ಮೈಸೂರು: ಇಲ್ಲಿನ ರಂಗಾಯಣದಲ್ಲಿ ಭಾನುವಾರ ಮುಕ್ತಾಯಗೊಂಡ 22ನೇ ಚಿಣ್ಣರ ಮೇಳದಲ್ಲಿ ಚಿಣ್ಣರ ಕೌಶಲ ಮತ್ತು ಅಭಿವ್ಯಕ್ತಿ ಅನಾವರಣಗೊಂಡಿತ್ತು. ‘ವಿಶ್ವ ತಾಯಂದಿರ ದಿನ’ ಆದ್ದರಿಂದ ಸಂಭ್ರಮ ಮುಗಿಲು ಮುಟ್ಟಿತ್ತು.

ಬೆಳಿಗ್ಗೆ ನಡೆದ ‘ಮಕ್ಕಳ ಸಂತೆ’ಯಲ್ಲಿ ತಮ್ಮ ಮಕ್ಕಳ ಪುಟಾಣಿ ಕೈಗಳಿಂದ ಮಾಡಿದ್ದ ತರಾವರಿ ತಿನಿಸುಗಳ ರುಚಿ ಸವಿದ ಪೋಷಕರು, ತಯಾರಿಸಿದ್ದ ವಸ್ತುಗಳಿಗೆ ಗ್ರಾಹಕರಾದರು. ನಂತರ ನಡೆದ ನೀರಿನಾಟದಲ್ಲಿ ಮಕ್ಕಳು ಕುಣಿದು ಕುಪ್ಪಳಿಸಿದರು.

ರೆಪರ್ಟರಿ ಹಾಗೂ ಭಾರತೀಯ ರಂಗಶಿಕ್ಷಣದ ಕಲಾವಿದರು ಮಂತ್ರವಾದಿಗಳ ವೇಷ ಧರಿಸಿ ವ್ಯಾಪಾರ ಮಾಡದೇ ಕುಳಿತಿದ್ದ ಪುಟಾಣಿಗಳಿಗೆ ಗದರಿದರೆ, ಜೋಕರ್ ವೇಷ ಧರಿಸಿದ್ದವರು ಗ್ರಾಹಕರನ್ನು ನಕ್ಕು ನಲಿಸಿದರು. ಪೋಷಕರೇ, ‘ಹಣ್ಣಿನ ಜ್ಯೂಸ್ ಕೊಳ್ಳಿರಿ’, ‘ಗಿಣಿ ಮಾವಿನ ಕಾಯಿ ಸವಿಯಿರಿ’ ಎಂದು ಮಕ್ಕಳೊಂದಿಗೆ ಕೂಗುತ್ತಿದ್ದರು.

ಪಾಯಸ, ರೊಟ್ಟಿ, ವಿವಿಧ ವಡೆ, ಪಾನಿ ಪುರಿ, ಚಕ್ಲಿ, ನಿಪ್ಪಟ್ಟು, ಕೋಡು ಬಳೆ ವ್ಯಾಪಾರದ ಜೊತೆ ಬ್ರೆಡ್ ಬರ್ಗರ್, ಕೇಕ್ ಅನ್ನು ಸವಿಯಲು ಒತ್ತಾಯಿಸಿದರು. ‘ಬಿಸಿಲಿಗೆ ಸುಸ್ತಾಗಿದ್ದೀರಾ ಅಂಕಲ್, ಬನ್ನಿ ನಮ್ಮ ತಂಪಾದ ಮಜ್ಜಿಗೆ ಕುಡಿಯಿರಿ’ ಇಲ್ಲವೇ ‘ಕಾಮಕಸ್ತೂರಿ ಬೀಜ, ಸಬ್ಜಾ ಬೀಜದಿಂದ ಮಾಡಿದ ಜ್ಯೂಸ್ ಕುಡಿಯಿರಿ, ಕಾಳು ತಿನ್ನಿರಿ’ ಎಂದು ನೀಡಿ ₹ 10ರಿಂದ ₹ 20 ಪಡೆಯುತ್ತಿದ್ದರು. ಆಲೂಗಡ್ಡೆ, ಪಾನಿಪುರಿ ತಿನ್ನಿಸಿ ಮೆಚ್ಚಿಸಿಕೊಂಡರು. ಬಲೂನುಗಳನ್ನು ಮಾರಿ ರೂಪಾಯಿಯನ್ನು ಜೇಬಿಗಿಳಿಸಿದರು.

ಅಜ್ಜಿ ಮಾಡಿದ ಕಸೂತಿ, ಕಡಲೇ ಮಿಟಾಯಿ, ಬೆಲ್ಲದ ಮಿಟಾಯಿ, ಖಾರಾಸೇವ್, ಆಟಿಕೆಗಳು ಸೇರಿದಂತೆ ಎಲ್ಲ ವಸ್ತುಗಳು ಇಲ್ಲಿ ಸಿಕ್ಕವು. ಕೊತ್ತಂಬರಿ, ಕರಿಬೇವು ಸೊಪ್ಪು ಮಾರುಕಟ್ಟೆಗಿಂತ ಇಲ್ಲಿ ₹ 5 ಹೆಚ್ಚಿತ್ತು. ಈರುಳ್ಳಿ, ಟಮೊಟೊ, ಬೆಳ್ಳುಳ್ಳಿ, ಆಲೂಗಡ್ಡೆ ಸೇರಿದಂತೆ ಎಲ್ಲ ತರಕಾರಿ, ಆಯ್ದ ದಿನಸಿ ಲಭ್ಯವಿತ್ತು.

ಹಾಡುಗಳು: ಧನಂಜಯ್, ಯತೀಶ್ ಕೊಳ್ಳೇಗಾಲ ಸೇರಿದಂತೆ ರೆಪರ್ಟರಿ ಶಿಕ್ಷಕರು ಹಾಡಿದ ರಂಗಗೀತೆಗಳು, ಜಾನಪದ ಗೀತೆಗಳಿಗೆ ಮಕ್ಕಳು ಕುಣಿದರು. ಕಡೇದಿನವಾದ್ದರಿಂದ ನೀರಿನೋಕುಳಿ ಆಟದಲ್ಲಿ ಚಿಣ್ಣರು ನಲಿದರು. ಟ್ಯಾಂಕರ್ನಲ್ಲಿ ತಂದ ನೀರನ್ನು ಕಡಾಯಿಗಳಲ್ಲಿ ತುಂಬಿಲಾಯಿತು. ಚಿಣ್ಣರು ಮಗ್ಗುಗಳಲ್ಲಿ ನೀರಿನ್ನೆರಚಾಡಿ ನಲಿದರು.

ಮಣ್ಣಿನ ಗೊಂಬೆ, ಚಿತ್ತ ಭಿತ್ತಿ

ಮಣ್ಣಿನಲ್ಲಿ ಮಾಡಿದ ಗೊಂಬೆಗಳು, ಮನೆಗಳು, ಕೋಟೆಗಳ ದಿಬ್ಬವೇ ಆವರಣದಲ್ಲಿ ಸೃಷ್ಟಿಯಾಗಿತ್ತು. ಬಿ.ವಿ.ಕಾರಂತ ರಂಗಚಾವಡಿಯಲ್ಲಿ ಮಕ್ಕಳು ಬರೆದ ಚಿತ್ರಪಟಗಳ ಪ್ರದರ್ಶನವಿತ್ತು.

ಹಳೆ ಬಟ್ಟೆಗಳಲ್ಲಿ ಹೆಣೆದ ‘ಮ್ಯಾಟ್’ಗಳು, ಕಸೂತಿ ಕಲೆಯ ದರ್ಶನವೂ ಪೋಷಕರಿಗೆ ಆಯಿತು. ಮುಖಕ್ಕೆ ಚಿತ್ರ ಬರೆದುಕೊಂಡು ಹಣವನ್ನು ವಸೂಲು ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.