ಮೈಸೂರು: ಇಲ್ಲಿನ ರಂಗಾಯಣದಲ್ಲಿ 22ನೇ ಚಿಣ್ಣರ ಮೇಳ ಏ.14ರಿಂದ ಮೇ 10ರವರೆಗೆ ನಡೆಯಲಿದ್ದು, ಭಾನುವಾರ ಅರ್ಜಿಗಳ ವಿತರಣೆ ನಡೆಯಿತು.

ಪೋಷಕರು ಅರ್ಜಿಗಾಗಿ ಶನಿವಾರ ರಾತ್ರಿ 8ರಿಂದಲೇ ಸರದಿಯಲ್ಲಿ ಕಾದು ಕುಳಿತರು. ವಿತರಣೆ ಆರಂಭವಾದ ಒಂದೂವರೆ ಗಂಟೆಯಲ್ಲೇ ಅರ್ಜಿಗಳು ಬಿಕರಿಯಾದವು.

ಪಾಳಿಯಲ್ಲಿ ನಿಂತ ತಂದೆ– ತಾಯಿ, ಬಂಧುಗಳು, ಸ್ನೇಹಿತರು ಅರ್ಜಿ ಸಿಕ್ಕ ಖುಷಿಯಲ್ಲಿ ಸಂಭ್ರಮಿಸಿದರು.

ಮೊದಲು ಬಂದ ಪಾಲಕರು, ಮಗುವಿನ ಹೆಸರು ಬರೆದುಕೊಂಡಿದ್ದರು. ಹಲವರು ಮಕ್ಕಳಿಗಲ್ಲದೆ ಸ್ನೇಹಿತರ ಮಕ್ಕಳು, ಮೊಮ್ಮಕ್ಕಳಿಗೆ ಅರ್ಜಿ ಕೊಡಿಸಲು ಸಾಲಿನಲ್ಲಿ ನಿಂತು ಸ್ನೇಹ–ವಾತ್ಸಲ್ಯ ಸಾಬೀತು ಮಾಡಿದರು.

ಬೆಳಿಗ್ಗೆ 6ರ ನಂತರ ಬಂದವರು ನಿರಾಸೆ ಅನುಭವಿಸಿದರು. ಆಗಲೇ 250 ಮಂದಿ ಮುಂದಿದ್ದರು. ಬೆಳಿಗ್ಗೆ 10ಕ್ಕೆ ಆರಂಭವಾದ ಅರ್ಜಿ ವಿತರಣೆ 11.30ಕ್ಕೆ ಮುಗಿದಿತ್ತು. ಅರ್ಜಿ ಶುಲ್ಕ ₹ 100. ಏ.9ರಂದು ಸಂಜೆ 5ರೊಳಗೆ ‘ಉಪನಿರ್ದೇಶಕರು, ರಂಗಾಯಣ’ ಹೆಸರಿನಲ್ಲಿ ಡಿ.ಡಿ ಜೊತೆಗೂಡಿ ಸಲ್ಲಿಸಬೇಕು. ಪ್ರವೇಶ ಶುಲ್ಕ ₹ 4 ಸಾವಿರ.

ವಿತರಣೆ ಪಾರದರ್ಶಕ: ‘ಅರ್ಜಿ ವಿತರಣೆ ಪಾರದರ್ಶಕವಾಗಿ ನಡೆಸಲಾಗಿದೆ. ರೆಪರ್ಟರಿ ಹಾಗೂ ಭಾರತೀಯ ರಂಗಶಿಕ್ಷಣದ ಕಲಾವಿದರು ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಲಿದ್ದಾರೆ’ ಎಂದು ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಮೇಳದ ಉದ್ಘಾಟನೆ ಏ.14ರಂದು ನಡೆಯಲಿದ್ದು, ಅಂದು ಪೋಷಕರ ಜೊತೆ ಸಭೆ ಇರಲಿದೆ. ‘ಎಲ್ಲರನ್ನೂ ಒಳಗೊಂಡು ನಾಟಕ ಕಟ್ಟುವಂತೆಯೇ ಶಿಬಿರವನ್ನು ವಿನ್ಯಾಸ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

‘ಇದು ಚಿಣ್ಣರ ಮೇಳ, ಬೇಸಿಗೆ ಶಿಬಿರವಲ್ಲ ಎಂಬ ಎಚ್ಚರವಿದೆ. ಮಕ್ಕಳ ವ್ಯಕ್ತಿತ್ವ ವಿಕಸನ ಹಾಗೂ ಜೀವನಾನುಭವ ದಕ್ಕಿಸಿಕೊಡಲು ರಂಗಾಯಣ ಶ್ರಮಿಸಲಿದೆ. ಅಕ್ಕಿ, ಬಟ್ಟೆ ಎಷ್ಟು ಶ್ರಮಜೀವಿಗಳ ಬೆವರೆಂಬುದು ಎಷ್ಟೋ ಮಕ್ಕಳ ಅನುಭವಕ್ಕೆ ಬಂದಿರುವುದಿಲ್ಲ. ಮೊಬೈಲ್ ಜಗತ್ತಿನಲ್ಲಿ ಮುಳುಗಿರುವ ಅವರಿಗೆ ಮಣ್ಣಿನ ಸಂಬಂಧ, ಅದರ ಕಂಪಿನ ಆಸ್ವಾದದ ಬಗೆ ತಿಳಿಸಲಾಗುವುದು’ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260406-40-553729008

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.