ಮೈಸೂರು: ರಂಗಾಯಣದ 22ನೇ ಚಿಣ್ಣರ ಮೇಳ ಏಪ್ರಿಲ್ 14ರಿಂದ ಮೇ 10ರ ವರೆಗೆ ನಡೆಯಲಿದ್ದು, ಏ.5ರಂದು ಭಾನುವಾರ ಬೆಳಿಗ್ಗೆ 10ಕ್ಕೆ ಸಂಸ್ಥೆಯ ಕಚೇರಿ ಆವರಣದಲ್ಲಿ 250 ಅರ್ಜಿಗಳ ವಿತರಣೆಯು ನಡೆಯಲಿದೆ.

2026ರ ಮಾರ್ಚ್ 31ಕ್ಕೆ 7 ವರ್ಷ ತುಂಬಿದ 15 ವರ್ಷ ಮೀರಿರದ ಮಕ್ಕಳಿಗೆ ಮಾತ್ರ ಪ್ರವೇಶ ಇರಲಿದ್ದು, ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು. ಅರ್ಜಿ ಶುಲ್ಕ ₹ 100 ಆಗಿದ್ದು, ಭರ್ತಿ ಮಾಡಿ ಏ.9ರಂದು ಸಂಜೆ 5ರೊಳಗೆ ಸಲ್ಲಿಸಬೇಕು. ಪ್ರವೇಶ ಶುಲ್ಕ ₹ 4 ಸಾವಿರ ಆಗಿದ್ದು, ‘ಉಪನಿರ್ದೇಶಕರು, ರಂಗಾಯಣ’ ಹೆಸರಿನಲ್ಲಿ ಡಿ.ಡಿ ತೆಗೆದು ಅರ್ಜಿ ಜೊತೆ ಲಗತ್ತಿಸಬೇಕು.

ಆಧಾರ್ ಕಾರ್ಡ್, ಜನನ ಪ್ರಮಾಣ ಪತ್ರಗಳೂ ಇರಬೇಕು. ಅರ್ಜಿಗಾಗಿ ಸಾಲಿನಲ್ಲಿ ನಿಂತವರು ಅರ್ಜಿಯಲ್ಲಿ ಮತ್ತು ರಸೀದಿಯಲ್ಲಿ ಕಡ್ಡಾಯವಾಗಿ ಮಗುವಿನ ಹೆಸರು ಬರೆಸಬೇಕು. ಭರ್ತಿ ಮಾಡಿದ ಅರ್ಜಿಯನ್ನು ರಸೀದಿ ಜೊತೆಯೆ ಮರಳಿಸಬೇಕು ಎಂದು ರಂಗಾಯಣ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260404-39-486048890

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.