೀರಣ್ಣ, ಕೆ.ನಂದಿಬಸಪ್ಪ, ಎಂ.ಸಿ.ಮಹದೇಸ್ವಾಮಿಯಂಥ ದಿಗ್ಗಜರು ಹಾಜರಿದ್ದರು’ ಎಂಬುದನ್ನು ಇತಿಹಾಸ ತಜ್ಞ ಈಚನೂರು ಕುಮಾರ್ ದಾಖಲಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-39-1269543222

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.